ನವದೆಹಲಿ : ಒಂದೇ ಪಕ್ಷದಲ್ಲಿದ್ದರೂ ಕೂಡ ಬದ್ದ ವೈರಿಗಳಾದ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನವದೆಹಲಿಯಲ್ಲಿ ಮುಖಾಮುಖಿಯಾದರು.
ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಲು ಬಿ ವೈ ವಿಜಯೇಂದ್ರ ಅವರ ನಿವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಉಪಸ್ಥಿತರಿದ್ದರು.
Had a fruitful meeting with senior Union Minister for Parliamentary Affairs, Coal, and Mines Shri @JoshiPralhad ji in New Delhi.
— Vijayendra Yediyurappa (@BYVijayendra) February 9, 2024
Alongside our party leaders we deliberated on preparations aligning our efforts to ensure success across all fronts.
ಕೇಂದ್ರ ಸಂಸದೀಯ ವ್ಯವಹಾರ,… pic.twitter.com/atWY4pZ6mC
ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ವಿಜಯೇಂದ್ರ ಮತ್ತು ಪ್ರಹ್ಲಾದ್ ಜೋಶಿ ಮಾತುಕತೆ ನಡೆಸಿದರು. ಆದರೆ, ಯತ್ನಾಳ್ ಅವರೊಂದಿಗೆ ಯಾವುದೇ ಮಾತುಕತೆಯಾಗಿಲ್ಲ ಎಂದು ತಿಳಿದುಬಂದಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಈ ಭೇಟಿಯ ಬಗ್ಗೆ ವಿಶೇಷ ಉಲ್ಲೇಖ ಮಾಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಎಲ್ಲಾ ವಿಚಾರಗಳನ್ನು ಜೆಪಿ ನಡ್ಡಾ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ವಿಜಯೇಂದ್ರ ಫೋಟೋ ಹಾಗೂ ಮಾಹಿತಿಯನ್ನು ಅಪ್ ಲೋಡ್ ಮಾಡಿದ್ದು, ಜೋಶಿಯವರನ್ನು ಭೇಟಿ ಮಾಡಿದ್ದೇನೆ. ಈ ಸಂದರ್ಭದಲ್ಲಿ ಸಂಸದರು, ಮಾಜಿ ಸಂಸದರು ಮತ್ತು ಮಾಜಿ ಸಚಿವರು ಉಪಸ್ಥಿತರಿದ್ದರು ಎಂದು ಬರೆದಿದ್ದಾರೆ.
ಇಲ್ಲಿ ಯಾರ ಹೆಸರನ್ನು ಅವರು ಉಲ್ಲೇಖ ಮಾಡಲಿಲ್ಲ. ಇದನ್ನು ಗಮನಿಸಿದರೆ ಇಬ್ಬರ ಸಿಟ್ಟು ಹಾಗೆಯೇ ಇದೆ. ಇನ್ನೂ ಆರಿಲ್ಲ ಎಂದು ತಿಳಿದುಬಂದಿದೆ.




