ಮತ್ತೆ ಕುಸಿತ ಕಂಡ ಚಾಮುಂಡಿ ಬೆಟ್ಟದ ರಸ್ತೆ : ಒಂದು ತಿಂಗಳಲ್ಲಿ ನಾಲ್ಕು ಬಾರಿ ಕುಸಿತ : ಆತಂಕದಲ್ಲಿ ಸ್ಥಳೀಯರು

ಮೈಸೂರು : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದಲ್ಲಿ ಹತ್ತುಹಲವಾರು ಸಮಸ್ಯೆಗಳು ತಲೆದೋರಿವೆ. ಇನ್ನೂ ಮಳೆ ನಿಲ್ಲುವ ಸೂಚನೆಯಂತೂ ಕಾಣುತ್ತಿಲ್ಲ.
ಇದರ ನಡುವೆಯೇ ಮೈಸೂರು ಜಿಲ್ಲೆ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡು ಸ್ವಲ್ಪ ರಸ್ತೆ ಕುಸಿತ ಕಂಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ಕುಸಿತಗೊಂಡಿರುವ ರಸ್ತೆ ಈಗ ಮತ್ತೆ ಬಿರುಕುಗೊಂಡು ಅನಾಹತು ಸೃಷ್ಟಿಸುವ ಹಂತಕ್ಕೆ ತಲುಪಿದೆ.


ಇತ್ತಿಚೆಗಷ್ಟೆ ಈ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಸ್ತೆ ಕುಸಿದು ಬಿದ್ದಿದ್ದರಿಂದ ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಿ ರಸ್ತೆ ಕಾಮಗಾರಿಗೆ ಸರಿಪಡಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದರು. ಆದರೆ ಇದುವರೆಗೂ ರಿಪೇರಿ ಕಾರ್ಯ ಮಾತ್ರ ಕೈಗೊಂಡಿರಲಿಲ್ಲ.

ಇಂದು ಚಾಮುಂಡಿಬೆಟ್ಟದ ನಂದಿ ವಿಗ್ರಹ ನಡುವಿನ ರಸ್ತೆಯಾಗಿದ್ದು, ರಸ್ತೆಯಾಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಓಡಾಟವನ್ನು ಜಿಲ್ಲಾಡಳಿತ ಈ ಹಿಂದೆಯೇ ನಿಷೇಧಿಸಿತ್ತು. ಆದರೆ, ಇಂದು ಇದೇ ರಸ್ತೆ ಮತ್ತೆ ಕುಸಿತ ಕಂಡಿದ್ದರಿಂದ ಸ್ಥಳೀಯರಲ್ಲಿ ಮತ್ತು ಭಕ್ತಾದಿಗಳಲ್ಲಿ ಆತಂಕ ಮೂಡಿದೆ. ಆದಷ್ಟು ಬೇಗನೇ ಈ ರಸ್ತೆಯನ್ನು ದುರಸ್ಥಿ ಮಾಡಬೇಕೆಂದು ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

More News