SHETTER AND MUNENAKOPPA ABSENCT FOR EXECUTIVE MEETING: ಗುರು ಶಿಷ್ಯರಿಂದ ಕಾರ್ಯಕಾರಿಣಿ ಸಭೆಗೆ ಗೈರು: ಸಮಾಜಾಯಿಸಿ ನೀಡಿದ ಮಾಜಿ ಸಿಎಂ: ಮುನೇನಕೊಪ್ಪ ಯಾಕೆ ಪಾಲ್ಗೊಂಡಿಲ್ಲ ತಿಳಿದಿಲ್ಲ: ಶೆಟ್ಟರ್

ಹುಬ್ಬಳ್ಳಿ : ಕೌಟುಂಬಿಕ‌ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಆಗಿಲ್ಲ, ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಭಾಗವಹಿಸಿದೇ ಇರುವುದಕ್ಕೆ ಕಾರಣ ತಿಳಿದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದುಾ ಸುದ್ದಿಗಾರರೊಂದಿಗೆ ಮಾತನಾಡಿ, ಗುರು, ಶಿಷ್ಯರು ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹೋಗದೇ ಇರುವುದಕ್ಕೆ ಸಮಜಾಯಿಸಿ ನೀಡಿದರು.
ಈ ಸಂಬಂಧ ನಾನು ಮುಂಚಿತವಾಗಿಯೇ ಪಕ್ಷದ ಅಧ್ಯಕ್ಷರಿಗೆ ತಿಳಿಸಿದ್ದೆ. ನಾನು ಯಾವ ಕಾರ್ಯಕ್ರಮ‌ ತಪ್ಪಿಸಲ್ಲ. ನನ್ನ ಕೌಟುಂಬಿಕ ಕಾರ್ಯಕ್ರಮ ಕಾರಣ ಮೊದಲೇ ಫಿಕ್ಸ್ ಆಗಿತ್ತು. ಮುನೇನಕೊಪ್ಪ ಹೋಗದೆ ಇರೋದು ನನಗೆ ಗೊತ್ತಿಲ್ಲ ಎಂದರು.
ಸಂಸತ್ ನಲ್ಲಿ ಸಂಸದರು ಮಾತನಾಡಬೇಕಿತ್ತು
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಾರ್ಲಿಮೆಂಟ್ ‌ನಲ್ಲಿ ಮಾತನಾಡಬೇಕು, ಅಲ್ಲಿ ಯಾಕೆ ಮಾತಾಡೋಲ್ಲ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ ಕೆ ಸುರೇಶ್ ಮಾತಾಡಬೇಕಿತ್ತು ಎಂದರು.
ನಿಮ್ಮ ಪ್ರತಿಭಟನೆ ರಾಜಕೀಯ ಅನಿಸುತ್ತೆ ಎಂದು ಆರೋಪಿಸಿದ ಅವರು, ಪಕ್ಷಾಂತರ ಆದ ಮೇಲೆ ನಾನು ಬದಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

More News