CONGRESS WILL DEVIDE KARNATAKA: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಸಚಿವೆಯ ಹೇಳಿಕೆಯಿಂದ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ: ಬಿಜೆಪಿ

ಬೆಂಗಳೂರು : ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಹೇಳಿಕೆ ನೀಡುವುದರ ಮೂಲಕ ರಾಜ್ಯ ಕಾಂಗ್ರೆಸ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಕನ್ನಡಿಗರನ್ನು ಒಡೆಯುವ ಮತ್ತು ಕರ್ನಾಟಕವನ್ನು ವಿಭಜಿಸುವ ಕಾಂಗ್ರೆಸ್ ನ ಕ್ಷುಲ್ಲಕ ಮನಸ್ಥಿಗೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ದೂರಿದೆ.

ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನ ಸಂಪೂರ್ಣ ವಿವರ ಇಲ್ಲಿದೆ. ಬೆಳಗಾವಿಯನ್ನು ಮಾರಲು ‘ಸಿದ್ದ’ವಾಗಿದೆ ಕಾಂಗ್ರೆಸ್ ಸರ್ಕಾರ. ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬುದನ್ನು ಸಿಎಂ @siddaramaiah ಅವರು, ತಮ್ಮ ಸಂಪುಟದ ಸಚಿವೆ @laxmi_hebbalkar ಅವರಿಂದ ಹೇಳಿಸುವ ಮೂಲಕ, ಬೆಳಗಾವಿ ಬಗ್ಗೆ ತಮ್ಮ ಸರ್ಕಾರದ ನಿಲುವು ಏನು ಎಂಬುದನ್ನು ಜಗಜ್ಞಾಹೀರುಗೊಳಿಸಿದ್ದಾರೆ. ಕನ್ನಡಿಗರನ್ನು ಒಡೆಯುವ, ಕರ್ನಾಟಕವನ್ನು ವಿಭಜಿಸುವ @INCKarnatakaದ ಕ್ಷುಲ್ಲಕ ಮನಸ್ಥಿತಿಗೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದೆ. ಹಾಗೆಯೇ #NaadaVirodhiCongress ಎಂದು ಟೀಕಿಸಿದೆ.

More News

You cannot copy content of this page