ಪಶ್ಚಿಮ ಬಂಗಾಲ: ಮಾಜಿ ಮಾಡೆಲ್ ದಿವ್ಯಾ ಪಹುಜಾ ಕೊಲೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರವಿ ಬಾಂದ್ರಾ ಜೊತೆ ಶವ ವಿಲೇವಾರಿ ಮಾಡಿದ್ದ ಬಾಲ್ರಾಜ್ ಗಿಲ್ ಎಂಬಾತನನ್ನ ಗುರುವಾರ ಸಂಜೆ ಪಶ್ಚಿಮ ಬಂಗಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜನವರಿ 2 ರಂದು ದಿವ್ಯಾ ಅವರನ್ನು ಐದು ಜನರು ಹೋಟೆಲ್ ಸಿಟಿ ಪಾಯಿಂಟ್‌ಗೆ ಕರೆದೊಯ್ದು ಕೊಠಡಿ ಸಂಖ್ಯೆ 111 ರೊಳಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ರವಿ ಬಾಂದ್ರಾ ಪರಾರಿಯಾಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಯುತ್ತಿದೆ.
ಸಧ್ಯ ಆರೋಪಿ ರವಿ ಬಾಂದ್ರಾ ಜೊತೆ ಶವ ವಿಲೇವಾರಿ ಮಾಡಿದ್ದ ಬಾಲ್ರಾಜ್ ಗಿಲ್ ನನ್ನು ವಶಕ್ಕೆ ಪಡೆದಿದ್ದು, ಮಾಜಿ ಮಾಡೆಲ್‌ನ ದೇಹ ಎಲ್ಲಿ ಇಡಲಾಗಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತೆ.

ಪೊಲೀಸರಿಗೆ ಸಧ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಬಿಎಂಡಬ್ಲ್ಯು ಕಾರಿನಲ್ಲಿ ಶವವನ್ನು ಕೊಂಡೊಯ್ದಿದ್ದ ಬಾಲರಾಜ್ ಸಿಂಗ್ ಮತ್ತು ರವಿ ಬಂಗಾ ಅದನ್ನು ಘಗ್ಗರ್ ನದಿಗೆ ಎಸೆದಿರಬಹುದು ಎಂಬ ಅನುಮಾನ ಇದೆ.
ಅಲ್ಲದೇ ಪೊಲೀಸರ ತಂಡವು ಡೈವರ್‌ಗಳ ಸಹಾಯದಿಂದ ಮೃತದೇಹವನ್ನು ನದಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿದೆ.
ಇನ್ನು ಮೂಲಗಳ ಪ್ರಕಾರ ಪಹುಜಾ ತನ್ನ ಫೋನ್‌ನಲ್ಲಿ ಅಭಿಜಿತ್ ಸಿಂಗ್ ಅವರ ಕೆಲವು ಅಶ್ಲೀಲ ವೀಡಿಯೊಗಳನ್ನು ಹೊಂದಿದ್ದರು, ಅದನ್ನು ಅಳಿಸಲು ಅವರು ಕೇಳಿದರು, ಆದರೆ ಆಕೆ ನಿರಾಕರಿಸಿದ್ದಳು. ಹೀಗಾಗಿಯೇ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಇದ್ದು, ವಿಚಾರಣೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರ ಬೀಳಬೇಕಿದೆ.
#divyapahuja #modelmurder #murder #ghaggarriver #bmwcar #ravibanga #balarajsingh #westbengalpolice




