ದೇವನಹಳ್ಳಿ : ನವದೆಹಲಿಯಲ್ಲಿ ಎಐಸಿಸಿ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ರಾಜ್ಯದ ಹಲವು ಸಚಿವರು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು.
ಸಚಿವ ಜಮೀರ್ ಅಹಮದ್ ಖಾನ್, ಕೆ.ಎನ್.ರಾಜಣ್ಣ ಮತ್ತು ಆರ್ ಬಿ ತಿಮ್ಮಾಪುರ ಪ್ರಯಾಣ. ಸಚಿವ ಬೋಸರಾಜ್ ಹಾಗೂ ಕೆ.ಜೆ ಜಾರ್ಜ್, ಸಂತೋಷ್ ಲಾಡ್ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಎಐಸಿಸಿ ಸಭೆಗೆ ಆಹ್ವಾನ ಬಂದಿದೆ, ಆದ್ದರಿಂದ ದೆಹಲಿಗೆ ತೆರಳುತ್ತಿದ್ದೇವೆ, 2024ರ ಲೋಕಸಭಾ ಚುನಸವಣಾ ಹೊಸ್ತಿಲಲ್ಲಿ ಬುಲಾವ್ ಬಂದಿದೆ ಎಂದರು.

ಹಿರಿಯ ನಾಯಕರ ನಿರ್ದೇಶನವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದ ಸಚಿವರು, ಎಐಸಿಸಿ ಸಭೆ ಹಿನ್ನಲೆ ರಾಜ್ಯ 28ಜನ ಸಚಿವರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ವಿಚಾರ ಚರ್ಚೆ ಆಗುತ್ತಿದೆ
ರಾಜ್ಯದಲ್ಲಿ ಹೆಚ್ಚುವರಿ DCM ಹುದ್ದೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ, ಕಾಂಗ್ರೆಸ್ ಹೈಕಮ್ಯಾಂಡ್ ಸಹ ಸಲಹೆ ಕೇಳಿದೆ, ನಾವು ಸಹ ವಸ್ತುಸ್ಥಿತಿಯ ಬಗ್ಗೆ ಸಲಹೆ ನೀಡಿದ್ದೇವೆ ಎಂದರು. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ತಾರೊ ನಾವು ಪಾಲಿಸುತ್ತೇವೆ ಎಂದು ರಾಜಣ್ಣ ಸ್ಪಷ್ಟನೆ ನೀಡಿದರು.




