SANIA MIRZA AND SHOAIB MALIK: ಪಾಕ್ ನಟಿ ಜಾವೇದ್ ರನ್ನು ವರಿಸಿದ ಶೋಯಬ್ ಮಲಿಕ್: ಸಾನಿಯಾ ಮಿರ್ಜಾ ಜತೆ ವಿಚ್ಚೇದನ ವದಂತಿಗೆ ಪುಷ್ಠಿ ನೀಡಿದ ಫೋಟೋಸೇ

ನವದೆಹಲಿ : ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರು ವಿಜ್ಜೇದನ ನೀಡಿದ್ದಾರೆ ಎಂಬ ವದಂತಿಗಳು ಸಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವಾಗಲೇ ಇನ್ನೊಂದು ಸುದ್ದಿ ಬಹಳ ಚರ್ಚೆಗೆ ಗ್ರಾಸವಾಗಿದೆ.

ಶೋಯಬ್ ಮಲಿಕ್ ಅವರು ಪಾಕಿಸ್ತಾನದ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ ಎಂಬ ಸುದ್ದಿ ಬಹಳಷ್ಟು ಸದ್ದು ಮಾಡುತ್ತಿದೆ. ಸನಾ ಅವರೊಂದಿಗೆ ಹಸಮಣಿ ಏರಿರುವ ಫೋಟೋಗಳು ಇದೀಗ ಶೋಯಬ್ ಮಲಿಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಅವರು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.

https://twitter.com/realshoaibmalik/status/1748588432366936242?s=20

ಸಾನಿಯಾ ಮಿರ್ಜಾ ಶೋಯಬ್ ಮಲಿಕ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಸಾಕಷ್ಟು ದಿನಗಳಿಂದ ಹರಿದಾಡುತ್ತಿದ್ದವು. ಆದರೆ, ಇದ್ಯಾವುದಕ್ಕೂ ಅವರಿಬ್ಬರಿಂದಲೂ ಸ್ಪಷ್ಟನೆ ದೊರೆತಿರಲಿಲ್ಲ. ಇದೀಗ ಶೋಯಬ್ ಅವರು ಹಂಚಿ ಕೊಂಡಿರು ಫೋಟೋಗಳಿಂದ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಇದೆ ಎನ್ನುವುದು ಸ್ಪಷ್ಟವಾಗಿದೆ ಎನ್ನುತ್ತಿವೆ ಮೂಲಗಳು.

ಇನ್ನೊಂದೆಡೆ, ಖ್ಯಾತ ಪಾಕಿಸ್ತಾನಿ ನಟಿ ಸನಾ, ಈ ಹಿಂದೆ ಗಾಯಕ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರು. ಇಬ್ಬರೂ 2020 ರಲ್ಲಿ ವಿವಾಹವಾಗಿದ್ದರು. ಆದರೆ, ಅವರ ಇಬ್ಬರೂ ಪ್ರತ್ಯೇಕವಾಗಿರುವ ಕಾರಣ ಮಾತ್ರ ತಿಳಿದುಬಂದಿಲ್ಲ.

ಇದೀಗ ಸಾನಿಯಾ ಮಿರ್ಜಾ ಮತ್ತು ಮಲಿಕ್ 2012 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಜಾನ್ ಎಂಬ ಗಂಡು ಮಗು ಇದ್ದು, ಇದೀಗ ಶೋಯೆಬ್ ಅವರ ಮದುವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

More News

You cannot copy content of this page