ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್, ಏಕದಿನ ಮತ್ತು ಟಿ-20 ಎಂಬ ಮೂರು ಮಾದರಿ ಕ್ರಿಕೆಟ್ ನಲ್ಲಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಕೇವಲ ಐವರು ಆಟಗಾರರು ಅಗ್ರಸ್ಥಾನ ಅಲಂಕರಿಸಿದ್ದಾರೆ. ಟೀಮ್ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಐದನೇಯವರಾಗಿ ಸೇರ್ಪಡೆಗೊಂಡಿದ್ದಾರೆ. ಇವರಿಗೂ ಮುನ್ನಾ ಈ ದಾಖಲೆ ಬರೆದ ಇನ್ನಿತರ ನಾಲ್ವರು ಆಟಗಾರರು ಯಾರು ನೋಡೋಣ
ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನೂತನವಾಗಿ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಸೇರ್ಪಡೆಗೊಂಡಿದ್ದಾರೆ. ಇದರಿಂದ ಟೆಸ್ಟ್, ಏಕದಿನ ಮತ್ತು ಟೆಸ್ಟ್ ರ್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಈ ಸಾಧನೆಗೈದ ವಿಶ್ವದ ಐದನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ರಿಕಿ ಪಾಂಟಿಂಗ್ – ಕ್ರಿಕೆಟ್ ಇತಿಹಾಸದಲ್ಲೇ ಮೂರು ಸ್ವರೂಪದ ಕ್ರಿಕೆಟ್ ನಲ್ಲಿ ಅಗ್ರಸ್ಥಾನಕ್ಕೇರಿದ ಮೊದಲ ಆಟಗಾರ ರಿಕಿ ಪಾಂಟಿಂಗ್. ಇವರು 2005ರಲ್ಲಿಯೇ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.

ಮ್ಯಾಥ್ಯೂ ಹೇಡನ್ – ಮ್ಯಾಥ್ಯೂ ಹೇಡನ್ ಈ ಸಾಧನೆ ಮಾಡಿದ ಎರಡನೇ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರವಾಗಿ ಆರಂಭಿಕ ಬ್ಯಾಟರ್ ಆಗಿದ್ದ ಇವರು ರಿಕಿ ಪಾಂಟಿಂಗ್ ನಂತರದ ಸಾಧನೆಯನ್ನು ಮಾಡಿದ್ದಾರೆ. ಇವರು 2007ರಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರರಾಗಿದ್ದಾರೆ.

ಶಕೀಬ್ ಉಲ್ ಹಸನ್ – ಮೂರು ಮಾದರಿಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಹಕೀಬ್ ಅಲ್ ಹಸನ್. ಇವರು ಬಾಂಗ್ಲಾದೇಶದ ಆಲ್ ರೌಂಡರ್. ಇವರು 2015ರಲ್ಲಿ ಈ ಸಾಧನೆ ಮಾಡಿದ್ದರು.

ವಿರಾಟ್ ಕೊಯ್ಲಿ- ಮೂರು ಮಾದರಿಯ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಮೊದಲ ಭಾರತೀಯ ಆಟಗಾರ ವಿರಾಟ್ ಕೊಯ್ಲಿ. ರನ್ ಮಿಷನ್ ಎಂದೇ ಖ್ಯಾತಿ ಪಡೆದಿರುವ ಇವರು 2012ರಲ್ಲಿ ಈ ಸ್ಧಾಧನೆಯನ್ನು ಮಾಡಿದ್ದಾರೆ.

ಜಸ್ ಪ್ರೀತ್ ಬುಮ್ರಾ- ಜಸ್ ಪ್ರೀತ್ ಬುಮ್ರಾ ಈ ಸಾಧನೆ ಮಾಡಿದ ಐದನೇ ಆಟಗಾರರಾಗಿದ್ದಾರೆ. ಟೆಸ್ಚ್ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡುವುದರಿಂದ ಅವರು ವಿಶ್ವದ ಅಗ್ರಮಾನ್ಯ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.




