ನವದೆಹಲಿ : ಮೂರು ದಶಕಗಳ ಹಿಂದೆ ರಮಾನಂದ ಸಾಗರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಪೌರಾಣಿಕ ಸೂಪರ್ ಹಿಟ್ ಧಾರಾವಾಹಿ ರಾಮಾಯಣವನ್ನು ಮತ್ತೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಇದೇ ಫೆಬ್ರವರಿ 5ರಿಂದ ಮತ್ತೆ ಮರುಪ್ರಸಾರ ಕಾಣಲಿದೆ. ಪ್ರತಿದಿನ ಸಜೆ 6 ಗಂಟೆಗೆ ಹಾಗೂ ಮಧ್ಯಾಹ್ನ 12 ಗಂಟೆಗ ಮರುಪ್ರಸಾರ ಮಾಡಲಾಗುವುದು ಎಂದು ದೂರದರ್ಶನ ನ್ಯಾಷನಲ್ ತಿಳಿಸಿದೆ.
ಡಿಡಿ ನ್ಯಾಷನಲ್ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಸ್ಪಷ್ಟಪಡಿಸಿದ್ದು, ಧರ್ಮ, ಪ್ರೀತಿ ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆಯನ್ನು ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ ರಾಮಾಯಣ ಮೂಡಿ ಬರಲಿದೆ ಎಂದು ತಿಳಿಸಿದೆ.

ಶ್ರೀರಾಮನಾಗಿ ನಟ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಾಲಿಯಾ ಮತ್ತು ಸಹೋದರ ಲಕ್ಷ್ಮಣನಾಗಿ ಸುನಿಲ್ ಲಹ್ರಿ ನಟಿಸಿದ್ದರು. ಈ ಧಾರವಾಹಿ ದೇಶಾದಾದ್ಯಂತ ಜನಮನ್ನಣೆ ಗಳಿಸಿತ್ತು. ಕೋರೋನಾ ಸಂದರ್ಭದಲ್ಲಿ ನಡೆದ ಲಾಕ್ ಡೌನ್ ನಲ್ಲಿಯೂ ರಾಮಾಯಣ ಧಾರವಾಹಿಯನ್ನು ಪ್ರಸಾರ ಮಾಡಲಾಗಿತ್ತು.




