ASHWAMEDHA..! THE VICTIM HERE BUS OR PASSENGERS..?:ಅಶ್ವಮೇಧ ಎಂದರೆ ಕುದುರೆ ಬಲಿ: KSRTC ಬಸ್ಸಿಗೆ ಈ ಹೆಸರಿಟ್ಟವರು ಯಾರೋ..?: ರವಿಕೃಷ್ಣ ರೆಡ್ಡಿ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಗೆ ಪರಿಚಯಿಸಿದ ನೂತನ ಬಸ್ಸುಗಳಿಗೆ ಅಶ್ವಮೇಧ ಎಂದು ಹೆಸರಿಟ್ಟಿದ್ದಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಶ್ವಮೇಧ ಎಂದರೆ ಕುದುರೆ ಬಲಿ ಎಂದರ್ಥ. ಇಲ್ಲಿ ಬಲಿಯಾಗುವುದು ಬಸ್ಸೋ…? ಅಥವಾ ಪ್ರಯಾಣಿಕರೋ.? ಎಂದು ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಸೇವೆಗೆ ಚಾಲನೆ ನೀಡುವಾಗ ನಮ್ಮ ಪ್ರಕಾಂಡ ಪಂಡಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವ ರೀತಿಯ ಮಾನಸಿಕ ಆಧಾತವಾಗಿರಬಹುದು ಎಂದು ಅವರು ಪ್ರಶ್ನಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಸರ್ಕಾರದ ಯಾವ ಮೂರ್ಖ KSRTCಯ ನೂತನ ಸೇವೆಗೆ #ಅಶ್ವಮೇಧ ಎಂದು ಹೆಸರಿಟ್ಟದ್ದು? Idiots. Idiotic. Insensitive. ಅಶ್ವಮೇಧ ಎಂದರೆ ಸರಳ ಕನ್ನಡದಲ್ಲಿ #ಕುದುರೆಬಲಿ ಎಂದು ಅರ್ಥ. ಹಾಗಾಗಿ, ಪ್ರಯಾಣದ ಕೊನೆಯಲ್ಲಿ ಬಲಿಯಾಗುವುದು ಬಸ್ಸೋ, ಪ್ರಯಾಣಿಕರೋ? ಎಂತಹ ಅಸೂಕ್ಷ್ಮ ಹೆಸರು!
ಕನ್ನಡ ಅಥವ ಸಂಸ್ಕೃತ ಗೊತ್ತಿಲ್ಲದ ಯಾರೋ #ಮೂರ್ಖಶಿಖಾಮಣಿ ಈ ಹೆಸರನ್ನು ಪ್ರಸ್ತಾಪಿಸಿ ಇನ್ಯಾವುದೋ ಮೂರ್ಖಶಿಖಾಮಣಿ ಒಪ್ಪಿಗೆ ಕೊಟ್ಟಿರಬೇಕು. ಸರ್ಕಾರದಲ್ಲಿ ಇನ್ನೆಂತೆಂತಹ ಅಜ್ಞಾನಿ ಮತ್ತು ಅವಿವೇಕಿಗಳು ಇದ್ದಾರೋ! 😥.
ಈ ಸೇವೆಗೆ ಚಾಲನೆ ಕೊಡುವಾಗ ನಮ್ಮ ಕನ್ನಡ ವ್ಯಾಕರಣದ ಪ್ರಕಾಂಡ ಪಂಡಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವ ರೀತಿಯ ಮಾನಸಿಕ ಆಘಾತವಾಗಿರಹುದು?
ಈ ಕೂಡಲೇ KSRTC ಅಧಿಕಾರಿಗಳು ಈ ಅನರ್ಥಕಾರಿ ಹೆಸರನ್ನು ಬದಲಾಯಿಸಬೇಕು. ಬೇಕಾದರೆ #ಕುದುರೆಸಾರೋಟು ಎಂದೋ, ಅಥವ ಸಂಸ್ಕೃತ ಮೂಲದ್ದೇ ಆಗಬೇಕು ಎಂದರೆ #ಅಶ್ವಸಂಚಾರ ಎಂದೋ ಬದಲಾಯಿಸಿ.

More News