BIGG BOSS SEASON- 10: ಬಿಗ್ ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್ ಆಗಲಿದ್ದಾರ..!?

ಬಿಗ್ ಬಾಸ್ ಸೀಸನ್ 1೦ ಮುಕ್ತಾಯ ಹಂತಕ್ಕೆ ಬರುತ್ತಿದ್ದು, ಈ ಬಾರಿ ಸ್ಪರ್ಧಿ ಕಾರ್ತಿಕ್ ಗೆಲುವು ಸಾಧಿಸಲಿದ್ದಾರ ಎಂಬ ಚರ್ಚೆ ಶುರುವಾಗಿದೆ.
ಈ‌ ಬಿಗ್ ಬಾಸ್ ಮನೆಯಲ್ಲಿನ‌ ಸ್ಪರ್ಧಿಗಳಲ್ಲಿ ಫಿನಾಲೆ ಸಮೀಪಿಸುತ್ತಿದ್ದಂತೆ ಒಳಬೇಗುದಿ, ಇನ್ನೊಬ್ಬರನ್ನು ತುಳಿಯುವ ಮನೋಭಾವ ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ತಾವು ಫಿನಾಲೆ ತಲುಪಬೇಕೆಂಬ ಹಪಾಹಪಿ ಎಲ್ಲರಲ್ಲೂ ಮನೆಮಾಡಿದೆ. ಕೆಲವರು ತಮ್ಮ ಆತ್ಮೀಯರನ್ನೇ ಫಿನಾಲೆಗೆ ಎಂಟ್ರಿ ನೀಡದಂತೆ ತಂತ್ರಗಳ ಹೆಣೆಯುತ್ತಿದ್ದಾರೆ.
ಈ ಮನೆಯ ಸದಸ್ಯರಲ್ಲಿ ಕಾರ್ತಿಕ್ ಫಿನಾಲೆ ತಲುಪುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಆದರೆ ಸಂಗೀತಾ ಅವರು ಕಾರ್ತಿಕ್ ಅವರು ಫಿನಾಲೆಗೆ ಸ್ಪರ್ಧಿಸದಂತೆ ತಡೆಯೊಡ್ಡುತ್ತಿದ್ದಾರೆ. ಈ ಸ್ಪರ್ಧಿಗಳ ಹೊಟ್ಟೆ ಉರಿ ಕಾರ್ತಿಕ್ಗೆ ವೀಕ್ಷಕರ ಬೆಂಬಲ ದೊರೆಯುವಂತೆ ಮಾಡುತ್ತಿರುವುದು ಸುಳ್ಳಲ್ಲ.
ಕಾರ್ತಿಕ್​ ಮೇಲೆ ಮನೆಯ ಸ್ಪರ್ಧಿಗಳ ಅಟ್ಯಾಕ್​ ಆಗುತ್ತಿದೆ. ಇನ್ನೊಂದೆಡೆ ಸ್ಪರ್ಧಿಗಳ ವರ್ತನೆಗೆ ಕಾರ್ತಿಕ್​ ಪರ ಓಟು ಟರ್ನ್​​ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಫಿನಾಲೆಯ ಸನಿಹವಾಗುತ್ತಿದ್ದಂತೆ ಮನೆಯ ವಾತಾವರಣವೂ ಬದಲಾಗುತ್ತಿದೆ. ಕಾರ್ತಿಕ್​ರನ್ನು ಗುರಿಯಾಗಿಸಿಕೊಂಡು ಫಿನಾಲೆಗೆ ಎಂಟ್ರಿ ನೀಡದಂತೆ ಸ್ಪರ್ಧಿಗಳು ಅಟ್ಯಾಕ್​ ಮಾಡುತ್ತಿದ್ದಾರೆ. ವಿಶೇಷ ವೆಂದರೆ ಸಂಗೀತಾ ಶೃಂಗೇರಿ ಕೂಡ ಇದೀಗ ಕಾರ್ತಿಕ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಕಾರ್ತಿಕ್​ ಕೆಂಡಾಮಂಡಲರಾಗಿದ್ದಾರೆ.
ಈ ಬಾರಿ ಸಂಗೀತಾ ಅವರು ವಿನಯ್​ ಗೌಡ ಹೇಳಿದ ಪ್ಲಾನ್​ನಂತೆ ಆಟವಾಡಿರುವುದು ವೀಕ್ಷಕರಿಗೂ ಬೇಸರ ತರಿಸಿದೆ. ಒಬ್ಬರನ್ನು ತೆಗೆದು ಮತ್ತೊಬ್ಬರನ್ನು ಹಾಕುವುದರಿಂದ ಉಪಯೋಗವಿದೆ​ ಎಂಬ ವಿನಯ್​ ಮಾತಿಗೆ ಸಂಗೀತಾ ನಾನು ಕಾರ್ತಿಕ್​​ನನ್ನ ತೆಗೆಯಬೇಕೆಂದಿದ್ದೇನೆ. ಟಾಸ್ಕ್​ ವೇಳೆ ಕಾರ್ತಿಕ್​ ಆಡೋದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಕಾರ್ತಿಕ್​, ಮನೆಯಲ್ಲಿ ವುಮೆನ್​ ಕಾರ್ಡ್​ ಎಂದು ಕಾಲೆಳೆದಿದ್ದು, ನಾನು ಏನು ಮಾಡಬೇಕು ಎಂಬುದನ್ನ ಯಾರೂ ನನಗೆ ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದಕ್ಕೆ ಸಂಗೀತಾ ಇದು ನಿಮ್ಮ ಕ್ಯಾರೆಕ್ಟರನ್ನು ತೋರಿಸುತ್ತೆ ಎಂದು ಜರಿದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಕಾರ್ತಿಕ್​ ನನ್ನ ಕ್ಯಾರೆಕ್ಟರ್​ ಬಗ್ಗೆ ಮಾತನಾಡೋ ಅರ್ಹತೆ, ಯೋಗ್ಯತೆ ಏನು ಇಲ್ಲ ನಿನಗೆ ಎಂದು ಟಾಂಗ್ ಕೊಟ್ಟಿದ್ದಾರೆ. ಈ ನಾಟಕೀಯ ಬೆಳವಣಿಗೆ ವೀಕ್ಷಕರಿಗೂ ಬೇಸರ ತರಿಸಿದೆ.

ಒಟ್ಟಾರೆ ಕಾರ್ತಿಕ್​​ ಫಿನಾಲೆಗೆ ಸ್ಪರ್ಧೆ ನೀಡುವ ಸ್ಪರ್ಧಿಗಳಲ್ಲಿ ಒಬ್ಬರು ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ತನಿಷಾ, ವಿನಯ್​, ಸಂಗೀತಾ ಆವರ ಮೇಲೆ ಅಟ್ಯಾಕ್​ ಮಾಡುತ್ತಿದ್ದಾರೆ. ಈ ಮೂವರ ವರ್ತನೆ ಕಾರ್ತಿಕ್​ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದರೂ ಬಿಗ್​ ಬಾಸ್​ ಫ್ಯಾನ್ಸ್​ ಮತಗಳು ಮಾತ್ರ ಕಾರ್ತಿಕ್ ಅವರತ್ತ ಬರುತ್ತಿವೆ ಎನ್ನಲಾಗುತ್ತಿದೆ. ಅಂತಿಮ ಹಂತದಲ್ಲಿ ಕಾರ್ತಿಕ್ ಅಥವಾ ಹುಡುಗಿಯರ ಪೈಕಿ ಒಬ್ಬರು ಫಿನಾಲೆ ತಲುಪಿ ಜಯಶೀಲರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

#BIGGBOSS10 @SEASON10 #KARTHIKMAHESH #SANGEETHA #THANISH #VINAY #WINNER #FINALE #KICHCHASUDEEP

More News