B K HARIPRASAD ENQUIRY: ಪೊಲೀಸರ ವಿಚಾರಣೆ: ರಾಜ್ಯಪಾಲರು ವಿಚಾರಣೆ ಮಾಡಿ ಎಂದಿರಬೇಕು: ಎಲ್ಲಾದರಲ್ಲೂ ಇದೇ ರೀತಿಯಾಗಬೇಕು: ನನಗೆ ಮಾತ್ರ ಆದರೆ ಉತ್ತರ ಹುಡುಕಬೇಕಾಗುತ್ತದೆ: ಬಿ ಕೆ ಹರಿಪ್ರಸಾದ್

ಬೆಂಗಳೂರು : ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಟ್ಟಿದ್ದರು, ವಿಚಾರಣೆ ಮಾಡಿ ತಿಳಿಸಿ ಎಂದು ರಾಜ್ಯಪಾಲರು ಹೇಳಿರಬೇಕು, ಇಷ್ಟೊಂದು ಕ್ರಿಪ್ಷವಾಗಿ ಕೇಸ್ ಪ್ರಗತಿ ಕಂಡಿದೆ, ಎಲ್ಲಾ ಪ್ರಕರಣಗಳು ಹೀಗೆ ಆದರೆ ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ನಮಗೆ ಮಾತ್ರ ಹೀಗೆ ಅಂದ್ರೆ ಉತ್ತರ ಹುಡುಕಬೇಕಾಗುತ್ತದೆ ಎಂದು ಪರೋಕ್ಷವಾಗಿ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ಸಂವಿಧಾನದ ಒಂದು ಅಂಗ ಇದ್ದಂತೆ, ನಾನು ಪರಿಷತ್ ಸದಸ್ಯ ಸ್ಪೀಕರ್ ಅವರ ಅನುಮತಿ ತೆಗೆದುಕೊಳ್ಳಬೇಕಿತ್ತು, ಶಿಷ್ಟಾಚಾರದ ಉಲ್ಲಂಘನೆ ಕೂಡ ಆಗಿದೆ ಎಂದು ಆರೋಪಿಸಿದರು.
ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತಂದಿದ್ದೇವೆ ಅಂತ ಪೊಲೀಸರು ಹೇಳಿದ್ದಾರೆ, ಆದರೆ ಇದು ಗೃಹ ಸಚಿವರ ಗಮನಕ್ಕೆ ಇಲ್ಲ ಅನ್ನಿಸುತ್ತದೆ, ನಾನು ಎಂದೂ ಸಿಎಂ ಹೆಸರೇಳಿ ಅವರ ವಿರುದ್ಧ ಮಾತನಾಡಿಲ್ಲ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ ಎಂದು ಅವರು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.
ಒಳ ಮೀಸಲಾತಿ ವಿಚಾರ
ಒಳ ಮೀಸಲಾತಿ ವಿಚಾರ ಹಲವಾರು ವರ್ಷಗಳಿಂದಲೂ ಇದೆ, ದೆಹಲಿಯಲ್ಲಿ ರೋಹಿಣಿ ಕಮಿಷನ್ ಅಂತಲೂ ಮಾಡಿದ್ದಾರೆ, ಸರ್ಕಾರ ತೀರ್ಮಾನ ಇವಾಗ ತೆಗೆದುಕೊಂಡಿದೆ, ಹಿಂದೆ ಬಿಜೆಪಿ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ಕಳಿಸಿದ್ದರು, ಆಗ ಅವರು ಗೊತ್ತಿಲ್ಲ ಅಂದಿದ್ದರು ಎಂದು ಆರೋಪಿಸಿದರು.
ಆದರೆ ಏನೇ ಆಗಬೇಕು ಅಂದರೆ ಸಂಸತ್ತಿಗೆ ಬರಬೇಕು, ಕಾಂತರಾಜ್ ವರದಿ ಏನಿದೆ ಏನಿಲ್ಲ, ಅನ್ನೋದು ಗೊತ್ತಿಲ್ಲ, ವರದಿಯಲ್ಲಿ ಏನಿದೆ ಅಂತ ಬಹಿರಂಗಗೊಳಿಸಬೇಕು, ಒಳ್ಳೆಯದು ಕೆಟ್ಟದು ಏನಿದೆ ಅಂತ ಗೊತ್ತಾಗಬೇಕು ಎಂದು ಒತ್ತಾಯಿಸಿದರು.

More News