ಬೆಂಗಳೂರು : ಚಂದನವನದಲ್ಲಿ ಇಂದು ಏಳು ಚಲನಚಿತ್ರಗಳು ರಿಲೀಸ್ ಆಗಿವೆ. ಈ ಪೈಕಿ ಕೆಲವು ಚಿತ್ರಗಳು ನಿರೀಕ್ಷೆಯನ್ನು ಹೆಚ್ಚಿಸಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ,ನಟಿಯರ ಚಿತ್ರ ನೋಡಲು ಮುಗಿಬಿದ್ದಿದ್ದಾರೆ.

ಒಂದು ಸರಳ ಪ್ರೇಮ ಕಥೆ: ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಮೂಲಕ ಜನಮನ ಸೆಳೆದಿದ್ದ ನಿರ್ದೇಶಕ ಸಿಂಪಲ್ ಸುನಿ ಇದೀಗ ಮತ್ತೊಂದು ಸರಳವಾದ ಪ್ರೇಮಕಥೆಯನ್ನು ತಂದಿದ್ದಾರೆ.
ವಿನಯ್ ರಾಜ್ ಕುಮಾರ್ ನಟನೆಯ ಒಂದು ಸರಳ ಪ್ರೇಮ ಕಥೆ ಇಂದು ತೆರೆಕಂಡಿದೆ. ತಮಿಳುನ ಹಿಟ್ ಚಿತ್ರ ವಿಕ್ರಮ್ ನಲ್ಲಿ ನಟಿಸಿದ್ದ ಸ್ವತಿಷಠ ಕೃಷ್ಣನ್ ಸ್ಯಾಂಡಲ್ ವುಡ್ ಪ್ರವೇಶಿಸಿದ್ದು, ರಾಧಾಕೃಷ್ಣ ಧಾರಾವಾಹಿಯ ಮಲ್ಲಿಕಾ ಸಿಂಗ್ ಕೂಡ ನಾಯಕಿಯಾಗಿ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ನಾಯಕಿಯಾಗಿದ್ದಾರೆ. ಈ ಚಿತ್ರ ಮ್ಯೂಸಿಕಲ್ ಲವ್ ಸ್ಟೋರಿ ಹೊಂದಿದೆ.
ನಟ ರಾಘವೇಂದ್ರ ರಾಜ್ ಕುಮಾರ್ ಒಂದು ವಿಶೇಷ ಪಾತ್ರದಲ್ಲಿ ಈ ಚಿತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ.

ಇ-ಮೇಲ್ : ನಟಿ ರಾಗಿಣಿ ದ್ವಿವೇದಿ ನಟಿಸಿರುವ ಇ-ಮೇಲ್ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದೆ. ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರಿನಲ್ಲಿ ತಯಾರಾದ ಈ ಚಿತ್ರ ತಮಿಳು ಮತ್ತು ಕನ್ನಡ ಭಾಷೆಯಲ್ಲಿ ನಿರ್ಮಾಣವಾಗಿ ಇಂದು ತೆರೆ ಕಂಡಿದೆ. ರಾಗಿಣಿ ದ್ವಿವೇದಿಯೊಂದಿಗೆ ಮುರುಗ ಅಶೋಕ್ ನಾಯಕರಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ.
ಮಾಯೆ ಅಂಡ್ ಕಂಪನಿ: ಸೈಬರ್ ಅಪರಾಧಗಳ ಕುರಿತ ಸಿನಿಮಾ ಮಾಯ್ ಅಂಡ್ ಕಂಪನಿ. ಸಂದೀಪ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎಂ ಎನ್ ರವೀಂದ್ರರಾವ್ ತಮ್ಮ ಮಾತೃಶ್ರೀ ವಿಷನ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರ್ಜುನ್ ಕಿಶೋರ್ ಚಂದ್ರ, ಅನುಷಾ ಈ ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

ಜಸ್ಟ್ ಪಾಸ್ : ಕೆಎಂ ರಘು ನಿರ್ದೇಶದ ಸಿನಿಮಾ ಜಸ್ಟ್ ಪಾಸ್, ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳಿಗೆಂದೇ ನಿರ್ಮಿಸಲಾಗಿರುವ ಕಾಲೋಜೊಂದರ ಸುತ್ತ ಹೆಣೆದಿರುವ ಚಿತ್ರ ಕಥೆ ಇದರಲ್ಲಿದೆ. ನಟ ರಂಗಾಯಣ ರಘು ಪ್ರಮುಖ ಭೂಮಿಕೆಯಲ್ಲಿದ್ದು, ಪ್ರಾಂಶುಪಾಲರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶ್ರೀ ಈ ಚಿತ್ರದ ನಾಯಕ, ಪ್ರಣತಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಜೂನಿ: ಪ್ರಥ್ವಿ ಅಂಬಾರ್ ಹಾಗೂ ರಿಷಿಕಾ ನಟಿಸಿರುವ ಜೂನಿ ಚಿತ್ರ ಇಂದು ತೆರೆಕಾಣುತ್ತಿದೆ. ವೈಭವ್ ಮಹಾದೇವ್ ನಿರ್ದೇಶನದ ಈ ಚಿತ್ರ, ಡಿಸೋಸಿಯೇಟಿವ್ ಐಡೆಂಟಿಟಿ ಕಾಯಿಲೆಯಿಂದ ಬಳಲುತ್ತಿರುವ ನಾಯಕಿಯ ಸುತ್ತ ಹೆಣೆದ ಕಥೆ ಇದರಲ್ಲಿದೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿರುವ ಜೂನಿ ಚಿತ್ರ ಇಂದು ತೆರೆ ಕಾಣುತ್ತಿದೆ.

ಪ್ರಣಯಂ: ಪ್ರಣಯಂ ಚಿತ್ರಕ್ಕೆ ಜಯಂತ ಕಾಯ್ಕಿಣಿ ಅವರು ಮೂರು ಪ್ರೇಮಗೀತೆಯಗಳನ್ನು ಬರೆದಿದ್ದು, ಮನೋಮೂರ್ತಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಬಿಚ್ಚುಗತ್ತಿ ಖ್ಯಾತಿಯ ರಾಜವರ್ಧನ್, ನೈನಾ ಗಂಗೂಲಿ ನಟಿಸಿರುವ ಈ ಸಿನಿಮಾ ಮಾಸ್ ಪ್ರೇಮಕಥೆ. ಪರಮೇಶ್ ಅವರ ಬ್ಯಾನರ್ ನಲ್ಲಿ ಈ ಚಿತ್ರಮ ಮೂಡಿಬಂದಿದೆ. ಎಸ್ ದತ್ತಾತ್ರೇಯ ಈ ಚಿತ್ರಕಥೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ನಗುವಿನ ಹೂಗಳ ಮೇಲೆ: ವೆಂಕಟ್ ಭಾರಧ್ವಾಜ್ ನಿರ್ದೇಶನದ ಹಾಗೂ ಅಭಿದಾಸ್ ಮತ್ತು ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸಿರುವ ಸಿನಿಮಾ ಇಂದು ತೆರೆಗೆ ಬಂದಿದೆ. ಶ್ರೀ ಸತ್ಯಸಾಯಿ ಆರ್ಟ್ಸ್ ಲಾಂಛನದಲ್ಲಿ ಕೆ ಕೆ ರಾಧಾಮೋಹನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.




