BJP IS DOING ELECTION GIMMICK: ಎಂಟು ವರ್ಷ ಅಧಿಕಾರದಲ್ಲಿದ್ದಾಗ ಪ್ರಕರಣವನ್ನು ಯಾಕೆ ಹಿಂದಕ್ಕೆ ಪಡೆದಿಲ್ಲ..?: ಕೇಂದ್ರ ಸಚಿವರ ಜೋಷಿ ಕೈವಾಡ: ಜಗದೀಶ್ ಶೆಟ್ಟರ್ ಆರೋಪ

ಹುಬ್ಬಳ್ಳಿ : ಏಳೆಂಟು ವರ್ಷದಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಕರ ಸೇವಕ ಪ್ರಕರಣವನ್ನು ಯಾಕೆ ಹಿಂದಕ್ಕೆ ಪಡೆಯಲಿಲ್ಲ ಎಂದು ಬಿಜೆಪಿ ವಿರುದ್ಧ ಚಾಟಿ ಬೀಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈವಾಡ ಇದೆ ಎಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, 30 ವರ್ಷದ ಪ್ರಕರಣವಾಗಿದ್ದರಿಂದ ಪರಿಷ್ಕರಿಸಿ ವಿತ್ ಡ್ರಾ ಮಾಡಬೇಕು. ನಾನು ಹಿಂದೆಯೂ ಪ್ರಯತ್ನಿಸಿದ್ದೆ, ಆದರೆ ಆಗಿರಲಿಲ್ಲ ಎಂದು ತಿಳಿಸಿದರು.
ಈಗ ಹೋರಾಟ ಮಾಡುವವರು ಕರ ಸೇವಕರ ಮೇಲಿನ ಕೇಸ್ ವಾಪಸ್ ಪಡೆಯೋ ಪ್ರಯತ್ನ ಅಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ ಶೆಟ್ಟರ್. ಅಶೋಕ್ ಹೋಮ್ ಮಿನಿಸ್ಟರ್ ಆಗಿದ್ದರು, ಅವರು ಇಂದು ಹೋರಾಟ ಮಾಡುತ್ತಿದ್ದಾರೆ ಅಂದು ಯಾಕೆ ವಾಪಸ್ ಪಡೆಯಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲೋಕೆ ಬಿಜೆಪಿ ಪ್ಲಾನ್ ಮಾಡುತ್ತಿದ್ದು, ಈ ಪ್ರಕರಣದ ಹಿಂದೆ ಪ್ರಹ್ಲಾದ್ ಜೋಶಿ ಕೈವಾಡ ಇದೆ, ಚುನಾವಣೆ ಗಿಮಿಕ್ ಇದೆಲ್ಲ, ಸರ್ಕಾರದ ನಿರ್ದೇಶನದಲ್ಲಿ ಬಂಧನವಾಗಿಲ್ಲ. ಆ ರೀತಿಯಲ್ಲಿ ಮಾಡೋದೇ ನಿಮ್ಮ ಉದ್ದೇಶ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಧಾರ್ಮಿಕ ವಿಚಾರಗಳ ಮೇಲೆ ಅಧಿಕಾರಕ್ಕೆ ಬರುತ್ತೇವೆ ಅಂದರೆ ಅದು ಭ್ರಮೆ ಎಂದು ಕಿಡಿಕಾರಿದ ಶೆಟ್ಟರ್, ಕಳೆದ ವಿಧಾನ ಸಭೆ ಚುನಾವಣೆಯಲ್ಲಿಯೇ ಭಾವನಾತ್ಮಕ ವಿಚಾರಗಳಿಗೆ ಕೈ ಹಾಕಿ ಬಿಜೆಪಿ ಕೈಸುಟ್ಟುಕೊಂಡಿತ್ತು. ಈಗಲೂ ಅವರು ಏನೇ ಭಾವನಾತ್ಮಕ ವಿಚಾರ ಮಾಡೋಕೆ ಹೋದ್ರು ಲಾಭ ಹಾಗಲ್ಲ ಎಂದರು.


ಅಯ್ಯೋದೇ ರಾಮ ಮಂದಿರಕ್ಕೆ ಆಹ್ವಾನ ಇಲ್ಲದಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಕರೀರಿ ಅಂತ ಎಲ್ಲೂ ಹೇಳಿಲ್ಲ. ನನ್ನನ್ನು ಕರೀರಿ ಅಂತಾನೂ ಕೇಳಿಲ್ಲ‌‌ ಎಂದರು.
ಸಂವಿಧಾನಿಕ ಹುದ್ದೆಯಲ್ಲಿದ್ದವರ ಬಗ್ಗೆ ಅಸಂಸದೀಯ ಪದ ಬಳಸಿ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದ ವರು, ಒಂದು ವೇಳೆ ಪ್ರಧಾನಿ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆಗುತ್ತೆ, ಕೀಳು ಮಟ್ಟದ ಪದ ಬಲಿಸಿದ್ರೆ ಹೇಗೆ..? ನೀವು ರಾಜಕಾರಣಿ ಅನ್ನೋಕೆ ನಾಚಿಕೆ ಆಗುತ್ತೆ ಎಂದು ಬಿಜೆಪಿ ಮುಖಂಡರ ವಿರುದ್ದ ಕಿಡಿಕಾರಿದರು.

More News