WHY VIRAT KOHLI NOT PLAYING TEST…?:ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್-ಅನುಷ್ಕಾ ದಂಪತಿ ..?

ನವದೆಹಲಿ : ಖ್ಯಾತ ಕ್ರಿಕೆಟಿಗ, ರನ್ ಮಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಯ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ತಮ್ಮ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರಂತೆ. ಇದನ್ನು ಮತ್ತೊಬ್ಬ ಕ್ರಿಕೆಟಿಗ ಎ ಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.
ಯ್ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಜಿದ ಸಂದರ್ಶನವೊಂದರಲ್ಲಿ ಈ ವಿಚಾರ ಹೇಳಿದ್ದು ಇದನ್ನು ಎನ್ ಡಿಟಿವಿ ವೆಬ್ ಸೈಟ್ ವರದಿ ಮಾಡಿದೆ. ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್- ಭಾರತ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಯ್ಲಿ ಆಡುತ್ತಿಲ್ಲ. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಎಬಿ ಡಿವಿಲಿಯರ್ಸ್ ಈ ರೀತಿ ಹೇಳಿದ್ದಾರೆ.
ವಿರಾಟ್ ಕೊಯ್ಲಿ ಅವರಿಗೆ ಏನಾಯಿತು. ಎಂಬ ಪ್ರಶ್ನೆಗೆ ಅವರಿಗೆ ಏನೂ ಆಗಿಲ್ಲ, ಇದೀಗ ಅವರು ಮತ್ತೊಂದು ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ. ವಿರುಷ್ಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಮದರ್ಭದಲ್ಲಿ ಕುಟುಂಬಕ್ಕೆ ಸೂಕ್ತ ರೀತಿಯ ಸಮಯ ನೀಡುತ್ತಿರುವುದನ್ನು ನಾನು ಮೆಚ್ಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

More News