DK SHIVAKUMAR AND K N RAJANNA SECRET MEETING: ಯಾರೋ ಹೇಳಿಕೊಟ್ಟು ನನ್ನ ಬಾಯಲ್ಲಿ ಹೇಳಿಸ್ತಿದ್ದಾರೆ ಅನ್ನೋದು ಊಹಾಪೋಹ: ಕೆಎನ್ ರಾಜಣ್ಣ

ಬೆಂಗಳೂರು : ಯಾರೋ ಹೇಳಿಕೊಟ್ಟು ನನ್ನ ಬಾಯಲ್ಲಿ ಹೇಳಿಸ್ತಿದ್ದಾರೆ ಅನ್ನೋ ಊಹಾಪೋಹಗಳು ಬೇಡ. ಅವೆಲ್ಲಾ ಸತ್ಯಕ್ಕೆ ದೂರವಾದವು, ನಮಗ್ಯಾರು ಹೇಳಿಕೊಟ್ಟು ಹೇಳಿಸ್ತಿಲ್ಲ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ಹೆಚ್ಚುವರಿ ಡಿಸಿಎಂ ಬೇಡಿಕೆ ವಿಚಾರದ ಕುರಿತು ನಗರದಲ್ಲಿ ಮಾತನಾಡಿದ ಅವರು, ಡಿಸಿಎಂ ವಿಚಾರ, ಲೋಕಸಭಾ ವಿಚಾರ ಮತ್ತೊಂದು ಮಗದೊಂದು.‌ಇವೆಲ್ಲವನ್ನೂ ಸಹ ಚರ್ಚೆ ಮಾಡಿದ್ದೀವಿ. ಡಿಸಿಎಂ ಮಾಡಬಾರದು ಅನ್ನೋದಕ್ಕೆ ಡಿಕೆ ಶಿವಕುಮಾರ್ ವಿರೋಧ ಇದ್ದಾರೆ ಅಂತ ಯಾರು ತಿಳಿದುಕೊಳ್ಳಬೇಡಿ. ಹೆಚ್ಚುವರಿ ಡಿಸಿಎಂ ಮಾಡೋದಕ್ಕೆ ಶಿವಕುಮಾರ್ ಅವರ ವಿರೋಧ ಇಲ್ಲ. ನಾನು ಹೇಳಿರುವ ಹೇಳಿಕೆಗೆ ಈಗಲೂ ಬದ್ಧ ಎಂದಿದ್ದಾರೆ.
ಡಿಸಿಎಂ ಮಾಡಲ್ಲ ಎಂಬ ಖರ್ಗೆ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಇನ್ನು ಪ್ರಸ್ತಾಪ ನಮ್ಮ ಗಮನಕ್ಕೆ ಬಂದಿಲ್ಲ ಅಂತ ಹೇಳಿರೋದು, ಮಾಡಲ್ಲ ಅಂತ ಹೇಳಿಲ್ಲ.‌ ಡಿಸಿಎಂ ಮಾಡೋದಿಲ್ಲ ಅಂತ ಖರ್ಗೆ ಅವರು ತಳ್ಳಿ ಹಾಕಿಲ್ಲ, ಈ ಸಮಯದಲ್ಲಿ ಗೊಂದಲ ಮಾಡೋದು ಬೇಡ ಅಂದಿರೋದು. ನಾವಿನ್ನು ಖರ್ಗೆ ಅವರ ಗಮನಕ್ಕೆ ಈ ವಿಚಾರ ತಗೊಂಡೋಗಿಲ್ಲ ಎಂದು ತಿಳಿಸಿದರು.

ಡಿಸಿಎಂ ಪ್ರಸ್ತಾಪ ಇಲ್ಲ ಎಂಬ ಸುರ್ಜೆವಾಲ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವ್ರು, ಅವರು ಹೇಳಿದ್ದು ಸರಿ ಇದೆ ಅಂತ ಹೇಳೋಕಾಗಲ್ಲ, ಸರಿ ಇಲ್ಲ ಅಂತಲೂ ಹೇಳೋಕಾಗಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು, ಹೈಕಮಾಂಡ್ ನಿಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವ್ರು ಹೈಕಮಾಂಡ್ ತಗೊಳೋದು, ಇನ್ನೊಬ್ಬರು ತಗೋಳೋದು, ನಾನು ಹೇಳೋದು ಬೇರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾರಜೋಳ, ಅಶ್ವಥ್ ನಾರಾಯಣ, ಈಶ್ವರಪ್ಪ 3 ಡಿಸಿಎಂ ಇದ್ರು. ಈಗ ಹೊಸದಾಗಿ 3 ರಾಜ್ಯಗಳಲ್ಲಿ ಸರ್ಕಾರ ಬಂದಿದ್ಯಲ್ಲಾ ಅವರು ಕೂಡ ಬೇರೆ ಸಮುದಾಯಗಳಿಗೆ‌ ನ್ಯಾಯ ದೊರಕಿಸಬೇಕು ಅಂತ ಸಮುದಾಯವಾರು ಡಿಸಿಎಂ ಮಾಡಿದ್ದಾರೆ.
ಅದೇ ರೀತಿ ನಮ್ಮ ರಾಜ್ಯದಲ್ಲೂ ಮಾಡಿದ್ರೆ ನಮ್ಮಲ್ಲಿ ಲೋಕಸಭಾ ಫಲಿತಾಂಶ ಉತ್ತಮವಾಗಿ ಬರುತ್ತೆ.28 ರಲ್ಲಿ 20 ಸ್ಥಾನ ಗೆಲ್ಲದಿದ್ರೆ ನಮಗೆ ಯಾವ ನೈತಿಕತೆ ಇರುತ್ತೆ..? ಎಂದು ಪ್ರಶ್ನೆ ಹಾಕಿದರು.
ಸಮುದಾಯವಾರು ಡಿಸಿಎಂ ಕೊಟ್ರೆ 28ಕ್ಕೆ 28 ಗೆಲ್ತೀವಿ ಎಂದರು. ಡಿಸಿಎಂ ಮಾಡದಿದ್ರೆ ಲೋಕಸಭಾ ಫಲಿತಾಂಶದಲ್ಲಿ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವ್ರು, ಹಿನ್ನಡೆಯಾಗುತ್ತಾ ಇಲ್ವಾ ಅನ್ನೋದನ್ನ ಹೇಳೋಕೆ ಸಮಯ ಇದೆ, ಮುಂದೆ ಹೇಳ್ತೀನಿ ಎಂದು‌ ಧಾರ್ಮಿಕವಾಗಿ ಮಾತನಾಡಿದರು.

More News

You cannot copy content of this page