BOARD AND CORPORATION LIST WILL RELEASE: ನಿಗಮ ಮಂಡಳಿ ಪಟ್ಟಿ ಪ್ರಕಟ: 36 ಶಾಸಕರು ಹಾಗೂ 39 ಕಾರ್ಯಕರ್ತರಿಗೆ ಪಟ್ಟಿಯಲ್ಲಿ ಸ್ಥಾನ: ಡಿ ಕೆ ಶಿವಕುಮಾರ್

ಬೆಂಗಳೂರು : ಕೆಲವೇ ಸೆಕೆಂಡ್ ನಲ್ಲಿ ರಾಜ್ಯ ನಿಗಮ ಮಂಡಳಿ ಪಟ್ಟಿ ಪ್ರಕಟವಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 36 ಶಾಸಕರು ಮತ್ತು 39 ಕಾರ್ಯಕರ್ತರ ಮೊದಲ ಪಟ್ಟಿ ಇಂದು ಪ್ರಕಟವಾಗಲಿದೆ ಎಂದು ತಿಳಿಸಿದರು.
ನಿಗಮ ಮಂಡಳಿ ಪಟ್ಟಿ ಪ್ರಕಟವಾಗುತ್ತಿರುವುದು ಸಂಕ್ರಾಂತಿ ಗಿಫ್ಟ್ ಅಲ್ಲ, ಸರ್ಕಾರ ದಾರಿಗೆ ತಂದಿದೆ ಎಂದು ಹೇಳಿದರು.
ಪಕ್ಷ ಹೇಳಿದರೆ ಎಲ್ಲಾರೂ ಸ್ಪರ್ಧಿಸಬೇಕು
ಸಚಿವ ಸಂಪುಟದಲ್ಲಿರುವ ಸಚಿವರು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕೇಳಬೇಕು, ಅವರು ಕೇಳಬೇಕು, ಪಕ್ಷ ಹೇಳಿದಂತೆ ಎಲ್ಲರೂ ಕೇಳಬೇಕು ಎಂದು ಪರೋಕ್ಷವಾಗಿ ಸಚಿವರು ಸ್ಪರ್ಧಿಸಬೇಕಾಗುತ್ತದೆ ಎಂದರು.
ನಾಳೆ ಕಾಂಗ್ರೆಸ್ ಮೀಟಿಂಗ್ ಭಾರತ್ ಜೋಡೋ ಭವನದಲ್ಲಿ ನಡೆಯಲಿದೆ. ಪ್ರಧಾನಿ ಮೋದಿ‌ ರಾಜ್ಯಕ್ಕೆ ಬರ್ತಾ ಇದ್ದಾರೆ, ಸಿಎಂ ಕೂಡ ಅಲ್ಲಿ ಇರಬೇಕಾಗುತ್ತೆ, ಹೀಗಾಗಿ ನಾಳೆ ಸಂಜೆ 4.30 ಬಳಿಕ‌ ಮೀಟಿಂಗ್ ಇದೆ, ಲೋಕಸಭಾ ಚುನಾವಣೆ ಬಗ್ಗೆ ಮೊದಲ ಮೀಟಿಂಗ್ ಇದಾಗಿದೆ ಎಂದರು.
ಈಗಾಗಲೇ ವೀಕ್ಷಕರು ಲಿಸ್ಟ್ ‌ಕೊಟ್ಟಿದ್ದಾರೆ, ಅದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು ಅವರು, ಸಂಸದೆ ಸುಮಲತಾ ಅಂಬರೀಷ್ ಕಾಂಗ್ರೆಸ್ ಸೇರುತ್ತಾರೆಂಬ ವಿಚಾರವಾಗಿ ಮಾತನಾಡಿದ ಅವರು, ನನಗೆ ಗೊತ್ತಿಲ್ಲ, ನಿಮಗೆ ಗೊತ್ತಾ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

More News