ಬೆಂಗಳೂರು : ಬೆಂಗಳೂರು ನಗರದಲ್ಲಿನ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ 60 ಕಿ. ಮೀ. ಸುರಂಗ ರಸ್ತೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ ಮೂರು ಕಿ. ಮೀ. ರಸ್ತೆಯನ್ನು ಕೂಡಲೇ ಪ್ರಾರಂಭಿಸಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೂಚಿಸಿದ್ದಾರೆ.
ಮೊದಲ ಹಂತವಾಗಿ ಉತ್ತರದಿಂದ ದಕ್ಷಿಣ ಕಾರಿಡಾರ್ ವರೆಗೆ ಸುರಂಗ ರಸ್ತೆ ನಿರ್ಮಾಣಕ್ಕೆ ಸಮ್ಮತಿ ನೀಡಲಾಗಿದೆ. ಮೇಖ್ರಿವತ್ತದಿಂದ ಕೇಂದ್ರಿಯ ರೇಷ್ಮೆ ಮಂಡಳಿಯವರೆಗೆ 27 ಕಿ. ಮೀ. ಸುರಂಗ ರಸ್ತೆಯನ್ನು ನಿರ್ಮಿಸಲು ಅಲ್ಟಿನೋಕ್ ಇಂಡಿಯಾ ಸಂಸ್ಥೆ ಯೋಜನೆ ರೂಪಿಸುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಮಂದಿನ ಬಜೆಟ್ ನಲ್ಲಿ ಸುರಂಗ ರಸ್ತೆ ನಿರ್ಮಿಸಲು ಅನುದಾನ ನೀಡಲಾಗುತ್ತದೆ ಎಂದು ನಿನ್ನೆ ನಡೆದ ಸಭೆಯಲ್ಲಿ ಡಿಸಿಎಂ ತಿಳಿಸಿದ್ದಾರೆ. ಪ್ರತಿ ಕಿ. ಮೀ. ಸುರಂಗ ರಸ್ತೆಗೆ 45 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹೆಚ್ಚು ದೂರು ನಿರ್ಮಿಸಿದರೆ ವೆಚ್ಚ ಸ್ವಲ್ಪ ಕಡಿಮೆಯಾಗಲಿದೆ ಎಂದು ಬಿಬಿಎಂಪಿ ಪ್ರಧಾನ ಇಂಜಿನಿಯರ್ ಬಿ ಎಸ್ ಪ್ರಹ್ಲಾದ್ ತಿಳಿಸಿದ್ದಾರೆ.
ಹೆಬ್ಬಾಳ ಕೆರೆಯ ಮುಂಭಾಗ ವಾಹನಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶವಿರುತ್ತದೆ. ನಂತರ ಹೆಬ್ಬಾಳ ಪಶು ವೈದ್ಯ ಆಸ್ಪತ್ರೆಯ ಬಳಿ ವಾಹನಗಳ ನಿರ್ಗಮನ ಮತ್ತು ಪ್ರವೇಶಕ್ಕೆ ಪಾಯಿಂಟ್ ವ್ಯವಸ್ಥೆಯನ್ನು ಮಾಡವಾಗುವುದು. ಮೇಖ್ರಿ ವೃತ್ತದ ಅರಮನೆ ಮೈದಾನ, ಗಾಲ್ಫ್ ಮೈದಾನ ಮತ್ತು ಮಹಾರಾಣಿ ಕಾಲೇಜಿನ ಬಳಿ ವಾಯಿಂಟ್ ನಿರ್ಮಿಸಲು ಸದ್ಯಕ್ಕೆ ಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.