Don’t Take Seriously: ಲಕ್ಷ್ಮೀ ಹೆಬ್ಬಾಳ್ಕರ್ ರ ಹೇಳಿಕೆಯನ್ನ ಸೀರಿಯಸ್ ಆಗಿ ತೆಗೆದ್ಕೊಳ್ಬೇಡಿ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಸಮುದಾಯಕ್ಕೆ ಬಿಡುಗಡೆ ಮಾಡಲಿರುವ ಹಣದ ವಿಚಾರದ ಹಿಂದೆ ಬಿದ್ದಿದ್ದ ಬಿಜೆಪಿ ಇದೀಗ ಹೆಬ್ಬಾಳ್ಕರ್ ಭಾಷಣದ ಹಿಂದೆ ಬಿದ್ದಿದ್ದಾರೆ. ನಿಮ್ಮ ಸಚಿವ ಸಂಪುಟದ ಸಚಿವರು ಚುನಾವಣೆ ವೇಳೆಯಲ್ಲೇ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಆಗ್ತಿದ್ದಾರಲ್ಲಾ ಏನ್ ಹೇಳ್ತೀರಿ ಎಂಬ ಪ್ರಶ್ನೆಗೆ ಅದನ್ನೆಲ್ಲಾ ಸೀರಿಯಸ್ ಆಗಿ ತೆಗೆದ್ಕೊಳ್ಬೇಡಿ ಎಂದಿದ್ದಾರೆ ಗೃಹ ಸಚಿವ ಪರಮೇಶ್ವರ್.

ಲಕ್ಷೀ ಹೆಬ್ಬಾಳ್ಕರ್ ಹೇಳಿಕೆ ವಿಚಾರದ ಕುರಿತು ನಗರದಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ಯಾವ ಕಾಂಟೆಸ್ಟ್ ನಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಮಾತನಾಡುವಾಗ ಹಾಗೆ ಹೇಳಿರಬಹುದು. ಅದನ್ನ ಹೆಚ್ಚು ಸೀರಿಯಸ್ ಆಗಿ ತೆಗೆದುಕೊಳ್ಳೋದು ಬೇಡ. ನನ್ನೂ ಸೇರಿಸಿ ತೆಗೆದುಕೊಳ್ಳೋದು ಬೇಡ ಎಂದಿದ್ದಾರೆ.

ರಾಜ್ಯಕ್ಕೆ ಸುರ್ಜೇವಾಲ ಆಗಮನ ವಿಚಾರ ಕುರಿತು ಮಾತನಾಡಿದ ಅವರು, ಅಜೆಂಡಾ ಅಂತ ಏನು ಹೇಳಿಲ್ಲ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಬರ್ತಿದ್ದಾರೆ. ಸಿಎಂ,ಡಿಸಿಎಂ, ಡಿಸಿಸಿ ಅಧ್ಯಕ್ಷರ ಜೊತೆ ಸಭೆ ಮಾಡ್ತಾರೆ. ಜಿಲ್ಲಾ ಮಟ್ಟದ ನಾಯಕರ ಜೊತೆ ಮಾತನಾಡ್ತಾರೆ. ಚುನಾವಣೆ ತಯಾರಿ ಮಾಡಬೇಕಿದೆ. ಅದಕ್ಕಾಗಿ ಬರ್ತಾ ಇದ್ದಾರೆ. ನನ್ನ ಜೊತೆ ಕೂಡ ಮಾತನಾಡಿದ್ದಾರೆ. ಹೆಚ್ಚು ಸೀಟ್ ಗೆಲ್ಲಬೇಕಿದೆ, ಸರ್ಕಾರವು ನಮ್ಮದಿದೆ. ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಗ್ಯಾರಂಟಿ ಇಂಪ್ಯಾಕ್ಟ್ ಎಷ್ಟಾಗಿದೆ ಎಂಬುದು ಚುನಾವಣೆ ನಂತರ ಗೊತ್ತಾಗಲಿದೆ ಎಂದರು.

ಸಭೆಯಲ್ಲಿ ಬಡವರಿಗೆ ಸರ್ಕಾರದ ಯೋಜನೆ ತಲುಪಿದ್ದು ಚರ್ಚೆ ಆಗುತ್ತೆ. ಚುನಾವಣೆ ದೃಷ್ಟಿಯಿಂದ ನಾವು ಅವಲೋಕನ ಮಾಡುತ್ತೇವೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಅನುಕೂಲ ಆಗುವ ರೀತಿ ಯೋಜನೆ ಜಾರಿ ಆಗಿದೆ. ಐದು ಸಾವಿರಕ್ಕೂ ಹೆಚ್ಚು ಸಹಾಯ ಆಗಲಿದೆ.
ಹೀಗಾಗಿ ಎಲ್ಲಾ ರೀತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಲೋಕ ಸಭೆಯಲ್ಲಿ ಸಚಿವರ ಸ್ಫರ್ಧೆ ವಿಚಾರದ ಕುರಿತು ಮಾತನಾಡಿದ ಅವರು, ಸಚಿವರ ಸ್ಪರ್ಧೆ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ. ಯಾಕೆ ಈ ವಿಚಾರ ಬಂತೋ ಗೊತ್ತಿಲ್ಲ.
ನನ್ನ ಹೆಸರು, ಕೋಲಾರ,ಚಿತ್ರದುರ್ಗಕ್ಕೆ ಬಂದಿದೆ. ನನ್ನ ಹೆಸರು ಯಾರು ಹೇಳಿದ್ರು ಗೊತ್ತಿಲ್ಲ. ತುಮಕೂರು ಕ್ಷೇತ್ರಕ್ಕೆ ನನ್ನ ಹೆಸರು ಇಲ್ಲ. ಹಿಂದೆ ನಾನು ಸ್ಫರ್ಧೆ ಮಾಡಬೇಕು ಅಂದುಕೊಂಡಿದ್ದೆ. ಈಗ ಸ್ಫರ್ಧೆ ಮಾಡುವ ಇಚ್ಚೆ ನನಗಿಲ್ಲ.
ಸತೀಶ್ ಜಾರಕಿಹೊಳಿ ಹೆಸರು ಚರ್ಚೆ ಆಗಿರಬಹುದು.
ಅಂತಿಮ ನಿರ್ಧಾರ ಹೈಕಮಾಂಡ್ ನಾಯಕರು ಮಾಡುತ್ತಾರೆ ಎಂದು ತಿಳಿಸಿದರು.

More News

You cannot copy content of this page