T-20: SACHIN V/S YUVARAJ SINGH: ಸಚಿನ್, ಯುವರಾಜ್ ಸಿಂಗ್ ನಾಯಕತ್ವದಲ್ಲಿ ಟಿ-20 ಪಂದ್ಯ: ಒಂದೇ ವಿಶ್ವ ಒಂದೇ ಕುಟುಂಬ ಹೆಸರಿನಲ್ಲಿ ಸೌಹಾರ್ದ ಪಂದ್ಯ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಸತ್ಯ ಸಾಯಿ ಗ್ರಾಮದಲ್ಲಿನ ಸಾಯಿಕೃಷ್ಣ ಅಂತರಾಷ್ಟೀಯ ಕ್ರೀಡಾಂಗಣ ಉದ್ಘಾಟನೆ ಅಂಗವಾಗಿ ಜನವರಿ 18ರಂದು ಮಾಜಿ ಕ್ರಿಕೆಟಿಗರ ಸಮರ ನಡೆಯಲಿದೆ.

ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ನಾಯಕತ್ವದಲ್ಲಿ ಟಿ20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಮಾಜಿ ಕ್ರಿಕೆಟಿಗರಾದ ಸುನೀಲ್ ಗಾವಾಸ್ಕರ್, ಮುತ್ತಯ್ಯ ಮುರುಳೀಧರನ್, ಸನತ್ ಜಯಸೂರ್ಯ, ಚಮಿಂದ ವಾಸ್, ಮಾಂಟಿ ಪನೇಸರ್, ಇರ್ಫಾನ್ ಪಠಾಣ್, ಮಹಮ್ಮದ್ ಕೈಫ್ ಯೂಸುಫ್ ಪಠಾಣ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಈ T-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಚ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರು ಉಭಯ ತಂಡದಲ್ಲಿದ್ದು, ಮೈದಾನದಲ್ಲಿ ಸೆಣೆಸಲಿದ್ದಾರೆ. ಸಚಿನ್ ತೆಂಡುಲ್ಕರ್ ಒಂದು ತಂಡವನ್ನು ಮುನ್ನೆಡೆಸಿದರೆ, ಯುವರಾಜ್ ಸಿಂಗ್ ಮತ್ತೊಂದು ತಂಡದ ನಾಯಕರಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ.

ಕ್ರೀಡಾಂಗಣ ಉದ್ಘಾಟನೆಗಾಗಿ ನಡೆಯವ ಈ ಸೌಹಾರ್ದ ಪಂದ್ಯದಲ್ಲಿ ಒಂದೇ ವಿಶ್ವ ಒಂದೇ ಕುಟುಂಬ ಎಂಬ ಹೆಸರಿನಲ್ಲಿ ನಡೆಯಲಿದೆ.

More News