AMITABH BACHCHAN IN AYODHYA: ಅಯೋಧ್ಯೆ ರಾಮಮಂದಿರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಪ್ರಾರ್ಥನೆ

ಅಯೋಧ್ಯೆ: ಖ್ಯಾತ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ರಾಮಮಂದಿರಕ್ಕೆ ತೆರಳಿ ಶ್ರೀ ಬಾಲರಾಮನ ದರ್ಶನ ಪಡೆದರಲ್ಲದೆ, ವಿಶೇಥ ಪ್ರಾರ್ಥನೆ ಸಲ್ಲಿಸಿದರು.

ಶುಕ್ರವಾರ ಮಧ್ಯಾಹ್ನ ನೇರವಾಗಿ ವಿಮಾನದ ಮೂಲಕ ಅಯೋಧ್ಯೆಯಲ್ಲಿ ಬಂದಿಳಿದ ಅವರು, ನೇರವಾಗಿ ದೇವಾಲಯಕ್ಕೆ ತೆರಳಿ ಭಗವಂತನ ದರ್ಶನ ಪಡೆದರು. ದೇವಾಲಯದ ಆವರಣದಲ್ಲಿಯೇ ಸುಮಾರು ಅರ್ಧ ಗಂಟೆ ಕಳೆದ ಅವರು, ದೇಗುಲದ ವಿನ್ಯಾಸವನ್ನು ಕಣ್ತುಂಬಿಕೊಂಡರು.

ಜನವರಿ 22 ರಂದು ನಡೆದ ಬಾಲ ರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲೂ ಅಮಿತಾಭ್ ಪಾಲ್ಗೊಂಡಿದ್ದರು.

#amitabhbachchan #ayodhya #sriramamandir #temple #bollywood #actor

More News