ಬಸ್ ಮೇಲಿದ್ದ ಪುನೀತ್ ಭಾವಚಿತ್ರಕ್ಕೆ ಮುತ್ತಿಡುತ್ತಿರುವ ಅಜ್ಜಿ

ಕೊಪ್ಪಳ : ಬಸ್ ಮೇಲಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರದ ಅಜ್ಜಿ ಮುತ್ತಿಡೋ ದೃಶ್ಯ ಮನ ಕಲುಕುವಂತಿತ್ತು. ಬಸ್ ನ ಮೇಲಿನ ಧೂಳನ್ನು ತನ್ನ ಸೆರಗಿನಿಂದ ಒರೆಸಿದ ಅಜ್ಜಿ, ಆ ಭಾವಚಿತ್ರಕ್ಕೆ ಮುತ್ತಿಡುತ್ತಾರೆ. ಅಪ್ಪುವಿನ ಮೇಲಿನ ಅಜ್ಜಿಯ ಪ್ರೀತಿ ವ್ಯಕ್ತವಾದ ರೀತಿ ಇದು.


ಕೊಪ್ಪಳ ಜಿಲ್ಲೆಯ ಕುಕನೂರ ಬಸ್ ನಿಲ್ದಾಣದಲ್ಲಿ ಬಸ್ಸೊಂದು ಬಂದು ನಿಲ್ಲುತ್ತದೆ. ಆ ಬಸ್ ನಲ್ಲಿ ಒಂದು ಜಾಹೀರಾತಿನಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವಿರುತ್ತದೆ. ಇದನ್ನು ನೋಡಿದ ಅಜ್ಜಿ, ಫೋಟೋ ಮೇಲಿದ್ದ ದೂಳನ್ನು ತನ್ನ ಸೆರಗಿನಿಂದ ಒರೆಸುತ್ತಾರೆ,


ಹಾಗೆಯೇ ಅಜ್ಜಿ ತನ್ನ ಕೈಗಳಿಂದ ಭಾವಚಿತ್ರವನ್ನು ಮುಟ್ಟಿ ಮುತ್ತಿಡೋ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

More News