ಬೆಂಗಳೂರು : ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಚಿತ್ರರಂಗದ ಪರವಾಗಿ ಇಂದು ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಗಣ್ಯರು, ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ.
ವರನಟಡಾ. ರಾಜ್ ಕುಮಾರ್ ಅವರ ಕುಟುಂಬ ಸದಸ್ಯರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಪಾಸ್ ಇರುವ ಅನ್ಯರಿಗೆ ಮಾತ್ರ ಈಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದ್ದು, ಸುಮಾರು 1500 ಜನರು ಸೇರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರೀದ್ಯೋಮದ ಎಲ್ಲಾ ಚಟುವಟಿಕೆಗಳಿಗೆ ರಜೆ ಘೋಷಿಸಲಾಗಿದೆ.
ಕಾರ್ಯಕ್ರಮದಲ್ಲಿ ನಾನಾ ಕಲಾವಿದರು ಅಪ್ಪು ಹಾಡುಗಳನ್ನು ಹಾಡುವ ಮೂಲಕ ಗೀತ ನಮನ ಸಲ್ಲಿಸಲಿದ್ದಾರೆ. ಹತ್ತು ನಿಮಿಷಗಳ ಕಾಲ ಅಪ್ಪುವಿನ ಸಿನಿ ಜರ್ನಿ ಕುರಿತ ವಿಡಿಯೋ ಪ್ರದರ್ಶನವಿದ್ದು, ಉಳಿದಂತೆ ಗೀತೆಗಳನ್ನು ಹಾಡಿನಮನ ಸಲ್ಲಿಸಲಿದ್ದಾರೆ.

ಕನ್ನಡದ ಸ್ಟಾರ್ ನಟರಾದ ದರ್ಶನ್, ಯಷ್, ಸುದೀಪ್,ಉಪೇಂದ್ರ, ಗಣೇಶ್,ರವಿಚಂದ್ರನ್ ಸೇರಿದಂತೆ ಅನೇಕ ಹಿರಿಯ ನಟರು ಪಾಲ್ಗೊಳ್ಳಲಿದ್ದಾರೆ. ಚಿತ್ರರಂಗದ ಸ್ಟಾರ್ ನಟರಾದ ವಿಶಾಲ್, ರಜನಿಕಾಂತ್, ಅಜಿತ್, ವಿಜಯ್ ಸೇತುಪತಿ, ದಳಪತಿ ವಿಜಯ್, ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್, ಪ್ರಭಾಸ್, ಮೋಹನ್ ಲಾಲ್ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ.
ಮೊದಲು ಶ್ರೀಧರ್ ಸಾಗರ್ ಕಡೆಯಿಂದ ಸುಗಮ ಸಂಗೀತದಿಂದಕಾರ್ಯಕ್ರಮ ಆರಂಭವಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಗೀತ ನಿರ್ದೇಶಕ ಗುರುಕಿರಣ್ ತಂಡದಿಂದ 10 ಹಾಡುಗಳು, ವಿಜಯ್ ಪ್ರಕಾಶ್ , ರಾಜೇಶ್ ಕೃಷ್ಣನ್ ಸೇರಿ ಹಲವರ ಗಾಯನ, 8 ನಿಮಿಷದ ಪುನೀತ್ಗೆ ಟ್ರಿಬ್ಯೂಟ್ ವಿಡಿಯೋ ಪ್ರದರ್ಶನಗೊಳ್ಳಲಿದೆ. LED ಸ್ಕ್ರೀನ್ ಮೇಲೆ ಸಮಾಜ ಸೇವೆಯ ವಿಟಿ, ಸಿನಿಜರ್ನಿಯ ವಿಟಿ, 4:50 ನಿಮಿಷದ ನಾಗೇಂದ್ರ ಪ್ರಸಾದ್ ರಚಿಸಿದ ಶ್ರದ್ಧಾಂಜಲಿ ಹಾಡು ಪ್ರದರ್ಶನಗೊಳ್ಳಲಿದೆ.




