ಕೊಪ್ಪಳ: 2009-10ನೇ ಕ್ಲೋಜರ್ ಅವಧಿಯ 9 ಪ್ರಕರಣಗಳು ಮತ್ತು 2010-11ನೇ ಕ್ಲೋಜರ್ ಅವಧಿಯ 4 ಪ್ರಕರಣಗಳು ಒಟ್ಟು 13 ಪುಕರಣಗಳಲ್ಲಿ ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ / ನೌಕರರುಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಬೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಆರ್ಬಿಟ್ರೇಟರ್ ರವರಿಗೆ ನೀಡಿ ಗುತ್ತಿಗೆದಾರರ ಪರವಾಗಿ ಆರ್ಬಿಟ್ರೇಷನ್ ಅವಾರ್ಡ್ ಆಗಲು ಹಾಗೂ ಸರ್ಕಾರಕ್ಕೆ ಸುಮಾರು ರೂ.650 ಕೋಟಿಗಳ ಮೌಲ್ಯದನ್ವಯ (ಮುಂದಿನ ದಿನಗಳಲ್ಲಿ ಉದ್ಭವಿಸುವ ವಾರ್ಷಿಕವಾಗಿ ಶೇ.15ರಷ್ಟು ಬಡ್ಡಿ ಮೊತ್ತವನ್ನು ಹೊರತುಪಡಿಸಿ) ಉಂಟಾಗಬಹುದಾದ ಆರ್ಥಿಕ ಹೊರೆಗೆ ಕಾರಣರಾಗಿ ಅರ್ಬಿಟ್ರೇಷನ್ ಅವ್ಯವಹಾರದಲ್ಲಿ ಭಾಗಿಯಾಗಿರುವ ಕೆಳಕಂಡ 28 ಆರೋಪಿತ ಅಧಿಕಾರಿ / ನೌಕರರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇವರುಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ / ಶಿಸ್ತು ಕ್ರಮ ಬಾಕಿ ಇರಿಸಿ,ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10(1)(d) ರನ್ನಯ ಇವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.

ಅಧಿಕಾರಿ/ನೌಕರರುಗಳ ವಿವರಗಳು

- ಶ್ರೀ ಅನಂತ ಕುಮಾರ್ ಚೂರಿ,ಸಹಾಯಕ ಕಾರ್ಯಪಾಲಕ ಇಂಜಿನಿಯರ್, (ಪ್ರಸ್ತುತ ಅಧೀಕ್ಷಕ ಇಂಜಿನಿಯರ್,ಮುಖ್ಯ ಇಂಜಿನಿಯರ್ ರವರ ಕಚೇರಿ, ಸಂಪರ್ಕ ಮತ್ತು ಕಟ್ಟಡಗಳು (ಉತ್ತರ), ಧಾರವಾಡ).
2.ವಿನೋದ್ ಕುಮಾರ್ ಗುಪ್ತ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, (ಪ್ರಸ್ತುತ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆ).
ಎಂ. ಹನುಮಂತಪ್ಪ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಂ.1, ಕಾಲುವೆ ಉಪ ವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ತುರುವಿಹಾಳ, ರಾಯಚೂರು ಜಿಲ್ಲೆ).
4 ಬಿ. ಶಿವಮೂರ್ತಿ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಚಿತ್ರದುರ್ಗ).
- ಸೂಗಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪ್ರಭಾರ), (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗ ಕುಷ್ಟಗಿ).
ಶ್ರೀ ವಿ. ತಿಮ್ಮಣ್ಣ, ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬಳ್ಳಾರಿ ಉಪ ವಿಭಾಗ, ಬಳ್ಳಾರಿ).
ಶ್ರೀ ಈಶ್ವರ ನಾಯಕ್ ಸಹಾಯಕ ಇಂಜಿನಿಯರ್, (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಂ.2 ಹೆಚ್.ಆರ್.ಬಿ.ಸಿ ಉಪ ವಿಭಾಗ, ಕಾವೇರಿ ನೀರಾವರಿ ನಿಗಮ ನಿಯಮಿತ, ಹೊಸೂರು, ಕೆ.ಆರ್.ನಗರ ತಾ||. ಮೈಸೂರು ಜಿಲ್ಲೆ)





