ಹ್ಯಾಕರ್ ಶ್ರೀಕಿಗೆ ಭದ್ರತೆಗೆ ಸಬ್ ಇನ್ಸ್ ಪೆಕ್ಟರ್ ಕ್ಟರ್ ನಿಯೋಜನೆ : ಶ್ರೀಕೃಷ್ಣ ನಾಪತ್ತೆ, ಎಲ್ಲಿದ್ದಾನೆ ಗೊತ್ತಿಲ್ಲ ಕುಟುಂಬ ಸದಸ್ಯರು

ಬೆಂಗಳೂರು : ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ ಬೆಂಗಳೂರು ನಗರ ಪೊಲೀಸರು ಭದ್ರತೆ ಒದಗಿಸಿದ್ದಾರೆ.ಶ್ರೀಕೃಷ್ಣ ಭದ್ರತೆಗೆ ಒಬ್ಬ ಸಬ್ ಇನ್ಸಪೆಕ್ಟ ರ್ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಮೇರೆಗೆ ನಿಯೋಜನೆ ಮಾಡಿದ್ದಾರೆ.

ಇತ್ತೀಚಗೆ ವಿಪಕ್ಷ ನಾಯಕ ಸಿದ್ದರಾಮಯ್ಯ,ಹಿರಿಯ ವಕೀಲ ಸಂಕೇತ್ ಏಣಗಿ ಅವರು ಶ್ರೀಕಿ ಜೀವ ಕ್ಕೆ ಅಪಾಯವಿದೆ ಪೊಲೀಸ್ ಭದ್ರತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ವಿಪಕ್ಷಗಳ ಆಗ್ರಹಕ್ಕೆ ಹಿನ್ನೆಲೆಯಲ್ಲಿ ಶ್ರೀಕಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಆದರೆ ಶ್ರೀಕಿಗೆ ಭದ್ರತೆ ನೀಡುವ ಸಂಬಂಧ ನಿಯೋಜನೆಗೊಂಡ ಸಬ್ ಇನ್ಸ್‌ಪೆಕ್ಟರ್ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಾರೆ. ಕುಟುಂಬ ಸದಸ್ಯರು ಶ್ರೀಕಿ ಎಲ್ಲಿದ್ದಾನೋ ಗೊತ್ತಿಲ್ಲ,ಜಾಮೀನಿನ ಮೇಲೆ ಬಿಡುಯಾದ ಬಳಿಕ ಆತನು ಮನೆಗೆ ಬಂದಿಲ್ಲವೆಂದು ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ವಿಪರ್ಯಾಸವೆಂದರೆ ಶ್ರೀಕಿ ಭದ್ರತೆಗೆ ನಿಯೋಜನೆಗೊಂಡ ಸಬ್ ಇನ್ಸ್‌ಪೆಕ್ಟರ್ ಪ್ರತಿದಿನ ಆತನ ಮನೆಗೆ ಹೋಗಿ,ವಿಚಾರಿಸಿಕೊಂಡು ಠಾಣೆಗೆ ವಾಪಸಾಗುತ್ತಿದ್ದಾರೆ.ಆದ್ದರಿಂದ ಶ್ರೀಕಿ ಸಂಪರ್ಕಕ್ಕೆ ಇರಬಹುದಾದ ವ್ಯಕ್ತಿಗಳು ಹಾಗೂ ಚಲನವಲನಗಳನ್ನು ಪೊಲೀಸರು ತಮ್ಮ ವಿವಿಧ  ಮೂಲಗ ಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯದಿಂದ ಜಾಮೀನು ಪಡೆದ ಆರೋಪಿ ಶ್ರೀ ಜೈಲಿನಿಂದ ಬಿಡುಗಡೆಯಾದಾಗಿ ನಿಂದಲೂ ಮನೆಗೆ ತೆರಳಿಲ್ಲ.ಎಲ್ಲಿಗೆ ತೆರಳಿದ್ದಾನೆ,ಬರಿಗೈಯಲ್ಲಿ ಜೈಲಿನಿಂದ ಬಿಡುಗಡೆಯಾದ ವನು ಯಾರು ಕರೆದುಕೊಂಡು ಹೋದರು.ರಹಸ್ಯ ಸ್ಥಳದಲ್ಲಿದ್ದಾನೆ ಯೇ,ಅಥವಾ ಬೇರೆಡೆ ಸ್ಥಳಾಂತರಿಸಲಾಗಿದೆಯೇ.ಆತನ ಪ್ರಾಣಕ್ಕೇನಾದರೂ ಅಪಾಯ ಎದುರಾಗಿದೆಯೇ ಎಂಬೆಲ್ಲಾ ಪ್ರಶ್ನೆಗಳು ಉದ್ಬವಿಸಿವೆ.

ಎಲ್ಲದ್ದಕ್ಕೂ ಉತ್ತರ ಹೇಳಬೇಕಾದ ಪೊಲೀಸರು ಯಾವುದೇ ಮಾಹಿತಿ ಇಲ್ಲದೆ ಪೆಚ್ಚು ಮೋರೆ ಹಾಕಿಕೊಂಡು ಸುಮ್ಮನಾಗಿದ್ದಾರೆ.

More News