Dating And Relationship Lession: 9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್ ಮತ್ತು ರಿಲೇಷನ್‌ಶಿಪ್ಸ್ ಬಗ್ಗೆ ಪಾಠ!

ಬೆಂಗಳೂರು: 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಡೇಟಿಂಗ್, ಪ್ರೀತಿ, ಸಂಬಂಧಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಇವು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬ ಮಾಹಿತಿಯನ್ನು ಸಿಬಿಎಸ್‌ಇ ಅಧಿಕೃತ ಟ್ವಿಟರ್​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದರ ಪ್ರಕಾರ ಸಿಬಿಎಸ್ ಇ 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಡೇಟಿಂಗ್, ಪ್ರೀತಿ, ಸಂಬಂಧಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಎಲ್ಲಾ ಆರೋಪಗಳಿಗೆ ಸಿಬಿಎಸ್‌ಇ ಟ್ವೀಟ್ ​​ ಮೂಲಕ ಉತ್ತರ ನೀಡಿದೆ. ಮಕ್ಕಳ ಪಠ್ಯ ಪುಸ್ತಕದಲ್ಲಿ ಪ್ರೀತಿ, ಪ್ರೇಮ ಹಾಗೂ ಡೇಟಿಂಗ್​​​ಗೆ ಸಂಬಂಧಿಸಿದ ಮಾಹಿತಿ ಇರುವುದು ಸಂಪೂರ್ಣ ಸುಳ್ಳು ಎಂದು CBSE HQ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಬಹಿರಂಗಪಡಿಸಿದೆ.

ಫೇಕ್​​​ ನ್ಯೂಸ್​​ಗಳು ಇದೀಗಾ ಶಿಕ್ಷಣ ಕ್ಷೇತ್ರದಲ್ಲೂ ಕಂಡುಬಂದಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಿ ಪ್ರೇಮ, ಡೇಟಿಂಗ್​​​ಗೆ ಸಂಬಂಧಿಸಿದ ವಿಷಯ 9 ನೇ ತರಗತಿ ಪಠ್ಯ ಪುಸ್ತಕದಲ್ಲಿ ಇದೆ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಇವು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬ ಮಾಹಿತಿಯನ್ನು ಸಿಬಿಎಸ್‌ಇ ಅಧಿಕೃತ ಟ್ವಿಟರ್​​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

More News