ನವದೆಹಲಿ : ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದ ದಿನವಾದ ಜನವರಿ 22ರಂದು ತುರ್ತು ಸೇವೆಗೆಳನ್ನು ಹೊರತುಪಡಿಸಿ ಉಳಿದ ಸೇವೆಗೆಳಿಗೆ ಅರ್ಧ ದಿನ ಅಂದರೆ ಮಧ್ಯಾಹ್ನ 2.30ರವರೆಗೆ ರಜೆ ಘೋಷಿಸಿದ್ದ ನಿರ್ಧಾರವನ್ನು ಏಮ್ಸ್ ಹಿಂಪಡೆದಿದೆ.
ಏಮ್ಸ್ ನ ಆಡಳಿತ ಮಂಡಳಿ ಕಚೇರಿ ಅಧಿಕಾರಿ ರಾಜೇಶ್ ಕುಮಾರ್ ಅವರು, ಕೇಂದ್ರ ಸರ್ಕಾರ ಜನವರಿ 22ರಂದು ಅರ್ಧ ದಿನ ರಜೆ ಘೋಷಿಸಿದೆ. ಆದ್ದರಿಂದ ನಮ್ಮ ಎಲ್ಲಾ ಉದ್ಯೋಗಿಗಳಿಗೂ ಅರ್ಧದಿನ ರಜೆ ಘೋಷಿಸಲಾಗಿದೆ, ಆದರೆ, ತುರ್ತು ವೈದ್ಯಕೀಯ ಸೇವೆಗಳು ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದ್ದರು.
ಆದರೆ, ಈ ಅಧಿಸೂಚನೆ ಭಾರೀ ವಿರೋಧ ವ್ಯಕ್ತವಾಗಿತ್ತು. ರೋಗಿಗಳು ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಏಕಾಏಕಿ ಒಪಿಡಿ ಸೇವೆಗಳನ್ನು ಬಂದ್ ಮಾಡಿದರೆ, ರೋಗಿಗಳಿಗೆ ಕಷ್ಟವಾಗಲಿದೆ ಎಂಬ ಟೀಕೆಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಹೊಸ ಅಧಿಸೂಚನೆ ಹೊರಡಿಸಿದ್ದು, ಒಪಿಡಿಗೆ ಅಪಾಯಿಂಟ್ ಮೆಂಟ್ ಇರುವ ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೇವೆಗಳು ಲಭ್ಯವಿರಲಿವೆ ಎಂದು ತಿಳಿಸಿದೆ. ಅಯೋಧ್ಯೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಏಮ್ಸ ಆಡಳಿತ ಮಂಡಳಿ ಘೋಷಣೆಗೆ ಅನೇಕ ರಾಜಕೀಯ ಪಕ್ಷಗಳು ಕಟ್ಟುವಾಗಿ ಟೀಕಿಸಿದ್ದವು.,




