THIS IS HINT TO JOIN BJP..? ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ: ಮೋದಿಯನ್ನು ಹೊಗಳಿದ ಜನಾರ್ಧನ ರೆಡ್ಡಿ: ಇದು ಬಿಜೆಪಿ ಸೇರುವ ಸುಳಿವಾ..?

ಕೊಪ್ಪಳ : ಕಾಂಗ್ರೆಸ್ ನಾಯಕನ ವಿರುದ್ದ ವಾಗ್ದಾಳಿ ನಡೆಸುತ್ತಲೇ ಪ್ರಧಾನಿ ಮೋದಿಯನ್ನು ಹೊಗಳುವುದರ ಮೂಲಕ ಶಾಸಕ ಜನಾರ್ದನರೆಡ್ಡಿ, ಬಿಜೆಪಿಗೆ ಸೇರ್ಪಡೆ ಅಥವಾ ಬೆಂಬಲದ ಸುಳಿವು ನೀಡಿದ್ರಾ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.

ಕೊಪ್ಪಳದಲ್ಲಿ ಬಹಿರಂಗ ಕಾರ್ಯಕ್ರಮದಲ್ಲೇ ಪ್ರಧಾನಿ ಮೋದಿಯವರನ್ನು ಹೊಗಳಿದ ಶಾಸಕ ರೆಡ್ಡಿ, ಶ್ರೀರಾಮಮಂದಿರ‌ ನಿರ್ಮಾಣದಲ್ಲಿ ಮೋದಿಯವರನ್ನು ಅಭಿನಂದಿಸಬೇಕು ಎಂದರು. ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮೋದಿ ಮಾಡಿದ್ದಾರೆ. 500 ವರ್ಷದ ಹೋರಾಟಕ್ಕೆ ಫಲ ಇದೀಗ ಫಲ ತಂದಿದೆ ಎಂದರು.
ಇನ್ನೂ ಗಂಗಾವತಿಯ ಅಭಿವೃದ್ಧಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಡ್ಡಿ ಆಗುತ್ತಿದ್ದಾರೆ, ಸೋಲಿನ ಹತಾಶೆ ಇಕ್ಬಾಲ್ ಅನ್ಸಾರಿಯನ್ನು ಕಾಡುತ್ತಿದೆ ಎಂದು ಆರೋಪಿಸಿದ ರೆಡ್ಡಿ, ಗಂಗಾವತಿ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎಂದರು.

ಕ್ಷುಲ್ಲಕ ವಿಚಾರದಲ್ಲೂ ಅಭಿವೃದ್ಧಿಗೆ ಅಡ್ಡಿ ಆಗುತ್ತಿದ್ದಾರೆ ಎಂದು ಹೇಳಿದ ಅವರು, ಎಂಪಿ ಚುನಾವಣೆ ಆದ ಮೇಲೆ ಇಕ್ಬಾಲ್ ಅನ್ಸಾರಿಯನ್ನು ಡಸ್ಟ್ ಬಿನ್ ಗೆ ಕಾಂಗ್ರೆಸ್ ನವರು ಹಾಕುತ್ತಾರೆ ಎಂದು ಜನಾರ್ದನರೆಡ್ಡಿ ಆರೋಪಿಸಿದರು.

More News