UNION GOVERNMENT IS DOING INJUSTICE: ಬಿಜೆಪಿ ಸಂಸದರು ಗಂಡಸರಲ್ಲ: ದೆಹಲಿಗೆ ಹೋಗಿ ಟಿಎೃಡಿಎ ಪಡೆದು ಬರೋದಷ್ಟೇ ಅವರ ಕೆಲಸ: ಶಾಸಕ ಬಾಲಕೃಷ್ಣ ಟೀಕೆ

ರಾಮನಗರ: ಬಿಜೆಪಿ ಸಂಸದರೆಲ್ಲಾ ಗಂಡಸರಲ್ಲ, ಕೇವಲ ಶೋಪೀಸ್ ಗಳು. ದೆಹಲಿಗೆ ಹೋಗೋದು ಟಿಎ-ಡಿಎ ಪಡೆದು ಬರೋದು ಅಷ್ಟೇ ಇವರ ಕೆಲಸ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ರಾಮನಗರದ ನಾಗರಕಲ್ಲುದೊಡ್ಡಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಅನುದಾನ ತಾರತಮ್ಯವನ್ನು ಖಂಡಿಸಿದರಲ್ಲದೆ, ಕರ್ನಾಟಕ ರಾಜ್ಯ ಹೆಚ್ಚು ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಆದರೆ ನ್ಯಾಯಯುತವಾಗಿ ಕೊಡಬೇಕಾದ ಅನುದಾನ ಕೇಂದ್ರ ಸರ್ಕಾರ ನಮಗೆ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿಜೆಪಿಯ ಎಲ್ಲಾ ಸಂಸದರು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ, ಅವರ ಹೆಸರಿನಲ್ಲಿ ಆಯ್ಕೆಯಾಗುತ್ತಿದ್ದಾರೆ. ಅವರಿಗೆ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಇಲ್ಲ, ನೆರೆಯ ತಮಿಳುನಾಡು ಸಂಸದರು ತಮ್ಮ ಹಕ್ಕಿಗಾಗಿ ಮಾಡುವ ಹೋರಾಟವನ್ನು ನೋಡಿ ಕಲಿಯಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟ ನೋಡಿ ಈಗಲಾದರು ಅವರು ಹೋರಾಟ ಮಾಡುತ್ತಾರೆ ನೋಡೋಣ ಎಂದು ಹೇಳಿದರು.

More News