ಬೆಂಗಳೂರು : ಯಾರು, ಯಾರೋ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ, ಅವರು ಏನು ಹೇಳಿದ್ರು, ನೀವೇನು ಹೇಳ್ತಿರಾ ಅಂತ ಕೇಳಬೇಡಿ, ಯಾವುದಾದರೂ ರಾಜ್ಯಕ್ಕೆ ಉಪಯೋಗ ಆಗುವಂತಾದ್ದು ಇದ್ದರೆ ಕೇಳಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪತ್ರಕರ್ತರ ಮೇಲೆ ಹರಿಹಾಯ್ದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಲೋಕಸಭೆಯಲ್ಲಿ ಹೆಚ್ಚಿನ ಸೀಟು ಗೆದ್ದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪತ್ರಕರ್ತರಿಗೆ ತಿಳಿಹೇಳಿದರು. ಅವರು ಏನು ಹೇಳಿದ್ರು ಇವರೇನು ಹೇಳಿದ್ರು ಅಂತ ನಾನು ಉತ್ತರ ಕೊಡಕ್ಕಾಗುತ್ತಾ ಎಂದು ಪ್ರತ್ರಕರ್ತರನ್ನೇ ಪ್ರಶ್ನಿಸಿದ ಅವರು, ತಿರುಗಾ ತಿರುಗಾ ಅದನ್ನೇ ಕೇಳ್ತಿರಲ್ರಿ, ರಾಹುಲ್ ಗಾಂಧಿ ಹೇಳಿದ ಮೇಲೆ ಮತ್ತೆ ನನ್ನನ್ನು ಯಾಕೆ ಕಮೆಂಟ್ ಕೇಳ್ತೀರಿ, ನೀವು ನಿಮ್ಮ ಅಪ್ರೋಚ್ ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನೀವು ಸರ್ಕಾರದ ಬಗ್ಗೆ ಪ್ರಶ್ನೆ ಕೇಳಬೇಕು, ಅದಕ್ಕೆ ನಾನು ಸಿದ್ದನಾಗಿ ಬರುತ್ತೇನೆ, ಆದರೆ ಯಾರು ಯಾರೋ ಹೇಳಿಕೆಗಳಿಗೆ Why Should I Comment ಎಂದು ಪತ್ರಕರ್ತರ ಮೇಲೆ ಸಿಟ್ಟಾದರು. ಲೋಕಸಭೆಯಲ್ಲಿ ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷರು, ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡ್ತೇವೆ, ನಾವು ಗ್ಯಾರಂಟಿಗಳನ್ನೆಲ್ಲ ಅನುಷ್ಟಾನ ಮಾಡಿದ್ದೇವೆ, ನಾವು ಹೆಚ್ಚು ಸ್ಥಾನ ಗೆಲ್ಲಬೇಕು ಅಂತ ಸಂಕಲ್ಪ ಮಾಡಿದ್ದೇವೆ, ಸಿಎಂ ಮುಂದುವರಿಸುವುದು ಬಿಡುವುದು ಹೈಕಮಾಂಡ್ ನಿರ್ಧಾರ ಎಂದರು. ಅದನ್ನು ನಿರ್ಧಾರ ಮಾಡುವುದು ನಾವಲ್ಲ, ಲೋಕ ಸಭೆಗೆ ೨೮ ಸಚಿವರನ್ನು ಕರೆಸಿಕೊಂಡು ಜವಾಬ್ದಾರಿ ಕೊಟ್ಟಿದ್ದಾರೆ, ನಮಗೆ ಒಂದೊಂದು ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ, ನಮಗೆ ಸಚಿವರಿಗೆಲ್ಲ ಹೈಕಮಾಂಡ್ ಜವಾಬ್ದಾರಿ ಕೊಟ್ಟಿರುವುದು ಸತ್ಯ, ಯತೀಂದ್ರ ಹೇಳಿಕೆ ಗಮನಿಸಿಲ್ಲ, ಆದರೆ ಸಚಿವರಿಗೆಲ್ಲ ಜವಾಬ್ದಾರಿ ಕೊಡಲಾಗಿದೆ ಎಂದರು. ಯಾರ್ಯಾರೋ ಎಲ್ಲೆಲ್ಲೋ ಮಾತಾಡ್ತಾರೆ. ಅದಕ್ಕೆ ಸಚಿವರು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಯಾರ್ಯಾರೋ ಎಲ್ಲೆಲ್ಲೋ ಮಾತಾಡ್ತಾರೆ. ಅದಕ್ಕೆ ಸಚಿವರು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ, ವೈಯಕ್ತಿಕವಾಗಿ ಹೇಳಿಕೆಯನ್ನ ನೀಡ್ತಾನೇ ಇದಾರೆ . ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.
ಅದು ಅವರ ಪರ್ಸನಲ್ ಇರಬಹುದು. ಇದು ನನಗೆ ಸಂಬಂಧಿಸಿದ ವಿಚಾರ ಅಲ್ಲ, ಡಿಸಿಎಂ ವಿಚಾರವಾಗಿ ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾದ ವಿಚಾರವಾಗಿ ಡಿಸಿಎಂ ಬಗ್ಗೆ ಚರ್ಚೆ ಆಗಿಲ್ಲ. ಬರೀ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಆಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
MINISTERS ARE ANGRY WITH JOURNALISTS QUESTION: ರಾಜ್ಯಕ್ಕೆ ಉಪಯೋಗವಾಗುವಂತಹ ಪ್ರಶ್ನೆ ಕೇಳಿ: ಯಾರದ್ದೂ ಹೇಳಿಕೆಗೆ ನಾನು ಉತ್ತರ ಕೊಡಲ್ಲ: ಪತ್ರಕರ್ತರ ಮೇಲೆ ಸಚಿವರು ಗರಂ
ಬೆಂಗಳೂರು : ಯಾರು, ಯಾರೋ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ, ಅವರು ಏನು ಹೇಳಿದ್ರು, ನೀವೇನು ಹೇಳ್ತಿರಾ ಅಂತ ಕೇಳಬೇಡಿ, ಯಾವುದಾದರೂ ರಾಜ್ಯಕ್ಕೆ ಉಪಯೋಗ ಆಗುವಂತಾದ್ದು ಇದ್ದರೆ ಕೇಳಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪತ್ರಕರ್ತರ ಮೇಲೆ ಹರಿಹಾಯ್ದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಲೋಕಸಭೆಯಲ್ಲಿ ಹೆಚ್ಚಿನ ಸೀಟು ಗೆದ್ದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪತ್ರಕರ್ತರಿಗೆ ತಿಳಿಹೇಳಿದರು.
ಅವರು ಏನು ಹೇಳಿದ್ರು ಇವರೇನು ಹೇಳಿದ್ರು ಅಂತ ನಾನು ಉತ್ತರ ಕೊಡಕ್ಕಾಗುತ್ತಾ ಎಂದು ಪ್ರತ್ರಕರ್ತರನ್ನೇ ಪ್ರಶ್ನಿಸಿದ ಅವರು, ತಿರುಗಾ ತಿರುಗಾ ಅದನ್ನೇ ಕೇಳ್ತಿರಲ್ರಿ, ರಾಹುಲ್ ಗಾಂಧಿ ಹೇಳಿದ ಮೇಲೆ ಮತ್ತೆ ನನ್ನನ್ನು ಯಾಕೆ ಕಮೆಂಟ್ ಕೇಳ್ತೀರಿ, ನೀವು ನಿಮ್ಮ ಅಪ್ರೋಚ್ ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನೀವು ಸರ್ಕಾರದ ಬಗ್ಗೆ ಪ್ರಶ್ನೆ ಕೇಳಬೇಕು, ಅದಕ್ಕೆ ನಾನು ಸಿದ್ದನಾಗಿ ಬರುತ್ತೇನೆ, ಆದರೆ ಯಾರು ಯಾರೋ ಹೇಳಿಕೆಗಳಿಗೆ Why Should I Comment ಎಂದು ಪತ್ರಕರ್ತರ ಮೇಲೆ ಸಿಟ್ಟಾದರು.
ಲೋಕಸಭೆಯಲ್ಲಿ ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷರು, ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡ್ತೇವೆ, ನಾವು ಗ್ಯಾರಂಟಿಗಳನ್ನೆಲ್ಲ ಅನುಷ್ಟಾನ ಮಾಡಿದ್ದೇವೆ, ನಾವು ಹೆಚ್ಚು ಸ್ಥಾನ ಗೆಲ್ಲಬೇಕು ಅಂತ ಸಂಕಲ್ಪ ಮಾಡಿದ್ದೇವೆ, ಸಿಎಂ ಮುಂದುವರಿಸುವುದು ಬಿಡುವುದು ಹೈಕಮಾಂಡ್ ನಿರ್ಧಾರ ಎಂದರು.
ಅದನ್ನು ನಿರ್ಧಾರ ಮಾಡುವುದು ನಾವಲ್ಲ, ಲೋಕ ಸಭೆಗೆ ೨೮ ಸಚಿವರನ್ನು ಕರೆಸಿಕೊಂಡು ಜವಾಬ್ದಾರಿ ಕೊಟ್ಟಿದ್ದಾರೆ, ನಮಗೆ ಒಂದೊಂದು ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ, ನಮಗೆ ಸಚಿವರಿಗೆಲ್ಲ ಹೈಕಮಾಂಡ್ ಜವಾಬ್ದಾರಿ ಕೊಟ್ಟಿರುವುದು ಸತ್ಯ, ಯತೀಂದ್ರ ಹೇಳಿಕೆ ಗಮನಿಸಿಲ್ಲ, ಆದರೆ ಸಚಿವರಿಗೆಲ್ಲ ಜವಾಬ್ದಾರಿ ಕೊಡಲಾಗಿದೆ ಎಂದರು.
ಯಾರ್ಯಾರೋ ಎಲ್ಲೆಲ್ಲೋ ಮಾತಾಡ್ತಾರೆ. ಅದಕ್ಕೆ ಸಚಿವರು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ
5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಯಾರ್ಯಾರೋ ಎಲ್ಲೆಲ್ಲೋ ಮಾತಾಡ್ತಾರೆ. ಅದಕ್ಕೆ ಸಚಿವರು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ, ವೈಯಕ್ತಿಕವಾಗಿ ಹೇಳಿಕೆಯನ್ನ ನೀಡ್ತಾನೇ ಇದಾರೆ . ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.
ಅದು ಅವರ ಪರ್ಸನಲ್ ಇರಬಹುದು. ಇದು ನನಗೆ ಸಂಬಂಧಿಸಿದ ವಿಚಾರ ಅಲ್ಲ, ಡಿಸಿಎಂ ವಿಚಾರವಾಗಿ ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾದ ವಿಚಾರವಾಗಿ ಡಿಸಿಎಂ ಬಗ್ಗೆ ಚರ್ಚೆ ಆಗಿಲ್ಲ. ಬರೀ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಆಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
More News
2ನೇ ವಿಮಾನ ನಿಲ್ದಾಣ: ಕನಕಪುರ ರಸ್ತೆ ಎರಡು ತಾಣ ವೀಕ್ಷಿಸಿದ ಎಎಐ ತಂಡ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ
ಆನೆಗುಡ್ಡೆ ಶ್ರೀವಿನಾಯಕನ ಸನ್ನಿಧಿಯಲ್ಲಿ ‘ವೀರ ಚಂದ್ರಹಾಸ’ ಟ್ರೇಲರ್ ಅನಾವರಣ
ಗಣೇಶನ ಸನ್ನಿಧಿಯಲ್ಲಿ ಆರಂಭವಾಯಿತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ನೂತನ ಚಿತ್ರ
ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು: ಗೃಹ ಸಚಿವ ಪರಮೇಶ್ವರ