Ram Mandir Prana Prathista: ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ: ವಾಣಿಜ್ಯ ನಗರಿಯಲ್ಲಿ ಕಳೆಗಟ್ಟಿದ ಸಂಭ್ರಮ:ಹೋಮ ಹವನ, ಮನಸೆಳೆಯುತ್ತಿದೆ 12 ಅಡಿ ಎತ್ತರದ ರಾಮಮೂರ್ತಿ…

ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಮೋತ್ಸವ ಅದ್ದೂರಿಯಾಗಿ ಆಚರಿಸಲು ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮದಿಂದ ಸಿದ್ಧಗೊಂಡಿದೆ.

ಅವಳಿನಗರ ಎಲ್ಲೆಡೆ ರಾಮಜಪ ಆರಂಭವಾಗಿದೆ. 200 ಕ್ಕೂ ಹೆಚ್ಚು ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ ಶ್ರೀರಾಮ ಹಾಗೂ ಹನುಮಂತನಿಗೆ ವಿಶೇಷ ಪೂಜೆ- ಹೋಮ್ ಹಾಗೂ ಹವನಗಳು ಹಮ್ಮಿಕೊಳ್ಳಲಾಗಿದ್ದು,
ಅಯೋಧ್ಯೆಯಲ್ಲಿ ನಡೆಯುವ ಭವ್ಯ ಸಮಾರಂಭವನ್ನು ವೀಕ್ಷಿಸಲು ವಿವಿಧ ಸಂಘ, ಸಂಸ್ಥೆಗಳು 100 ಕ್ಕೂ ಹೆಚ್ಚು ಕಡೆ ಎಲ್‌ಇಡಿ ಪರದೆ ಅಳವಡಿಕೆ ಮಾಡಿವೆ.‌ ಪ್ರತಿಯೊಂದು ದೇವಸ್ಥಾನಗಳಲ್ಲಿ ಅನ್ನ ಸಮರ್ಪಣೆಯ ಕಾರ್ಯ, 15 ಕ್ಕೂ ಹೆಚ್ಚು ಶೋಭಾ ಯಾತ್ರೆಗಳು, ಕೆಲ ಸಂಘ ಸಂಸ್ಥೆಗಳಿಂದ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಠಾಶರಿಂದ ಪ್ರವಚನ, ಕರಸೇವಕರ ಸನ್ಮಾನ ಹಾಗೂ ಭಕ್ತಿ ಸಮಾರಂಭ ನಡೆಯುತ್ತಿವೆ.
ಹುಬ್ಬಳ್ಳಿಯ ಸ್ಟೇಶನ್ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ, ಕಮರಿಪೇಟ್ ರಾಮಮಂದಿರ, ದಾಜಿಬಾನಪೇಟನ ತುಳಜಾಭವಾನಿ ದೇವಸ್ಥಾನ, ಗಣೇಶ ದೇವಸ್ಥಾನ, ಮೂರು ಸಾವಿರ ಮಠ, ಸಾಯಿ ಬಾಬಾ ಮಂದಿರ, ಸಿದ್ಧಾರೂಢ ಮಠ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಈಗಾಗಲೇ ರಾಮಜಪಾ, ಭಗವದ್ಗೀತೆ ಪಠಣ, ಭಜನೆ, ಭಕ್ತಿಗೀತೆ, ರಾಮನಾಧಾರಿತ ನಾಟಕ ಪ್ರದರ್ಶನ, ನೃತ್ಯ ಪ್ರದರ್ಶನ, ಯಕ್ಷಗಾನ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಯಲಿವೆ. ಇನ್ನೂ ಅವಳಿ ನಗರದಲ್ಲಿ ಬಂದೋಬಸ್ತ್‌ಗಾಗಿ 2500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಜೊತೆ ಕೆಎಸ್‌ಆರ್‌ಪಿ ತುಕುಡಿ ಹಾಗೂ 100 ಮಂದಿ ಗೃಹರಕ್ಷಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ರಾಮನಿಗೆ ಹೋಮ ಹವನ…

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗವಳಿ ಗಲ್ಲಿಯಲ್ಲಿರುವ ಸೀತಾ ರಾಮ ಶಿವ ಮಂದಿರದಲ್ಲಿ ಹಾಗೂ ಕಮರಿಪೇಟ್‌ನಲ್ಲಿರುವ ರಾಮಮಂದಿರಲ್ಲಿ ಹೋಮ ಹವನ..
ಪೂಜೆಗಳು ಆರಂಭವಾಗಿವೆ.
ಅರ್ಚಕರು ಸೀತಾ ರಾಮನ ಮೂರ್ತಿಗೆ ಅಲಂಕಾರ ಮಾಡಿ,
ಬೆಳಗ್ಗೆ ಆರು ಗಂಟೆಯಿಂದಲೇ ವಿಶೇಷ ಆರಂಭ ಮಾಡಿದ್ದಾರೆ.
ಜೊತೆಗೆ ಅಗ್ನಿಹೋತ್ರ ಆರಂಭಿಸಿದ್ದಾರೆ.

12 ಅಡಿ ಉದ್ಧದ ರಾಮನ ಮೂರ್ತಿ ಪ್ರತಿಷ್ಟಾಪನೆ…

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ
ಹುಬ್ಬಳ್ಳಿಯ ಗವಳಿ ಗಲ್ಲಿಯ ರಾಮ ಭಕ್ತರು 12 ಅಡಿ ಉದ್ಧದ ರಾಮನ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಾರೆ.
ಬೆಳಗಾವಿ ಕಲಾವಿದರ ತಯಾರಿಸಿದ 12 ಅಡಿ ಉದ್ಧದ ರಾಮನ ಮೂರ್ತಿ ತಂದಿದ್ದು, ಸುಮಾರು 1 ಲಕ್ಷ 80 ಸಾವಿರ ಖರ್ಚು ಮಾಡಿ ರಾಮನ ಮೂರ್ತಿ ಸಾರ್ವಜನಿಕರ ದರ್ಶನಕ್ಕೆ ಇಟ್ಟಿದ್ದಾರೆ. ಈ ಮೂರ್ತಿಯ ಎದುರು ರಾತ್ರಿಯಿಂದಲೇ ರಾಮಭಕ್ತರು ಆಗಮಿಸಿ ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಿದ್ದಾರೆ.

More News

You cannot copy content of this page