Gnanavapi Kannada Inscription : ಜ್ಞಾನವಾಪಿ ಕನ್ನಡ ಶಿಲಾಶಾಸನಕ್ಕೂ, ಕರ್ನಾಟಕಕ್ಕೂ ಇರುವ ನಂಟೇನು?

ಉತ್ತರ ಪ್ರದೇಶ: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವಾಲಯವಿರುವ ಕುರುಹುಗಳು ಪತ್ತೆಯಾಗಿವೆ ಅಂತ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಮೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿದೆ. ಹಿಂದೂ ದೇವರುಗಳು, ಹಿಂದೂ ಧಾರ್ಮಿಕ ಚಿಹ್ನೆಗಳ ಜೊತೆಗೆ ಕನ್ನಡ , ತೆಲುಗು , ದೇವನಾಗರಿ ಲಿಪಿಯಲ್ಲಿರುವ ಶಿಲಾ ಶಾಸನಗಳೂ ಸಿಕ್ಕಿವೆ. ಇದೀಗ ಈ ಕನ್ನಡ ಶಾಸನಗಳ ಕುರಿತಂತೆ ಕರ್ನಾಟಕದಾದ್ಯಂತ ಭಾರೀ ಚರ್ಚೆ ಶುರುವಾಗಿದೆ. ಕನ್ನಡ ಸಾಮ್ರಾಜ್ಯ ಕಾಶಿವರೆಗೂ ವಿಸ್ತರಿಸಿತ್ತಾ ಎಂಬ ಮಾತುಗಳೂ ಕೂಡ ಕೇಳಿ ಬರುತ್ತಿವೆ. ಹಲವು ಇತಿಹಾಸಕಾರರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಜ್ಞಾನವಾಪಿ ಶಿಲಾ ಶಾಸನದ ಮೇಲೆ ಕನ್ನಡ ಬರಹ : ಉತ್ತರ ಪ್ರದೇಶದ ಕಾಶಿ ವಿಶ್ವೇಶ್ವರ ದೇಗುಲದ ಸನಿಹದಲ್ಲೇ ಜ್ಞಾನವಾಪಿ ಮಸೀದಿ ಇದೆ. ಇಲ್ಲಿ ಕನ್ನಡ ಶಿಲಾಶಾಸನ ಪತ್ತೆಯಾಗಿದೆ. ಅಧರಲ್ಲಿ ದೊಡರಸಯ್ಯನ ನರಸಂಣನಭಿಂನಹ ಎನ್ನುವ ಕನ್ನಡ ಬರಹ ಇದೆ ಅಂತ ಮಾಧ್ಯಮಗಳು ವರದಿ ಮಾಡಿವೆ.

ಕೋಲಾರದ ಪಾಳೆಗಾರರ ಶಾಸನವೇ? : ಇದು ಕೋಲಾರ ಮೂಲದ ಪಾಳೆಗಾರರು ಅಥವಾ ಅಧಿಕಾರಿಗಳ ಬರೆಯಿಸಿರೋ ಶಾಸನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಶಾಸನ 16ನೇ ಶತಮಾನಕ್ಕೆ ಸೇರಿದ್ದಾಗಿದೆ. ಕಾಶಿ ವಿಶ್ವನಾಥನಿಗೆ ಗ್ರಾಮ ಅಥವಾ ಜಮೀನನ್ನು ದತ್ತಿ ಬಿಟ್ಟಿರೋ ಬಗ್ಗೆ ಶಾಸನದಲ್ಲಿ ಘೋಷಣೆ ಮಾಡಿರಬಹುದು ಅಂತ ಅಂದಾಜಿಸಲಾಗಿದೆ.

ಕಾಶಿವರೆಗೂ ಇತ್ತ ಕನ್ನಡಿಗರ ನಂಟು? : ಹಿಂದಿನ ಕರ್ನಾಟಕ ಸಾಮ್ರಾಜ್ಯ ಕಾವೇರಿಯಿಂದ ಗೋದಾವರೆಗೂ ಹಬ್ಬಿತ್ತು ಅಂತ ಕವಿರಾಜ ಮಾರ್ಗ ಹೇಳುತ್ತದೆ. ಆದರೆ ಜ್ಞಾನವಾಪಿಯಲ್ಲಿ ಸಿಕ್ಕ ಕನ್ನಡ ಬರಹ ಮತ್ತೊಂದು ಹೊಸ ದಾಖಲೆಯೇ ಆಗಿದೆ. ಈ ಶಿಲಾಶಾಸನದ ಹಿನ್ನೆಯಲ್ಲಿ ಕಾಶಿವರೆಗೂ ಕನ್ನಡಿಗರ ಸಂಬಂಧ ಇತ್ತು ಎನ್ನುವುದು ಸ್ಪಷ್ಟವಾಗಿದೆ.

ಕನ್ನಡ ಶಾಸನದಲ್ಲಿ ಏನಿದೆ? : ಸದ್ಯ ಜ್ಞಾನವಾಪಿಯಲ್ಲಿ ಸಿಕ್ಕಿರುವ ಕನ್ನಡ ಶಾಸನದಲ್ಲಿ ಏನಿದೆ ಎನ್ನುವುದು ಬೆಳಕಿಗೆ ಬಂದಿಲ್ಲ. ಈ ಹಿಂದೆ ಕರ್ನಾಟಕವನ್ನು ಆಳಿದ ಚಾಲುಕ್ಯರು, ರಾಷ್ಟ್ರಕೂಟರು ವಿಜಯನಗರದ ಅರಸರು ಹೊರ ರಾಜ್ಯಗಳ ದೇವಾಲಯಗಳಿಗೆ ಅನೇಕ ರೀತಿಯ ದಾನಗಳನ್ನು ನೀಡಿದ್ದರು. ಆದರೆ ಈ ಕನ್ನಡ ಶಾಸನ ಕಾಶಿ ಬಳಿ ಹೇಗೆ ಬಂತು ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ಅಧ್ಯಯನ ನಡೆದರೆ ಕನ್ನಡಕ್ಕೆ ಮತ್ತೊಂದು ಹಿರಿಮೆ ಸಿಗಬಹುದಾದ ನಿರೀಕ್ಷೆಗಳಿವೆ.

More News