ಎರಡು ರೀತಿಯ ಭಾರತ: ಸ್ಟ್ಯಾಂಡ್ ಅಪ್ ಕಮಿಡಿಯನ್ ವೀರ್ ದಾಸ್ ಗೆ ಕೆಲವರ ಬೆಂಬಲ, ಅನೇಕರ ಆಕ್ಷೇಪ

ನವದೆಹಲಿ : ಸ್ಟ್ಯಾಂಡ್ ಅಪ್ ಕಾಮಿಡಿಯನ್ (ವಿಡಂಬನಕಾರ) ವೀರ್ ದಾಸ್ ಅವರು ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿರುವ ಜಾನ್ ಎಫ್ ಕೆನಡಿ ಸಭಾಂಗಣದಲ್ಲಿ ಇತ್ತೀಚೆಗೆ ನೀಡಿದ್ದ ಕಾರ್ಯಕ್ರಮದ ವಿಡಿಯೋಗೆ ಕೆಲವರಿಂದ ಬೆಂಬಲ ಇನ್ನು ಅನೇಕರಿಂದ ಆಕ್ರೋಶ ವ್ಯಕ್ತವಾಗಿದೆ.
ವೀರ್ ದಾಸ್ ಅವರು ಐ ಕಮ್ ಫ್ರಮ್ ಇಂಡಿಯಾ ಎಂಬ ಹೆಸರಿನ ಆರು ನಿಮಿಷಗಳ ವಿಡಿಯೋವನ್ನು ಯ್ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದರು. ಅದೇ ಅವರಿಗೆ ಈಗ ಸಮಸ್ಯೆಯಾಗಿ ಕಾಡತೊಡಗಿದೆ. ವೀರ್ ದಾಸ್ ಅವರು ಪ್ರತಿ ಮಾತಿಗೂ ನಾನು ಎರಡೂ ರೀತಿಯ ಭಾರತದಿಂದ ಬಂದಿದ್ದೇನೆ ಎಂದು ಹೇಳುತ್ತಾ ಹೋಗುತ್ತಾರೆ.
ಹಾಗೆಯೇ ಅವರು, ಐ ಕಮ್ ಪ್ರಮ್ ಇಂಡಿಯಾ ಎಂದು ಹೇಳುತ್ತಿದ್ದಾಗ ಅನೇಕ ಜಲ್ವಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ರೈತರ ಪ್ರತಿಭಟನೆ, ಮಹಿಳೆಯರಿಗೆ ನೀಡುವ ಗೌರವ, ಕೋವಿಡ್ ವಿರುದ್ದದ ಹೋರಾಟ ಮುಂತಾದ ವಿಚಾರಗಳನ್ನು ಅವರು ತಮ್ಮ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು.
ವಿಡಿಯೋ ವೀರ್ ದಾಸ್ ಹೇಳಿರುವ ಅಂಶಗಳು
ಮಾಸ್ಕ್ ಧರಿಸುವ ನಮ್ಮ ಶಾಲಾ ಮಕ್ಕಳು ಕೈಗಳನ್ನು ಹಿಡಿದುಕೊಂಡು ಶಾಲೆಗೆ ನಡೆಯುತ್ತಾರೆ, ಇದೇ ದೇಶದಲ್ಲಿ ಮಾಸ್ಕ್ ಧರಿಸದ ರಾಜಕೀಯ ನಾಯಕರು ಪರಸ್ಪರ ಅಲಂಗಿಸುತ್ತಾರೆ. – I come from india ಅನ್ನುತ್ತಾರೆ

ನಾನು ಬಂದಿರುವ ಭಾರತ ದೇಶದಲ್ಲಿ ಹಗಲಿನ ಹೊತ್ತು ಮಹಿಳೆಯರನ್ನು ಪೂಜಿಸಲಾಗುತ್ತಿದೆ. ರಾತ್ರಿ ಹೊತ್ತು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಾರೆ – I come from india ಎಂದು ಹೇಳುತ್ತಾರೆ.
ಪ್ರತಿಯೊಂದು ಬಾರಿಯೂ ನಮಗೆ ಮಾಹಿತಿಗಳು ಸಿಕ್ಕಾಗಲೆಲ್ಲಾ ನಾವೆಲ್ಲರೂ ಪ್ರಧಾನಮಂತ್ರಿಯ ಬಗ್ಗೆ ಕಾಳಜಿಯನ್ನು ತೋರಿಸುತ್ತೇವೆ. ಆದರೆ, ಪಿಎಂ ಕೇರ್ಸ್ ಬಗ್ಗೆ ಯಾರಿಗೂ ಯಾವ ಮಾಹಿತಿಯೂ ಸಿಗುವುದಿಲ್ಲ- I come from india ಎನ್ನುತ್ತಾರೆ.
ನಾವು ಸಸ್ಯಹಾರಿಗಳು ಎಂದು ಹೆಮ್ಮೆಪಡುತ್ತೇವೆ, ಆದರೆ ತರಕಾರಿಗಳನ್ನು ಬೆಳೆಯುವ ರೈತರ ಮೇಲೆ ಅನ್ಯಾಯ ನಡೆಯುತ್ತದೆ. – I come from india ಎಂದು ಹೇಳುತ್ತಾರೆ.

ಈ ವಿಡಿಯೋಗೆ ಕಾಂಗ್ರೆಸ್ ಮುಖಂಡರಾದ ಕಪಿಲ್ ಸಿಬಲ್, ಶಶಿತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ಜನರ ಪರವಾಗಿ ವೀರ್ ದಾಸ್ ಮಾತನಾಡಿದ್ದಾರೆ ಎಂದು ಶಶಿತರೂರ್ ಹೇಳಿದ್ದಾರೆ. ಎರಡು ರೀತಿಯ ಭಾರತದ ಬಗ್ಗೆ ಮಾತನಾಡುವ ಧೈರ್ಯವನ್ನು ದಾಸ್ ತೋರಿದ್ದಾರೆ ಎಂದು ಟಿಎಂಸಿ ಸಂಸದೆ ಮಹುನಾ ಮೊಯಿತ್ರಾ ತಿಳಿಸಿದ್ದಾರೆ.
ದೇಶವನ್ನು ಅಪಮಾನಿಸುವುದು ನನ್ನ ಉದ್ದೇಶವಲ್ಲ, ಇದು ವಿಭಿನ್ನ ಕೆಲಸಗಳನ್ನು ಮಾಡುವ ಎರಡು ಪ್ರತ್ಯೇಕ ಭಾರದ ಧ್ವಂದ್ವದಕುರಿತಾದ ವಿಡಂಬನೆ ಎಂದು ವೀರ್ ದಾಸ್ ಹೇಳಿದ್ದಾರೆ.
ದಾಸ್ ಮಾತು ಮೆದು ಭಯೋತ್ಪಾದನೆ ಎಂದು ಬಾಲಿವುಡ್ ನಟಿ ಕಂಗನಾ ರನೌತ್, ವೀರ್ ದಾಸ್ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

More News