ಹಾವೇರಿ: ಸಾಂತ್ವನ ಕೇಂದ್ರಕ್ಕೆ ಸಂತ್ರಸ್ತೆ ಬಂದಾಗ ಮಾನಸಿಕವಾಗಿ ಕುಸಿದಿದ್ದಳು, ದೈಹಿಕವಾಗಿ ಹಲ್ಲೆ ನಡೆದಿದ್ದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಆಕೆಗೆ ವಿಶ್ರಾಂತಿ ಬೇಕಾಗಿತ್ತು, ಬೆನ್ನ ಮೇಲೆ ತುಂಬಾ ಹೊಡೆದಿದ್ದರಿಂದ ಸಂತ್ರಸ್ತೆಗೆ ಚಿಕಿತ್ಸೆ ಬೇಕಾಗಿತ್ತು ಎಂದು ಮಹಿಳಾ ಸಾಂತ್ವಾನ ಕೇಂದ್ರದ ಮುಖ್ಯಸ್ಥೆ ಪರಿಮಳಾ ಜೈನ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಸಾಂತ್ವಾನ ಕೇಂದ್ರದ ಮುಖ್ಯಸ್ಥರು ನೀಡಿರುವ ಹೇಳಿಕೆಯಿಂದ ಬೇರೊಂದು ಸ್ವರೂಪ ಪಡೆದುಕೊಂಡಿದೆ. ಸಂತ್ರಸ್ತೆಗೆ ಚಿಕಿತ್ಸೆ ಅಗತ್ಯ ಇದ್ದರೂ ಸಂತ್ರಸ್ಥೆ ಮಹಿಳೆ ಶಿಪ್ಟ್ ಮಾಡಿದ ವಿಚಾರ ಇದೀಗ ಬಹಿರಂಗಗೊಂಡಿದೆ.
ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆಗೆ ರೆಸ್ಟ್ ಬೇಕಾಗಿದೆ, ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ಹೇಳಿದ್ರು ತನಿಖೆಗೆ ಅಂತಾ ಹೇಳಿ ಕರೆದುಕೊಂಡು ಹೋಗಿದ್ದಾರೆ, ಸಂತ್ರಸ್ತೆಗೆ ಕೌನ್ಸಲಿಂಗ್ ಮಾಡುವುದು ಬಾಕಿಯಿತ್ತು, ಜಿಲ್ಲಾಸ್ಪತ್ರೆಯಲ್ಲಿ ನಾವು ಚಿಕಿತ್ಸೆಗೆ ಮುಂದಾಗಿದ್ದೇವು ಎಂದು ಅವರು ಹೇಳಿದ್ದಾರೆ.
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತರಲಾಗಿತ್ತು. 1 ವಾರಗಳ ಕಾಲ ಸಂತ್ರಸ್ತೆಗೆ ಕೌನ್ಸಲಿಂಗ್ ಅವಶ್ಯಕತೆ ಇದೆ, ಮಾನಸಿಕವಾಗಿ ಸಂತ್ರಸ್ತೆ ಕುಸಿದಿದ್ದಾಳೆ ಎಂದು ವಿವರಿಸಲಾಗಿತ್ತು ಎಂದು ತಿಳಿಸಿದರು.
ಮಿಡ್ ನೈಟ್ ನಲ್ಲಿ ಶಾಸಕರು ಸಾಂತ್ವನ ಕೇಂದ್ರಕ್ಕೆ ಬಂದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸಿಬ್ಬಂದಿ ಮೇಲೆ ಪೊಲೀಸರು ಒತ್ತಡ ಹಾಕಿದ್ದರು, ಸಂಜೆ 6 ಗಂಟೆ ನಂತರ ಸಾಂತ್ವನ ಕೇಂದ್ರಕ್ಕೆ ಪುರುಷರಿಗೆ ಅವಕಾಶವಿಲ್ಲ, ನನ್ನ ಗಮನಕ್ಕೆ ತಾರದೆ ಕರೆದುಕೊಂಡು ಹೋಗಿದ್ದರು, ಹಾವೇರಿ ಶಹರ ಇನ್ಸ್ಪೆಕ್ಟರ್ ವಿರುದ್ಧ SP & DCಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

ಗ್ಯಾಂಗ್ ರೇಪ್ ಶಾಕ್ ನಿಂದ ನಲುಗಿದ ಸಂತ್ರಸ್ತೆಗೆ ಚಿಕಿತ್ಸೆಯೇ ಸಿಗಲಿಲ್ಲ, ಟ್ರೀಟಮೆಂಟ್ ಕೊಡಿಸೋ ತಯಾರಿಲ್ಲಿರುವಾಗಲೇ ಪೊಲೀಸುರ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ತನಿಖೆಯ ನೆಪವೊಡ್ಡಿ ತುರಾತುರಿಯಲ್ಲಿ ಶಿರಸಿಗೆ ಆಕೆಯನ್ನು ಪೊಲೀಸರು ಶಿಪ್ಟ್ ಮಾಡಿದ್ದರು.
ಹಾನಗಲ್ ಪೊಲೀಸ್ ಠಾಣೆ ಸಿಪಿಐ ಅಮಾನತ್ತು..!
ಹಾವೇರಿ ಜಿಲ್ಲೆಗೆ ಸಿಎಂ ಬಂದು ಹೋದ ಬೆನ್ನಲ್ಲೇ ಸಿಪಿಐ ಅಮಾನತ್ತು ಮಾಡಲಾಗಿದ್ದು, ಹಾನಗಲ್ ಪೊಲೀಸ್ ಠಾಣೆ ಸಿಪಿಐ ಶ್ರೀಧರ ಅಮಾನತು ಮಾಡಲಾಗಿದೆ. ಜತೆಯಲ್ಲಿಯೇ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ರನ್ನು ಅಮಾನತು ಮಾಡಲಾಗಿದೆ.
ಪ್ರಕರಣದ ತನಿಖೆಯಲ್ಲಾದ ಲೋಪದ ಹಿನ್ನೆಲೆಯಲ್ಲಿ ದಾವಣಗೆರೆ ಪೂರ್ವ ವಲಯ ಐಜಿ ಅವರು ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇದುವರೆಗೂ ಬಂಧಿತ ಆರೋಪಿಗಳ ಸಂಖ್ಯೆ 9 ಕ್ಕೇರಿದೆ. ಪ್ರಕರಣದ ಮತ್ತೋರ್ವ ಆರೋಪಿಯನ್ನ ಬಂಧಿಸಿದ ಖಾಕಿ, ಮಫೀದ್ ಓಣಿಕೆರಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾನಗಲ್ ತಾಲೂಕಿನ ಅಕ್ಕಿಆಲೂರಿನ ನಿವಾಸಿಯಾಗಿದ್ದಾನೆ.