KODI SRI PREDICTIONS: 2024 ಜಗತ್ತಿಗೆ ಒಳ್ಳೆಯದಲ್ಲ: ಅಕಾಲಿಕ ಮಳೆ, ಯುದ್ದ ಭೀತಿ, ಸಂತರು, ಪ್ರಧಾನಿಗಳ ನಿಧನ: ಕೋಡಿ ಶ್ರೀ ಸ್ಫೋಟಕ ಭವಿಷ್ಯ

ಗದಗ: ಗದಗದಲ್ಲಿ ಇಂದು ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದು, 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ ಎಂದು ಹೇಳಿದ್ದಾರೆ.

ಗದಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕಾಲಿಕ ಮಳೆ, ಬಾಂಬ್ ಸಿಡಿಯುವ ಸಂಭವ, ಯುದ್ಧ ಭೀತಿ ಮುಂತಾದವುಗಳಿಂದ ಜನರು ತಲ್ಲಣರಾಗಲಿದ್ದಾರೆ. ಭೂಕಂಪನ, ಜಲ ಕಂಟಕ, ಜಗತ್ತಿನ ದೊಡ್ಡ ಸಂತರು ಕೊಲೆಯಾಗಲಿದ್ದಾರೆ ಎಂದಿದ್ದಾರೆ.

ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳು ನಿಧನರಾಗುವ ಲಕ್ಷಣಗಳಿದ್ದು, ಅಸ್ಥಿರತೆ, ಯುದ್ಧ ಭೀತಿ, ಅಣು ಬಾಂಬ್ ಸ್ಫೋಟವಾಗುವ ಸಾಧ್ಯತೆಗಳಿಂದ ಜಗತ್ತಿಗೆ ವಿನಾಶ ಕಾದಿದೆ ಎಂದು ತಿಳಿಸಿದರು.

ರೋಗ, ಸುನಾಮಿಯಿಂದ ಜಗತ್ತಿಗೆ ಅಪಾಯವಿದ್ದು, ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸಲಿದ್ದಾರೆ, ದೈವ ನಂಬುವುದೊಂದೆ ಪರಿಹಾರ.. ದೈವ ಮೊರೆ ಹೋಗಬೇಕು ಎಂದು ಕರೆನೀಡಿದರು.

More News