ಗುವಾಹಟಿ : ಆಸ್ಸಾಂನಲ್ಲಿ ಸರಣಿ ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಹಿಂತ ಬಿಸ್ವ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಭಾರತ ಜೋಡೋ ನ್ಯಾಯ್ ಯಾತ್ರೆಯ ಅಂಗವಾಗಿ ಇಂದು ಆಸ್ಸಾಂನ ಹಜೋದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಅವರು, ಸಿಎಂ ಅವರು ನಿಮ್ಮ ಅಡಿಕೆಯನ್ನು ಕದ್ದಿದ್ದಾರೆ. ನಿಮ್ಮ ಜೇಬಿನಿಂದ ಹಣ ಕದ್ದಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿಯೂ ಭೂಮಿಯನ್ನು ಕದ್ದಿದ್ದಾರೆ ಎಂದು ಆರೋಪ ಮಾಡಿದರು.
ಅಮಿತ್ ಷಾ ಅವರ ನಿಯಂತ್ರಣದಲ್ಲಿ ಶರ್ಮಾ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್, ಇದೇ ವೇಳೆ ಮಾಜಿ ಮುಖ್ಯಮಂತ್ರಿ ತರುಣ್ ಗೋಗೊಯಿ ಅವರನ್ನು ಸ್ಮರಿಸಿದರು. ಅವರು ಸಿಎಂ ಆಗಿದ್ದಾಗ ಆಸ್ಸಾಂನ ಸಮಗ್ರ ಅಭಿವೃದ್ಧಿಗೆ ಕಾರಣವಾಯಿತು. ಅವರಿಗೆ ಎಂದಿಗೂ ನಾನು ಏನು ಮಾಡಬೇಕೆಂದು ಹೇಳುತ್ತಿರಲಿಲ್ಲ, ಆದರೆ ಅವರು ಸಮಗ್ರ ಅಭಿವೃದ್ದಿ ಮಾಡಿದ್ದಾರೆ ಎಂದರು. ಮುಂದುವರೆದು ಮಾತನಾಡಿದ ಅವರು, ನನ್ನ ಮನೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿದೆ, ನಾನು ಅಲ್ಲಿ ವಾಸಿಸುತ್ತೇನೆ, ಆಸ್ಸಾಂ, ಒಡಿಶಾ, ಉತ್ತರ ಪ್ರದೇಶ ಇತರ ಎಲ್ಲಾ ರಾಜ್ಯಗಳಲ್ಲಿ ನನಗೆ ಲಕ್ಷಾಂತರ ಮನೆಗಳಿವೆ ಎಂದು ಹೇಳಿದರು. ಭಾರತ ಜೋಡೋ ನ್ಯಾಯ ಯಾತ್ರೆಯು ಗುವಾಹಟಿ ಮಂಗಳವಾರ ಪ್ರವೇಶಿಸುತ್ತಿದ್ದಂತೆ ಆಸ್ಸಾಂ ಸರ್ಕಾರ ತಡೆಯೊಡ್ಡಿತ್ತು. ಈ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
MOST CORRUPT CM..?: ಆಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ..? : ರಾಹುಲ್ ಗಾಂಧಿ
ಗುವಾಹಟಿ : ಆಸ್ಸಾಂನಲ್ಲಿ ಸರಣಿ ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಹಿಂತ ಬಿಸ್ವ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಭಾರತ ಜೋಡೋ ನ್ಯಾಯ್ ಯಾತ್ರೆಯ ಅಂಗವಾಗಿ ಇಂದು ಆಸ್ಸಾಂನ ಹಜೋದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಅವರು, ಸಿಎಂ ಅವರು ನಿಮ್ಮ ಅಡಿಕೆಯನ್ನು ಕದ್ದಿದ್ದಾರೆ. ನಿಮ್ಮ ಜೇಬಿನಿಂದ ಹಣ ಕದ್ದಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿಯೂ ಭೂಮಿಯನ್ನು ಕದ್ದಿದ್ದಾರೆ ಎಂದು ಆರೋಪ ಮಾಡಿದರು.
ಅಮಿತ್ ಷಾ ಅವರ ನಿಯಂತ್ರಣದಲ್ಲಿ ಶರ್ಮಾ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್, ಇದೇ ವೇಳೆ ಮಾಜಿ ಮುಖ್ಯಮಂತ್ರಿ ತರುಣ್ ಗೋಗೊಯಿ ಅವರನ್ನು ಸ್ಮರಿಸಿದರು. ಅವರು ಸಿಎಂ ಆಗಿದ್ದಾಗ ಆಸ್ಸಾಂನ ಸಮಗ್ರ ಅಭಿವೃದ್ಧಿಗೆ ಕಾರಣವಾಯಿತು. ಅವರಿಗೆ ಎಂದಿಗೂ ನಾನು ಏನು ಮಾಡಬೇಕೆಂದು ಹೇಳುತ್ತಿರಲಿಲ್ಲ, ಆದರೆ ಅವರು ಸಮಗ್ರ ಅಭಿವೃದ್ದಿ ಮಾಡಿದ್ದಾರೆ ಎಂದರು.
ಮುಂದುವರೆದು ಮಾತನಾಡಿದ ಅವರು, ನನ್ನ ಮನೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿದೆ, ನಾನು ಅಲ್ಲಿ ವಾಸಿಸುತ್ತೇನೆ, ಆಸ್ಸಾಂ, ಒಡಿಶಾ, ಉತ್ತರ ಪ್ರದೇಶ ಇತರ ಎಲ್ಲಾ ರಾಜ್ಯಗಳಲ್ಲಿ ನನಗೆ ಲಕ್ಷಾಂತರ ಮನೆಗಳಿವೆ ಎಂದು ಹೇಳಿದರು.
ಭಾರತ ಜೋಡೋ ನ್ಯಾಯ ಯಾತ್ರೆಯು ಗುವಾಹಟಿ ಮಂಗಳವಾರ ಪ್ರವೇಶಿಸುತ್ತಿದ್ದಂತೆ ಆಸ್ಸಾಂ ಸರ್ಕಾರ ತಡೆಯೊಡ್ಡಿತ್ತು. ಈ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
More News
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು? ಹೊಚ್ಚಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ ಇದೇ ಮಾರ್ಚ್ 9 ರಿಂದ ಜೀ಼ ಕನ್ನಡ ವಾಹಿನಿಯಲ್ಲಿ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಬೇಟಿ ಮಾಡಿದ ಸಚಿವರ ನಿಯೋಗ
ಜಿಯೋ ಹಾಟ್ಸ್ಟಾರ್ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ “ಕ್ಷೇತ್ರಪತಿ”
ʻನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ನಂದಕುಮಾರ್ ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು?
ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ ಲಾಡ್ ಹಾಗು ಎಂಎಲ್ಸಿ ಜಕ್ಕಪ್ಪನವರ ನಡುವೆ ವಾಗ್ವಾದ