I DONE BIG MISTAKE SAYS AB DE VILLIERS: ವಿರಾಟ್ ಕೊಹ್ಲಿ ಬಗ್ಗೆ ಸುಳ್ಳು ಮಾಹಿತಿ ಹೇಳಿ ದೊಡ್ಡ ತಪ್ಪು ಮಾಡಿದ್ದೇನೆ: ಏನು ನಡೆಯುತ್ತಿದೆಯಾ ಯಾರಿಗೂ ಗೊತ್ತಿಲ್ಲ: ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್

ಜೋಹಾನ್ಸ್ ಬರ್ಗ್ : ಟೀಮ್ ಇಂಡಿಯಾದ ರನ್ ಮಿಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಅವರು ಟೆಸ್ಟ್ ಪಂದ್ಯಗಳಲ್ಲಿ ಆಡದೇ ಇರುವುದಕ್ಕೆ ನಾನು ಸುಳ್ಳು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಹಂಚಿಕೊಳ್ಳುವುದರ ಮೂಲಕ ದೊಡ್ಡ ತಪ್ಪು ಮಾಡಿದ್ದೇನೆ ಎಂದು ದಕ್ಷಿಣ ಆಫ್ರಿಕಾ ತಂಡ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಭಾರತ ಐದು ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನಾ ಅವರು ವೈಯಕ್ತಿಕ ಕಾರಣ ನೀಡಿ ದಿಢೀರ್ ಆಗಿ ಸರಣಿಯಿಂದ ಹಿಂದೆ ಸರಿದ್ದಿದ್ದರು. ಅವರ ಈ ವಿಶ್ರಾಂತಿಯ ಬಗ್ಗೆ ಹಲವು ಉಹಾಪೋಹಗಳು ಎದ್ದಿದ್ದವು. ಈ ಮಧ್ಯೆ ಎಬಿಡಿ ಅವರ ಹೇಳಿಕೆ ಕೊಹ್ಲಿ ಅವರ ಅಭಿಮಾನಿಗಳಿಗೆ ಸಂತಸ ತಂದಿತ್ತು.
ವಿರುಷ್ಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಎಬಿಡಿ ಹೇಳಿಕೆ ನೀಡಿದ್ದರು.

ಆದರೆ, ಇದೀಗ ಎಬಿಡಿ ಮತ್ತೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ದೊಡ್ಡ ತಪ್ಪು ಮಾಡಿದ್ದೇನೆ. ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ಅದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅವರಿಬ್ಬರ ನಡುವೆ ಅಲ್ಲಿ ಏನು ನಡೆಯುತ್ತಿದೆಯೋ ಎಂದು ಯಾರಿಗೂ ಗೊತ್ತಿಲ್ಲ, ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹಾರೈಸಬಲ್ಲೆ ಎಂದು ಎಬಿಡಿ ತಿಳಿಸಿದ್ದಾರೆ. ಇದೀಗ ವಿರಾಟ್ ವಿಶ್ರಾಂತಿ ಪಡೆಯಲು ಕಾರಣ ಏನೇ ಇದ್ದರೂ ಮುಂಬರುವ ದಿನಗಳಲ್ಲಿ ಅವರು ಮತ್ತಷ್ಟು ಬಲಿಷ್ಟರಾಗಿ, ಆರೋಗ್ಯವಂತರಾಗಿ, ತಾಜಾತನದಿಂದ ಕ್ರಿಕೆಟ್ ಜಗತ್ತಿಗೆ ಬರಲಿ ಮತ್ತೆ ಅವರು ತಮ್ಮದೇ ಆದ ಛಾಪು ಮೂಡಿಸಲಿ ಎಂದು ಎಬಿ ಡಿ ವಿಲಿಯರ್ಸ್ ಹಾರೈಸಿದ್ದಾರೆ.

More News