WE ARE READY TO RECEIVE REPORT TODAY: ಕುಮಾರಸ್ವಾಮಿಯವರ ಇಂತಹ ಧಮ್ಮು, ತಾಕತ್ತು ನೋಡಿದ್ದೇವೆ: ಗೃಹ ಸಚಿವ ಪರಮೇಶ್ವರ್ ಪ್ರತಿಸವಾಲು

ಬೆಂಗಳೂರು : ರಾಜ್ಯ ಬರಗಾಲದಿಂದ ತತ್ತರಿಸಿದೆ, ಪರಿಹಾರಕ್ಕಾಗಿ ಹಣ ಕೇಳಿದ್ದೆವು, 16 ಸಾವಿರ ಕೋಟಿ ಕೇಳಿದ್ದೆವು, ಆದರೆ ಈವರೆಗೂ ಕೇಂದ್ರ ಸರ್ಕಾರ ಈ ಸಂಬಂಧ ಸ್ಪಂದಿಸಿಲ್ಲ ಆದ್ದರಿಂದ ಬಜೆಟ್ ಮೇಲೆ ಏನೂ ನಿರೀಕ್ಷೆ ಇಲ್ಲ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ GST ನಲ್ಲಿ ಎರಡನೇ ಸ್ಥಾನದಲ್ಲಿದೆ, ಆದ್ರೂ ನಮ್ಮ ರಾಜ್ಯಕ್ಕೆ ಸೂಕ್ತ ರೀತಿಯಲ್ಲಿ ಹಣ ಕೊಟ್ಟಿಲ್ಲ, ಬೆಂಗಳೂರು ಪ್ರಪಂಚದ ಗಮನ ಸೆಳೆದಿದೆ, ರಾಜ್ಯಕ್ಕೆ ಕೆಲವು ಯೋಜನೆ ಕೊಡಬೇಕು ಎಂದು ಆಗ್ರಹಿಸಿದರು.
ರಾಜಕೀಯ ಒಂದು ಕಡೆ ಇರಬಹುದು, ಬೆಂಗಳೂರು ದೇಶದ ಕಿರೀಟ ಇದ್ದಂತೆ, ಎಲ್ಲಾ ಕ್ಷೇತ್ರದಲ್ಲಿ ಅನೇಕ ಸಂದರ್ಭದಲ್ಲಿ ಪ್ರಧಾನಿಗಳೇ ಬಂದಿದ್ದಾರೆ, ಪ್ರಧಾನಿಗಳೇ ಇಲ್ಲಿಗೆ ಬಂದಿದ್ದಾರೆ, ಕರ್ನಾಟಕಕ್ಕೆ ಏನಾದ್ರೂ ಹೊಸ‌ ಯೋಜನೆ ಕೊಡುವ ನಿರೀಕ್ಷೆ ಇದೆ ಎಂಬ ಆಶಾವಾದ ವ್ಯಕ್ತಪಡಿಸಿದರು.
ಹಣಕಾಸು ಸಚಿವರು ನಮ್ಮ‌ ರಾಜ್ಯದಿಂದ ಸ್ಪರ್ಧಿಸಿ ಗೆದ್ದಿದ್ದಾರೆ, ನಮ್ಮ‌ನಿರೀಕ್ಷೆಯಂತೆ ಏನು ಮಾಡ್ತಾರೆ ನೊಡೋಣ ಎಂದರು.

ಸೈಬರ್ ಸೆಂಟರ್ ಆಗಬೇಕಾಗಿದೆ
ರಾಜ್ಯಗೃಹ ಇಲಾಖೆಗೆ ಸೈಬರ್ ಸೆಂಟರ್ ಮಾಡಬೇಕಿದೆ, ಈಗಾಗಲೇ FSL ಸೆಂಟರ್ ಕೊಟ್ಟಿದ್ದಾರೆ, ಸೈಬರ್ ಸೆಂಟರ್ ಮಾಡುವ ಬೇಡಿಕೆ ಇದೆ ಎಂದರು.
ಇಂತ ಧಮ್ಮು, ತಾಕತ್ತು ತುಂಬಾ ನೋಡಿದ್ದೇವೆ
ಕಾಂತರಾಜ ಆಯೋಗ ವರದಿ ಸ್ವೀಕಾರ ವಿಚಾರವಾಗಿ ತಾಕತ್ತಿದ್ರೆ ವರದಿ ಸ್ವೀಕಾರ ಮಾಡುವಂತೆ ಕುಮಾರಸ್ವಾಮಿ ಸವಾಲ್ ಹಾಕಿರುವ ಸಂಬಂಧ ಮಾತನಾಡಿದ ಅವರು, ಇಂತ ಧಮ್ಮು, ತಾಕತ್ತು ತುಂಬಾ ನೋಡಿದ್ದೇವೆ ಎಂದು ಪ್ರತಿ ಸವಾಲು ಹಾಕಿದರು.
168 ಕೋಟಿ ಕೊಟ್ಟು ಸಮೀಕ್ಷೆ ಮಾಡಿ,‌ ವರದಿ ತಯಾರು ಮಾಡಿದ್ದೇವೆ, ಸ್ವೀಕಾರ ಮಾಡಲು ಅಂತಲೇ ವರದಿ ತಯಾರು ಮಾಡಿರೋದು, ಜಯಪ್ರಕಾಶ್ ಹೆಗಡೆ ಇವತ್ತೇ ಕೊಟ್ರೇ, ಇವತ್ತೇ ವರದಿ ಸ್ವೀಕಾರ ಮಾಡ್ತೀವಿ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದರು.

More News

You cannot copy content of this page