HD Kumaraswamy: ರೆಬಲ್ ಲೇಡಿ ಸ್ವಾಭಿಮಾನಿ ಅಸ್ತ್ರಕ್ಕೆ ಬೆಚ್ಚಿದ್ರಾ ಹೆಚ್ ಡಿಕೆ..?: ಸಂಧಾನ ಒಕೆ ಅಂದಿದ್ಯಾಕೆ..?

ಬೆಂಗಳೂರು: ದಿನದಿಂದ ದಿನಕ್ಕೆ ಮಂಡ್ಯ ಲೋಕ ಕಣ ರಂಗೇರುತ್ತಿದೆ.
ಕಮಲ ದಳ ಮೈತ್ರಿಯಿಂದ ರೆಬಲ್ ಆಗಿರುವ ಸಂಸದೆ ಸುಮಲತಾ, ಮತ್ತೆ ಮಂಡ್ಯದಿಂದಲೇ ಸ್ಪರ್ಧೆ ಮಾಡುವುದಾಗಿ‌ ಸಂದೇಶ ರವಾನಿಸಿದ ಬೆನ್ನಲ್ಲೇ ಇತ್ತ ಹೆಚ್ ಡಿಕೆ ಸಂಧಾನ ಸೂತ್ರಕ್ಕೆ ಮುಂದಾಗಿದ್ದಾರೆ.

2019 ರಲ್ಲಿ ಜೆಡಿಎಸ್,ಕಾಂಗ್ರೆಸ್ ಮೈತ್ರಿಗೆ ಸೆಡ್ಡು ಹೊಡೆದಿದ್ದ ಸುಮಲತಾ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವಾತಂತ್ರ್ಯ ಅಭ್ಯರ್ಥಿಯಾಗಿ‌ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಂದಿನಿಂದ ಇಂದಿನ ವರೆಗೂ ಸುಮಲತಾ ಮತ್ತು ದಳ ಕುಟುಂಬದ ನಡುವೆ ವೈಮನಸ್ಸು ಮುಂದುವರೆಯುತ್ತಲೇ ಇದೆ. ಮಗನ ಸೋಲಿಕೆ ಕಾರಣವಾದವರಿಗೆ ಮಂಡ್ಯದಲ್ಲೇ ಸೇಡು ತೀರಿಸಿಕೊಳ್ಳಲು ತಂತ್ರ ಎಣೆದಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಮಂಡ್ಯದಿಂದಲೇ ಲೋಕಸಭಾ ಚುನಾವಣೆ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದು, ಸಂಧಾನ ಸೂತ್ರಕ್ಕೆ ಮೊರೆ ಹೋಗಿದ್ದಾರೆ.

“ಬಿಜೆಪಿಯಲ್ಲಿ ಮುಂದುವರಿದ್ರೆ ಸುಮಲತಾ ಭೇಟಿಗೆ ಸಿದ್ದ.!:”

ಅಸಮಧಾನಿತರ ಬಗ್ಗೆ ಪ್ರಶ್ನೆ ಕೇಳುತ್ತಲೇ ನಗರದಲ್ಲಿ ಮಾತನಾಡಿದ ಅವರು, ಸಿ ಟಿ ರವಿ ಸೇರಿದಂತೆ ಎಲ್ಲರನ್ನೂ ಭೇಟಿ ಮಾಡ್ತೀನಿ. ಅಗತ್ಯವಿದ್ರೆ ಸುಮಲತಾರನ್ನೂ ಭೇಟಿಯಾಗ್ತಿನಿ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಬಿಜೆಪಿಯಲ್ಲಿ ಮುಂದುವರಿದ್ರೆ ಸುಮಲತಾ ಭೇಟಿಗೆ ಸಿದ್ದ ಎಂದು ಹೇಳಿಕೆ ನೀಡುವ ಮೂಲಕ ರಾಜಕೀಯ ದಾಳ ಇಟ್ಟಿದ್ದಾರೆ.

ಇದೇ ವೇಳೆ ಮುಂದಿನ ಕ್ಯಾಬಿನೆಟ್ ಬದಲಾವಣೆ ವೇಳೆ ಮಂತ್ರಿ ಆಗೋ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಇವುಗಳ ಯಾವುದರ ಬಗ್ಗೆ ಚಿಂತೆ ಮಾಡಿಲ್ಲ..28 ಕ್ಷೇತ್ರ ಗೆಲ್ಲೋದು ನಮ್ಮ ಗುರಿ..ನನ್ನ ಮುಂದೆ ‌ಇರೋ ಅಜೆಂಡಾ ಕಾಂಗ್ರೆಸ್ ಸೋಲಿಸೋದು..ಮಂತ್ರಿಯಾಗಿ ಏನ್ ಮಾಡಲಿ..ನನಗೆ ಆ ಸುದ್ದಿಯೇ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದೆ. ನನಗೆ ಆ ಬಗ್ಗೆ ಆಸೆಯೂ ಇಲ್ಲ‌. ಆ ರೀತಿ ಚರ್ಚೆಯೇ ಆಗಿಲ್ಲ.. ಫೆಬ್ರವರಿಯಲ್ಲಿ ಕೋಡ್ ಆಫ್ ಕಂಡೆಕ್ಟ್ ಆದ್ರೆ ಏನ್ ಮಾಡೋದು.ಮಂತ್ರಿ ಆಗೋ ಬಗ್ಗೆ ನನಗೆ ಗೊತ್ತಿಲ್ಲ.15ರ ನಂತರ ದೆಹಲಿಗೆ ಬರಲು ಹೇಳಿದ್ದಾರೆ. ಕಾಡುಗೊಲ್ಲ ಸಮುದಾಯದ ವಿಚಾರ ಚರ್ಚೆ ಆಗಿದೆ. ಕೋಡ್ ಆಪ್ ಕಂಡಕ್ಟ್ ಬರುವ ಮುನ್ನ ಕಾಡು ಕೊಲ್ಲ ಸಮುದಾಯದ ವಿಚಾರ ಬಗೆಹರಿಸುವಂತೆ ಮನವಿ ಮಾಡಲಾಗಿದೆ ಎಂದರು.

ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನದ ಬಗ್ಗೆ ಚರ್ಚೆ ವಿಚಾರದ ಕುರಿತು ಮಾತನಾಡಿದ ಅವರು, ನಾನು ಯಾವುದರ ಬಗ್ಗೆಯೂ ಚಿಂತನೆ ಮಾಡಿಲ್ಲ. ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ, ದೊಡ್ಡ ಸುದ್ದಿ ಮಾಡಿದ್ದೀರಿ. ಆದ್ರೆ ಕಾಂಗ್ರೆಸ್ ನವರ ದುರಂಹಕಾರ ತೊಲಗಬೇಕಿದೆ. ವಿರೋಧ ಪಕ್ಷ ಉಳಿಸಲು ಕೆಲಸ ಮಾಡ್ತಿದ್ದಾರಾ? ಸಿದ್ದರಾಮಯ್ಯ ಹೇಳ್ತಾರಲ. ಗೌಡರು ವಿರೋಧಿಗಳಿಗೂ ಶಾಪ ನೀಡಿದವರಲ್ಲ135 ವರ್ಷಗಳ ಇತಿಹಾಸದ ಪಕ್ಷ ಎಂದು ಡಿಸಿಎಂ ಅಂತಾರೆ, ಗಾಂಧಿ‌ ಕಾಲದ ಕಾಂಗ್ರೆಸ್ ಪಕ್ಷ ಬೇರೆ . ಈಗಿನ ಕಾಂಗ್ರೆಸ್ ಪಕ್ಷ ಬೇರೆ . ಈಸ್ಟ್ ಇಂಡಿಯ ಕಾಂಗ್ರೆಸ್ ಈಗಿರುವುದು ಎಂದು ವ್ಯಂಗ್ಯ ಮಾಡಿದರು.

More News

You cannot copy content of this page