ದುಬೈ : ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಸಿಸಿ ವರ್ಷದ ಟಿ20 ತಂಡದ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರ ಜತೆಯಲ್ಲಿಯೇ ಟೀಮ್ ಇಂಡಿಯಾದ ಇನ್ನಿತರ ಮೂವರು ಆಟಗಾರರು ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಎಡಗೈ ವೇಗಿ ಅರ್ಷ್ ದೀಪ್ ಸಿಂಗ್ ಸ್ಥಾನ ಪಡೆದವರಾಗಿದ್ದಾರೆ. ಸೂರ್ಯ ಕುಮಾರ್ ಯಾದವೇ ಸತತವಾಗಿ ಎರಡನೇ ವರ್ಷ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವರ್ಷವಿಡೀ ಅತ್ಯುತ್ತಮ ಬೌಲಿಂಗ್, ಬ್ಯಾಚಿಂಗ್ ಹಾಗೂ ಆಲ್ ರೌಂಡರ್ ಪ್ರದರ್ಶನ ತೋರಿದ 11 ಅತ್ಯುತ್ತಮ ಕ್ರಿಕೆಟಿಗರನ್ನು ಐಸಿಸಿ ವರ್ಷದ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ಆಯ್ಕೆಯಾದ ಈ ತಂಡದಲ್ಲಿ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ ವಿರಾಮ ತೆಗೆದುಕೊಂಡಾದ ಸೂರ್ಯ ಕುಮಾರ್ ಯಾದವ್ ಭಾರತ ತಂಡದ ನಾಯಕರಾಗಿದ್ದರು. ಹಾಗೂ 2023ರಲ್ಲಿ ಅವರು ಅತ್ಯುತ್ತಮ ಪ್ರದರ್ಶನ ತೋರಿದ್ದರು. ಟೀಮ್ ಇಂಡಿಯಾದ ನಾಲ್ವರು ಆಟಗಾರರ ಜತೆ, ಇಂಗ್ಲೆಂಡ್ ನ ಫಿಲ್ ಸಾಲ್ಟ್, ವಿಕೆಟ್ ಕೀಪರ್ ಆಗಿ ವೆಸ್ಟ್ ಇಂಡೀಸ್ ನ ನಿಕೋಲಸ್ ಪೂರನ್, ನ್ಯೂಜಿಲೆಂಡ್ ನ ಮಾರ್ಕ್ ಚಾಪ್ ಮನ್, ಜಿಂಬಾಬ್ವೆಯ ಸಿಕಂದರ್ ರಜಾ, ಉಗಾಂಡಾದ ಆಲ್ ರೌಂಡರ್ ಅಲ್ಪೇಶ್ ರಾಮ್ ಜಾನಿ, ಐರ್ಲ್ಯಾಂಡ್ ನ ಮಾರ್ಕ್ ಅಡೈರ್ 11 ಸದಸ್ಯರ ತಂಡದಲ್ಲಿ ಆಯ್ಕೆಯಾಗಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಭಾರತದ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಏಕೈಕ ಕ್ರಿಕೆಟರ್ ಆಯ್ಕೆಯಾಗಿದ್ದಾರೆ.




