ಬೆಂಗಳೂರು : ಬಿಯರ್ ಮೇಲಿನ ಅಬಕಾರಿ ತೆರಿಗೆಯನ್ನು ಶೇಕಡಾ ಹತ್ತರಷ್ಟು ಹೆಚ್ಚಿಸಲು ಅಬಕಾರಿ ಇಲಾಖೆ ಮುಂದಾಗಿದ್ದು, ಪ್ರತಿ ಬಾಟಲಿನ ಬಿಯರ್ ನ ದರದಲ್ಲಿ ರೂಪಾಯಿ 8ರಿಂದ ರೂಪಾಯಿ 10 ಏರಿಕೆ ಕಾಣುವ ಸಾಧ್ಯತೆಗಳಿವೆ.


ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ನಿಯಮಗಳು -2014 ರ ಕರಡನ್ನು ರಾಜ್ಯಪತ್ರದಲ್ಲಿ ಹೊರಡಿಸಿದೆ. ಇದರಿಂದ ಬಿಯರ್ ಮೇಲಿನ ಹೆಚ್ಚುವರಿ ಅಬಕರಾರಿ ತೆರಿಗೆ ಮೂಲ ಘೋಷಿತ ದರದ ಶೇಕಡಾ 185 ರಿಂದ ಶೇಕಡಾ 195 ಕ್ಕೆ ಏರಿಕೆ ಮಾಡಲುಕರ್ನಾಟಕ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಅಬಕಾರಿ ಇಲಾಖೆ ಮುಂದಾಗಿದೆ.

ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದ್ದು, ಆಸ್ಕತ ಆಕ್ಷೇಪಣೆಗಳನ್ನು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅವರಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಜನವರಿ ಕೊನೆಯ ವಾರ ಅಥವಾ ಪೆಬ್ರವರಿ ಮೊದಲ ವಾದಿಂದ ಹೊಸ ನಿಯಮಗಳ ಅನ್ವಯ 650 ಮಿ. ಲೀ. ಅಳತೆಯ ಬಾಟಲಿಯ ಮೇಲೆ ಎಂಟರಿಂದ ಹತ್ತು ರೂಪಾಯಿ ಹೆಚ್ಚಳವಾಗಲಿದೆ.
2023 ರ ಜುಲೈ ತಿಂಗಳಲ್ಲಿ ಭಾರತೀಯ ಮದ್ಯ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇಕಡಾ 20ರಷ್ಟು ಮತ್ತು ಬಿಯರ್ ಮೇಲಿನ ಹೆಚ್ಚುವರಿ ತೆರಿಗೆಯನ್ನು ಶೇಕಡಾ 10 ರಷ್ಟು ಏರಿಕೆ ಮಾಡಲಾಗಿತ್ತು. ಆರು ತಿಂಗಳಲ್ಲೇ ಮತ್ತೊಮ್ಮ ಬಿಯರ್ ಮೇಲೆ ಮತ್ತೆ ಬೆಲೆ ಏರಿಕೆ ಆಗಲಿದೆ.




