KN Rajanna: ಸಭೆಯಲ್ಲಿ ನಡೆದ ಚರ್ಚೆ ಎಲ್ಲಾ ಹೇಳೋಕೆ ಈಗ ಕಾಲ ಪಕ್ವ ಆಗಿಲ್ಲ..!?: ಕೆ ಎನ್ ರಾಜಣ್ಣ

ಕೆಲವು ಹೇಳುವಂತದ್ದು ಇವೆ. ಕೆಲವು ಹೇಳದೇ ಇರುವಂತವೂ ಇದ್ದಾವೆ. ಹೇಳಬೇಕಾದಂತವ್ನ ನಾವು ಹೇಳುತ್ತೇವೆ. ಕೆಲವು ಹೇಳುವಂತವನ್ನ ಹೇಳೋಕೆ ಕಾಲ ಈಗ ಪಕ್ವ ಆಗಿಲ್ಲ. ಆದ್ರೆ ಹೈಕಮಾಂಡ್ ಭೇಟಿ ಮಾಡ್ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಕೆಎನ್ ರಾಜಣ್ಣ ಹೇಳಿಕೆ ನೀಡಿದ್ದು, ಕಾಂಗ್ರೆಸ್ ನಲ್ಲಿ ಡಿಸಿಎಂ ಗದ್ದಲ ಮತ್ತೇ ಚುರುಕು ಪಡೆದಿದೆ.

ಸತೀಶ್ ಜಾರಕಿಹೊಳಿ‌ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ,
ಊಟದಲ್ಲಿ ಏನು ವಿಶೇಷತೆ ಇರುತ್ತಪ್ಪಾ..? ಈಗ ಮೆನುನೂ ಚರ್ಚೆ ಆಗಿದೆ ಬೇರೆನೂ ಚರ್ಚೆ ಆಗಿದೆ.‌
ಕೆಲವು ಹೇಳುವಂತದ್ದು ಇವೆ ಕೆಲವು ಹೇಳದೇ ಇರುವಂತವೂ ಇದ್ದಾವೆ. ಹೇಳಬೇಕಾದಂತವ್ನ ನಾವು ಹೇಳುತ್ತೇವೆ. ಕೆಲವು ಹೇಳುವಂತವನ್ನ ಹೇಳೋಕೆ ಕಾಲ ಈಗ ಪಕ್ವ ಆಗಿಲ್ಲ. ರಾಜಕಾರಣ ಏನೇನೋ ಮಾತಾಡಿರ್ತಿವಿ ಅವು ಹೇಳದೇ ಇರುವಂತವು. ಸೂಕ್ತ ಕಾಲದಲ್ಲಿ ಅವೆಲ್ಲವನ್ನ ಹೇಳುತ್ತೇವೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.

ಮೂರು ಜನ ಡಿಸಿಎಂ ಮಾಡುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಹೈ ಕಮಾಂಡ್ ಭೇಟಿ ಮಾಡುವ ಅಭಿಪ್ರಾಯ ಮೂಡಿದೆ. ಒಟ್ಟಿಗೆ ಎಲ್ಲರೂ ಹೋಗೋಣ ಅಂತ ಚರ್ಚೆ ಮಾಡಿದ್ದೇವೆ..ಯಾವಾಗ ಹೋಗೋದು..? ಸುರ್ಜೇವಾಲ ಅಮೆರಿಕಾದಲ್ಲಿ ಇದ್ದಾರೆ. ಅವರು ಬಂದ ಮೇಲೆ ಅವರ ಅಪಾಯ್ಟ್ ಮೆಂಟ್ ತೆಗೆದುಕೊಂಡು ಹೋಗಬೇಕು ಅಂತ ಅಭಿಪ್ರಾಯ ಮೂಡಿದೆ ಎಂದರು. ಸಮುದಾಯವಾರು ಡಿಸಿಎಂ ಲೋಕಸಭೆ ಗೆ ಅನುಕೂಲ ಎಂಬ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಲಾಭ ಆಗುತ್ತದೆ ಅನ್ನೋ ದೃಷ್ಟಿಯಿಂದ ಸಮುದಾಯವಾರು ಡಿಸಿಎಂ ಮಾಡಬೇಕು ಅಂತ ಹೈಕಮಾಂಡ್ ಗೆ ಸಲಹೆ ಕೊಟ್ಟಿದ್ದೇವೆ. ತೀರ್ಮಾನ ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ
ಅವರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ಒಪ್ಪಿಗೆ ಇದೆ. ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ಹೇಳಲು ನಾವು ಬದ್ದರಾಗಿದ್ದೇವೆ ಎಂದರು.

ಇನ್ನು ಡಿಸಿಎಂ ಒಬ್ಬರೇ ಇರಬೇಕು ಎಂಬ ಡಿಕೆ ಶಿವಕುಮಾರ್ ಅಭಿಪ್ರಾಯದ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಡಿಕೆ ಶಿವಕುಮಾರ್ ಅವರ ಅಭಿಪ್ರಾಯ ಇರಬಹುದು. ಆದರೆ ಎಲ್ಲರ ಅಭಿಪ್ರಾಯ ಕ್ರೋಡೀಕರಿಸಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪರೋಕ್ಷವಾಗಿ ಕುಟುಕಿದರು.

ಲೋಕ ಸಭೆಗೆ ಸಚಿವರ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ಕೆ.ಎನ್ ರಾಜಣ್ಣ, ನಾನು ಒಬ್ಬನೇ ಅಲ್ಲ, ಹೈಕಮಾಂಡ್ ಯಾರಿಗೆಲ್ಲ ಆದೇಶ ಕೊಡುತ್ತದೆ. ಅವರೆಲ್ಲರೂ ನಿಲ್ಲಬೇಕು. ಹೈಕಮಾಂಡ್ ಸರ್ವೇ ಮಾಡಿಸುತ್ತದೆ. ಯಾರು ಗೆಲ್ಲುತ್ತಾರೆ ಎಂದು ಸಮೀಕ್ಷೆ ಮಾಡಿಸುತ್ತಾರೆ. ಗೆಲ್ಲುವೊಂದೆ ಮಾನದಂಡ ಈಗ. ನನ್ನನ್ನು ಒಳಗೊಂಡಂತೆ ಹೈಕಮಾಂಡ್ ಸೂಚನೆ ಬಂದರೆ ಎಲ್ಲರೂ ಸ್ಪರ್ಧೆ ಮಾಡಬೇಕು ಎಂದು ಹೇಳಿದರು.

ಇನ್ನು ಸಹಕಾರ ಸೌಧ ತೆರಿಗೆ ಬಾಕಿ ಉಳಿಸಿಕೊಂಡವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಬರಿ ಸಹಕಾರಸೌಧಕ್ಕೆ ಯಾಕೆ ಬರ್ತಿರಾ..? ಎಂದು ಪ್ರಶ್ನೆ ಹಾಕಿದರು. ಎಷ್ಟು ಜನ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಗೊತ್ತಾ..? ಬಡವರು ಯಾರು ಬಾಕಿ ಉಳಿಸಿಕೊಳ್ಳುವುದಿಲ್ಲ.
ಭಯದಿಂದ ಕಟ್ಟಿಬಿಡುತ್ತಾರೆ, ದೊಡ್ಡ ದೊಡ್ಡವರು ಬಾಕಿ ಉಳಿಸಿಕೊಳ್ಳುತ್ತಾರೆ. ಮಂತ್ರಿಮಾಲ್ ನವರು ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ…? ಇಷ್ಟು ವರ್ಷಗಳ ಕಾಲ ಯಾಕೆ ಸುಮ್ಮನೆ ಬಿಟ್ಟರು..? ಸುಮ್ಮನೆ ಸಹಕಾರಸೌಧದಲ್ಲಿ ಯಾರೋ ಕಟ್ಟಿಲ್ಲ ಅಂದ್ರೆ. ಮಂತ್ರಿಮಾಲ್ ದು ಎಷ್ಟು ಕೋಟಿ ಬಾಕಿ ಉಳಿದಿದೆ‌..? ಇಡೀ ಬೆಂಗಳೂರಿನಲ್ಲಿ ತೆರಿಗೆ ವಸೂಲಿ ಮಾಡಿದ್ರೆ ಕರ್ನಾಟಕದ ಬಜೆಟ್ ನಷ್ಟು ಹಣ ಬರುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಬಿಜೆಪಿ ಪ್ರತಿಭಟನೆ ಬಗ್ಗೆ ಮಾತನಾಡಿ, ಬಿಜೆಪಿಯವರಿಗೆ ಬಂಡವಾಳ ಏನೂ ಇಲ್ಲ. ಈ ರೀತಿ ಹಿಂದುತ್ವದಿಂದಲೇ ಅಂಬೇಡ್ಕರ್ ಬದಲಾದರು. ಅತಿಯಾದ ಹಿಂದುತ್ವದಿಂದಲೇ ಅಂಬೇಡ್ಕರ್ ಹಿಂದುವಾಗಿ ಸಾಯೋದಿಲ್ಲ ಅಂತ ಬೌದ್ದ ಧರ್ಮಕ್ಕೆ ಬದಲಾದರು. ನಾವು ಹಿಂದೂಗಳಲ್ವಾ? ಹಿಂದುತ್ವ ಅವರಿಗೆ ಜಾಗೀರ್ ಕೊಟ್ಟಿದ್ದೀವಾ? ನಮ್ಮದು ಗಾಂದಿ ಹಿಂದುತ್ವ, ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ

More News