ಲಸಿಕೆ ಹಾಕಲು ಬಂದ ವೈದ್ಯರನ್ನು ನೋಡಿ ಮಹಿಳೆ ಪರಾರಿ

ಚಿತ್ರದುರ್ಗ : ಕೊರೊನಾ ಲಸಿಕೆ ಪ್ರತಿಯೊಬ್ಬರೂ ಹಾಕಿಸಬೇಕೆಂಬ ಕಾರಣದಿಂದ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಗೆ ಟಾರ್ಗೇಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ತಂಡ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಿವೆ.

ಆದರೆ, ಇಲ್ಲೊಬ್ಬರು ಲಸಿಕೆಯನ್ನು ಹಾಕಲು ನಿರಾಕರಿಸಿ, ವೈದ್ಯರಿಂದ ತಪ್ಪಿಸಿ ಓಡೋಡಿ ಹೋದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕರೋನಾ ಲಸಿಕೆ ಹಾಕಲು ಮೊಳಕಾಲ್ಮೂರು ಅರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿದ್ದರು.

ಈ ಸಂದರ್ಭದಲ್ಲಿ  ವೈದ್ಯಕೀಯ ಸಿಬ್ಬಂದಿ ಜೊತೆಗೆ ರೈತರು ಮಾತಿನ ಚಕಮಕಿ ನಡೆಸಿದರು. ಅಲ್ಲದೆ, ನಾವು ಹೀಗೆಯೇ ಸಾಯುತ್ತೇವೆ ಅದ್ರೆ ಲಸಿಕೆ ಮಾತ್ರ ಬೇಡ ಎಂದು ವೈದ್ಯರನ್ನು ನೋಡಿ ಮಹಿಳೆಯೊಬ್ಬರು ಓಡೋಡುತ್ತಿದ್ದ ದೃಶ್ಯ ಸೆರೆಯಾಗಿದೆ.

ನಮಗೆ ಲಸಿಕೆ ಹಾಕಲು ಬಂದ್ರೆ ಸುಮ್ಮನೆ ಇರೋಲ್ಲ ನೋಡು, ಅಂತ ಮಹಿಳೆ ಅಕ್ರೋಶದಿಂದ ಓಡಿದ ವಿಡಿಯೋ ಈಗ ಭಾರೀ  ವೈರಲ್ ಆಗಿದೆ. ಓಡುತ್ತಿರೋ ಮಹಿಳೆಯನ್ನ ವೈದ್ಯಕೀಯ ಸಿಬ್ಬಂದಿ ಹಿಂಬಾಲಿಸಿದರು. ಆದರೆ, ಆಕೆ ವೈದ್ಯರ ಕೈಗೆ ಸಿಗದೇ ಓಡಿ ಹೋಗಿದ್ದಾರೆ. ಚಿತ್ರದುರ್ಗ ತಾಲೂಕಿನ ಮೊಳಕಾಲ್ಮೂರು ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಈ ಘಟನೆ ನಡೆದಿದೆ.

More News