MIDNIGHT HIGHDRAMA IN HAVERI: ಹಾವೇರಿ ಗ್ಯಾಂಗ್ ರೇಪ್ ಪ್ರಕರಣ: ಸಂತ್ರಸ್ಥೆ ಇದ್ದ ಮಹಿಳಾ ಸಾಂತ್ವಾನಾ ಕೇಂದ್ರದಲ್ಲಿ ರಾತ್ರಿ ಹೈಡ್ರಾಮಾ..!

ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನ ದಿನದಿಂದ ದಿನಕ್ಕೆ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ನಿನ್ನೆ ರಾತ್ರಿ ನಡೆದ ಘಟನೆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. ಇದಕ್ಕೆ ಪ್ರಮುಖ ಕಾರಣ ಮಧ್ಯರಾತ್ರಿ ಮಹಿಳಾ ಸಾಂತ್ವಾನ ಕೇಂದ್ರದ ಎದುರು ‘ಕೈ’ ನಾಯಕರು ನಡೆಸಿದ ಹೈಡ್ರಾಮಾವೇ ಈ ಶಂಕೆಗೆ ಕಾರಣ ಎನ್ನಲಾಗಿದೆ.

ಹಾವೇರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಸಂತ್ರಸ್ತೆ ಭೇಟಿಗೆ ಶಾಸಕ ಬಸವರಾಜ್ ಶಿವಣ್ಣನವರು ಬಂದಿದ್ದರು. ಮಿಡ್ ನೈಟ್ ಸಂತ್ರಸ್ಥೆ ಭೇಟಿಗೆ ಬಂದ ‘ಕೈ’ ನಾಯಕರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಇದೀಗ ಅಸಮಾಧಾನ ಮೂಡಿದೆ.
ಮಿಡ್ ನೈಟ್ ಮಹಿಳಾ ಸಾಂತ್ವನ‌ ಕೇಂದ್ರದಿಂದ ಸಂತ್ರಸ್ತೆಯನ್ನು ಬೇರೆಡೆಗೆ ಶಿಷ್ಟ್ ಮಾಡಲು ‘ಕೈ’ ನಾಯಕರು ಪ್ಲ್ಯಾನ್ ಮಾಡಿದ್ರಾ.‌.? ಎಂಬ ಅನುಮಾನ ಮೂಡಿದೆ. BJP ನಿಯೋಗ ಹಾವೇರಿಗೆ ಆಗಮಿಸಿದ್ದು ಸಂತ್ರಸ್ತೆಯನ್ನು ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಕೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಖಂಡರು ಮುಂದಾಗಿದ್ದರು ಎನ್ನಲಾಗಿದೆ.
ಜ. 15 ರಂದು ಹಾವೇರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, CM ಭೇಟಿ ವೇಳೆ ಮುಜುಗರದಿಂದ ಪಾರಾಗಲು ಸಂತ್ರಸ್ತೆ ಶಿಪ್ಟ್ ಗೆ ಸ್ಥಳೀಯ ಮುಖಂಡರು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಮಹಿಳಾ ಪೊಲೀಸ್ ಪೇದೆ ಇಲ್ಲದೆ, ತಡ ರಾತ್ರಿ ಸಾಂತ್ವನ‌ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿದ್ದು, ರಾತ್ರಿ ಸಂತ್ರಸ್ತೆ ಭೇಟಿಗೆ ಬಾಗಿಲು ತೆಗೆಸಿ ಅವಕಾಶ ಮಾಡಿಕೊಟ್ಟ ಸ್ಥಳೀಯ ಪೊಲೀಸರು ಎಂದು ತಿಳಿದುಬಂದಿದೆ.
ಮಹಿಳಾ ಸಾಂತ್ವನ‌ ಕೇಂದ್ರಕ್ಕೆ ಮಿಡ್ ನೈಟ್ ಶಾಸಕನನ್ನ ಪೊಲೀಸರು ಬಿಟ್ಡಿದ್ಯಾಕೆ ಎಂಬ ಅನುಮಾನ ಇದೀಗ ಸ್ಥಳೀಯರನ್ನು ಕಾಡುತ್ತಿದ್ದು., ಶಾಸಕರೇ ಇದಕ್ಕೆ ಉತ್ತರ ನೀಡಬೇಕಾಗಿದೆ.

More News