Srikanth Pujari Case: ಕರಸೇವಕ ಶ್ರೀಕಾಂತ್ ಪೂಜಾರ ಮೇಲೆ ಕೇಸ್ ಹಾಕಿದರೇ ನಮಗೇನು ಲಾಭ- ಸಂತೋಷ‌ ಲಾಡ್..

ಹುಬ್ಬಳ್ಳಿ: ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯವರಿಗೆ ಬಿಟ್ಟು ಹಿಂದೂಗಳಿಗೆ ಏನಾದರೂ ಲಾಭ ಆಗಿದೆಯಾ ಎಂದು ಸಚಿವ ಸಂತೋಷ ಲಾಡ್ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಸೇವಕ ಶ್ರೀಕಾಂತ್ ಪೂಜಾರ ಮೇಲೆ ಕೇಸ್ ಹಾಕಿದರೇ ನಮಗೇನು ಲಾಭ. ಈಗಾಗಲೇ ಆತನ ಮೇಲೆ ಹಲವಾರು ಪ್ರಕರಣಗಳಿವೆ. ಇನ್ನೊಂದು ಸಲ ಕೋರ್ಟ್’ಗೆ ಹೋದರೆ ಏನೂ ಆಗತ್ತಿತ್ತು. ಆದರೆ ಇಂತಹುದೇ ಬಿಜೆಪಿಗರಿಗೆ ಬೇಕು. ಹಾಗಾಗಿ ಪ್ರತಿಭಟನೆ ಮಾಡಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ರಾಮಮಂದಿರ ಮಾಡಿದವರು ನಾವು, ರಾಮಮಂದಿರಕ್ಕೆ ಕೊಟ್ಟ ಇಟ್ಟಿಗೆ ಎಲ್ಲಿ ಹೋಯಿತು. ರಾಮ ಮಂದಿರ ಪಕ್ಕದ ಜಮೀನಿನ ವಿಚಾರದಲ್ಲಿ ಭ್ರಷ್ಟಾಚಾರ ಆಗಿದೆ. ಜಮೀನು ಬೆಲೆ ಹೆಚ್ಚು ಹೆಚ್ಚಳ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಮೂಲಕ ಅಲ್ಲಿರುವ ಪದಾಧಿಕಾರಿಗಳು ಕೋಟ್ಯಾಂತರ ರೂಪಾಯಿ ಲಾಭ ಪಡೆದುಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ 17 ಲಕ್ಷಕ್ಕೆ ಭೂಮಿ ತಗೊಂಡು ಮೂರು ಕೋಟಿಗೆ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ಯಾರು ಹೋರಾಟ ಮಾಡಬೇಕು ಎಂದು ಪ್ರಶ್ನೆ ಮಾಡಿದರು.

ರಾಮನೂ ನಮ್ಮ ದೇವರು, ಗಂಡಿ ದುರ್ಗಮ್ಮ ನಮ್ಮ ದೇವರು, ಈ ಹಿನ್ನೆಲೆ ಹರಿಪ್ರದಾದ್ ಹೇಳಿಕೆ ಹೇಗೆ ವಿವಾದ ಆಗುತ್ತೆ ಎಂದರು.

ಲೋಕಸಭಾ ಚುನಾವಣೆಗೆ ನಿಲ್ಲಲ್ಲೂ ನನಗೆ ಆಸೆಯಿಲ್ಲ, ನಾನು ಆಕಾಂಕ್ಷಿ ಅಲ್ಲ ಎಂದು ತಾವು ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ವಿಶ್ವ ಗುರು ಅಂತಾರೆ, ಅವರಿಗೆ ಇಷ್ಟು ಪ್ರಚಾರ ಬೇಕಾ? ನೀರಲ್ಲಿ ಹೋದ್ರು ಕ್ಯಾಮರಾ ಬೇಕಾ? ಅವರು ಒಂದು ತಿಂಗಳು ಟಿವಿ ಬಂದ್ ಮಾಡಿ ಮತ ಕೇಳಲಿ, ಅವರನ್ನು ದೇವರು ಅಂತಾ ತೋರಿಸಿದ್ರೆ ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದರು.

More News