BJP IS DOING DISTORT MY STATEMENT: ನನ್ನ ಹೇಳಿಕೆ ಬಹಳ ಸ್ಪಷ್ಟವಾಗಿದೆ: ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ: ಸಂಸದ ಡಿ ಕೆ ಸುರೇಶ್ ಆಕ್ಷೇಪ

ಬೆಂಗಳೂರು : ನನ್ನ ಹೇಳಿಕೆ ಬಹಳ ಸ್ಪಷ್ಟವಾಗಿದೆ, ಹೇಳಿಕೆಯನ್ನು ತಿರುಚುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ, ಹಾಗಾಗಿ ಉತ್ತರ ಕೊಡುವ ಅವಶ್ಯಕತೆಯಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ಸದಾಶಿವನಗರದ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಹೋರಾಟ ಯಶಸ್ವು ಕಾಣಲಿ ಎಂದು ವ್ಯಂಗ್ಯವಾಡಿದರು.
ಅವರವರ ಭಾವನೆ ಹೇಳಲು ಎಲ್ಲರಿಗೂ ಹಕ್ಕಿದೆ, ಹೇಳಿಕೆ ತಿರುಚಿ ರಾಜಕಾರಣ ಮಾಡುತ್ತಿದ್ದಾರೆ, ಮಾದ್ಯಮಗಳಿಗೆ ನಾನು‌ ಮನವಿ ಮಾಡುತ್ತೇನೆ, ನನ್ನ ಹೇಳಿಕೆಯನ್ನ ಸ್ಪಷ್ಟವಾಗಿ ರಾಜ್ಯ ಮತ್ತು ದೇಶದ ಜನತೆಗೆ ತೋರಿಸಬೇಕು ಎಂದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ, ಮಾದ್ಯಮಗಳು ಕೆಲವರನ್ನ ಗುರಿ ಮಾಡುತ್ತಿರುವುದು ಸರಿನಾ ತಪ್ಪಾ ಎಂದು ವಿಶ್ಲೇಷಣೆ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು. ದೆಹಲಿಯ ಹೋರಾಟದ ಬಗ್ಗೆ ಸಿಎಂ ಹಾಗೂ ಪಕ್ಷದ ಅಧ್ಯಕ್ಷರನ್ನು ಕೇಳಬೇಕು ಎಂದು ತಿಳಿಸಿದರು.

More News