Additional DCM Fight: ಹೆಚ್ಚುವರಿ ಡಿಸಿಎಂಗೆ ಕೈ ನಾಯಕರ ಪಟ್ಟು: ಡಿ‌ಕೆಶಿ ವರ್ಷನ್ ಬೇರೆ, ನಮ್ಮ ವರ್ಷನ್ ಬೇರೆ ಎಂದ ಸತೀಶ್

ಬೆಂಗಳೂರು: ಸಧ್ಯ ಕೈ ಪಾಳಯದಲ್ಲಿ ಡಿಸಿಎಂ ದಂಗಲ್ ಶುರುವಿಟ್ಟಿದೆ. ಡಿಸಿಎಂ ಒಂದೇ ಸಾಕು ಎಂದು ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರಿಗೆ ಒತ್ತಾಯಿಸಿದರೆ, ಇತ್ತ ಕಾಂಗ್ರೆಸ್ ನ ಹಿರಿಯ ನಾಯಕರು, ಹೆಚ್ಚುವರಿ ಡಿಸಿಎಂ ಬೇಕೇ ಬೇಕೆಂದು ಹೈಕಮಾಂಡ್ ಮುಂದೆ ಪಟ್ಟು ಹಿಡ್ದಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಡಿಸಿಎಂ ಹುದ್ಧೆ ಬೇಕೆಂದು ಹೈಕಮಾಂಡ್ ಗೆ ತಿಳಿಸಿದ್ದೇವೆ. ಕೊಡದಿದ್ರೆ ಪಕ್ಷಬಿಟ್ಟೇನೂ ಹೋಗಲ್ಲ. ಆದ್ರೆ ಹೆಚ್ಚುವರಿ ಡಿಸಿಎಂ ಗೆ ಅವಕಾಶ ನೀಡ್ಬೇಕೆಂದು ಒತ್ತಾಯಿಸಿದ್ದಾರೆ.

ಸುರ್ಜೇವಾಲ ಜೊತೆ ಮೀಟಿಂಗ್ ವಿಚಾರದ ಕುರಿತು ನಗರದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,
ಪ್ರತಿಫಲ ಸಿಗಲು ಇನ್ನೂ ಕಾಲಾವಕಾಶ ಇದೆ. ಚುನಾವಣೆ ಬಗ್ಗೆ ಚರ್ಚೆಯಾಗಿದೆ. ನಾಳೆ ದೆಹಲಿಯಲ್ಲಿ ಚುನಾವಣೆ ಕುರಿತು ಸಭೆ ಇದೆ. ನಮ್ಮ ಸ್ಥಿತಿಗತಿ ಸುರ್ಜೇವಾಲ ಮುಂದೆ ಹೇಳಿದ್ದೇವೆ. ನಿನ್ನೆ ಸುರ್ಜೇವಾಲಾಗೆ ಪ್ರಬಲ ಸಮುದಾಯಗಳಿಗೆ ಡಿಸಿಎಂ ಕೊಡಬೇಕು ಎಂದು ಎಲ್ಲರೂ ಒಟ್ಟಾಗಿ ಕೇಳಿದ್ದೇವೆ. ಚುನಾವಣೆಯಲ್ಲಿ ಅನುಕೂಲ ಆಗುತ್ತೆ ಅಂದಿದ್ದೇವೆ. ಸಮುದಾಯಗಳು ಬೆನ್ನಿಗೆ ನಿಲ್ಲಲು ಅನುಕೂಲ ಆಗುತ್ತೆ. ಎಷ್ಟು ಡಿಸಿಎಂ ಮಾಡ್ತಾರೆ ಎಂಬುದು ಹೈಕಮಾಂಡ್ ಗೆ ಬಿಟ್ಟಿದ್ದು. ಲೋಕಸಭಾ ಮುಂಚಿತವಾಗಿ ಮಾಡಬೇಕು. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರ್ತಾರೆ. ಹಿಂದೆ ಸಿಎಂ, ಡಿಸಿಎಂ ಮಾಡುವಾಗ ಚರ್ಚೆಯಾಗಿಲ್ಲ. ನಾವು ಡಿಸಿಎಂ ‌ಮಾಡಲು‌ ಮಾತ್ರ ಹೇಳಿದ್ದೇವೆ. ಯಾರಿಗೆ ಎಂದು ಹೇಳಿಲ್ಲ. ಸಚಿವರ ಸ್ಫರ್ಧೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದರು.

ಹೆಚ್ಚವರಿ ಡಿಸಿಎಂ ಗೆ ಡಿಕೆ ಶಿವಕುಮಾರ್ ವಿರೋಧ ವಿಚಾರದ ಕುರಿತು ಮಾತನಾಡಿದ ಅವರು, ಅವರು ಡಿಸಿಎಂ ಆಗಿಯೇ ಇರ್ತಾರೆ. ಅವರ ಅಭಿಪ್ರಾಯ ಬೇರೆ. ನಮ್ಮ ವರ್ಷನ್ ಬೇರೆ. ಒಂದೇ ಡಿಸಿಎಂ ಎಂಬುದು ಡಿಕೆ ಅಭಿಪ್ರಾಯ. ಆದ್ರೆ ಈಗ ನಾವು ಹೆಚ್ಚುವರಿಗೆ ಮನವಿ ಮಾಡಿದ್ದೇವೆ. ನಿರ್ಧಾರ ಹೈಕಮಾಂಡ್ ನಾಯಕರು ಮಾಡಬೇಕು. ಸುರ್ಜೇವಾಲ ನಮ್ಮ ಮಾತಿಗೆ ಸಮ್ಮತಿಸಿದ್ದಾರೆ. ಡಿಸಿಎಂ ಮಾಡದೆ ಹೊದ್ರೆ ಏನು ಆಗಲ್ಲ. ಯಾರು ಪಕ್ಷ ಬಿಟ್ಟು ಹೋಗಲ್ಲ.‌ಡಿಮ್ಯಾಂಡ್, ರಿಕ್ವೆಸ್ಟು ಎರಡು‌ ಒಂದೇ. ನಾವು ಬ್ಲಾಕ್ ಮೆಲ್ ಮಾಡಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

More News

You cannot copy content of this page