V SOMANNA MEET HD DEVEGOWDA: ಈಗ ಮಾತಾಡೋ ವಾತಾವರಣ ಇಲ್ಲ. 16 ಬಳಿಕ ಉತ್ತರ ಕೊಡುತ್ತೇನೆ: ವಿ ಸೋಮಣ್ಣ

ಬೆಂಗಳೂರು: ಈಗ ಏನನ್ನೂ ಹೇಳುವ ವಾತಾವರಣ ಇಲ್ಲ. 15 ಅಥವಾ 16 ರ ಬಳಿಕ ಉತ್ತರ ಕೊಡುತ್ತೇನೆಂದು ಬಿಜೆಪಿಯ ಮಾಜಿ ಶಾಸಕ ವಿ ಸೋಮಣ್ಣ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯ ಸೋಲಿಂದ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಸಮಾಧಾನಪಡಿಸುವ ಸಂಬಂಧ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ.ಸೋಮಣ್ಣ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ ದೇವೇಗೌಡರು, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವಂಥ ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನೂ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪದ್ಮನಾಭ ನಗರದಲ್ಲಿನ ದೇವೇಗೌಡರ ನಿವಾಸಕ್ಕೆ ಭೇಟಿ ಮಾಡಿದ ಬಳಿಕ ಮಾತನಾಡಿದ ಬಿಜೆಪಿಯ ಮಾಜಿ ಶಾಸಕ ವಿ. ಸೋಮಣ್ಣ,ನನಗೆ ಬಹಳ ಸಂತೋಷ ಆಗಿದೆ. ನಾನು ಪರಾಭವಗೊಂಡ ಬಳಿಕ ನನಗೆ ಕರೆ ಮಾತನ್ನಾಡಿದ್ರು. ಬಹಳ ಹಿರಿಯ ರಾಜಕಾರಣಿಗಳು.ನನ್ನ ಗುರುಗಳು ಅವರು. ನಾನು ಅವರ ಶಿಷ್ಯ. 1983 ರಲ್ಲಿ ನಾನು ರಾಜಕೀಯ ಬಂದಾಗ ಅವರ ಅನುಯಾಯಿ ಆಗಿದ್ದೇ. ಅವರಿಂದ ಸಾಕಷ್ಟು ಕಲಿತಿದ್ದೇನೆ. ದೇವೇಗೌಡರಿಗೆ ವಯಸ್ಸಾಗಿರಬಹುದು. ಅಗಾಧ ಜ್ಞಾನ ಇದೆ. ಸುಮಾರು ಒಂದು ಘಂಟೆಗಳ ಕಾಲ ಮಾತುಕತೆ ನಡೆಸಿದ್ದೇನೆ.
ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ ಎಲ್ಲವನ್ನು ಬಗೆಹರಿಸುತ್ತೇನೆ ಅಂತ ದೇವೇಗೌಡರು ಹೇಳಿದ್ದಾರೆ ಎಂದರು. ಈ ವೇಳೆ ಬಿಜೆಪಿ ಜೆಡಿಎಸ್ ಮೈತ್ರಿ ಯಿಂದ ರಾಜ್ಯದಲ್ಲಿ 28ಸ್ಥಾನ ಗೆಲ್ಲಬಹುದಾ ಎಂಬ ಪ್ರಶ್ನೆಗೆ ಸೋಮಣ್ಣ ಉತ್ತರಿಸಿದ ಅವರು, ಮೈತ್ರಿ ಯಿಂದ ರಾಜ್ಯದ ಜನತೆ ಬಹಳ ಖುಷಿಯಿಂದಿದ್ದಾರೆ ಎಂದರು.

ತಮ್ಮ ರಾಜಕೀಯ ನಡೆ ಕುರಿತು ಮಾತನಾಡಿದ ಅವರು,
ಯಾರೋ ಕೆಲವು ಬಾಯಿಗೆ ಬಂದಂತೆ ಹೇಳಿದ ಹಾಗೆ ನಾನು ಹೇಳಲ್ಲ.. ಇದೇ 16 ರಂದು ನಾನು ಉತ್ತರ ಕೊಡುತ್ತೇನೆ ಎಂದರು. ಇದೇ ವೇಳೆ, ತುಮಕೂರು ಲೋಕಸಭಾ ಕ್ಷೇತ್ರದ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈಗ ಏನನ್ನೂ ಹೇಳುವ ವಾತಾವರಣ ಇಲ್ಲ. 15 ಅಥವಾ 16 ರ ಬಳಿಕ ಗೊತ್ತಾಗುತ್ತದೆ ಎಂದು ವಿ. ಸೋಮಣ್ಣ ತಿಳಿಸಿದರು.

ವಿ.ಸೋಮಣ್ಣ, ದೇವೇಗೌಡರರ ಭೇಟಿ ಬಳಿಕ ಮಾತನಾಡಿದ ಹೆಚ್ಡಿ ರೇವಣ್ಣ, ಸೋಮಣ್ಣ ಹಿರಿಯರು ನಮ್ಮಲ್ಲೇ ಇದ್ದವರು..ಇಂದು ದೇವೇಗೌಡರ ಬಹಳ ದಿನಗಳ ನಂತರ ಭೇಟಿಯಾದ್ರು..ಹಳೆಯ ವಿಚಾರಗಳನ್ನ ಮೆಲುಕು ಹಾಕಿದ್ರು. ಸೋಮಣ್ಣಗೆ ತುಮಕೂರು ಲೋಕಸಭಾ ಟಿಕೆಟ್ ಬಿಟ್ಟು ಕೊಡುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಅವರ ಭೇಟಿಯ ವೇಳೆ ನಮ್ಮ ಕುಟುಂಬವನ್ನ ಬಹಳ ಗೌರವ ದಿಂದ ನಡೆಸಿಕೊಂಡ್ರು. ನಾವು ಎಂದಿಗೂ ಅದನ್ನ ಮರೆಯುವುದಿಲ್ಲ. ದೇಶಕ್ಕೆ ಮೋದಿಯಂತವರು ಬೇಕು ಎಂದು ಹೇಳಿದರು‌

More News