SAFFRON SHAWLS IN ASSEMBLY: ವಿಧಾನಮಂಡಲದ ಜಂಟಿ ಅಧಿವೇಶನ ಆರಂಭ: ಕೇಸರಿ ಶಾಲು ಧರಿಸಿ, ಜೈ ಶ್ರೀರಾಮ್ ಘೋಷಣೆಯೊಂದಿಗೆ ಸದನಕ್ಕೆ ಬಂದ ಬಿಜೆಪಿಗರು

ಬೆಂಗಳೂರು : ವಿಧಾನ ಮಂಡಲದ ಜಂಟಿಅಧಿದಿವೇಶನ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರನ್ನು ವಿಧಾನಸಭೆ ಅಧ್ಯಕ್ಷ ಯು ಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್ ಕೆ ಪಾಟೀಲ ಮತ್ತಿತರರು ಸ್ವಾಗತಿಸಿದರು.

ಬಿಜೆಪಿ ಹಲವು ಸದಸ್ಯರು ಕೊರಳಿಗೆ ಕೇಸರಿ ಶಾಲು ಧರಿಸಿ ಆಗಮಿಸಿದರು. ಬಿಜೆಪಿ ಶಾಸಕಾಂಗ ಪಕ್ಷದ ಸಿಬ್ಬಂದಿ ಶಾಲು ಹಾಕದೇ ಹಾಗೆಯೇ ಬಂದಿದ್ದ ಬಿಜೆಪಿ ಶಾಸಕರಿಗೆ ಶಾಲುಗಳನ್ನು ನೀಡಿದರು. ವಿಧಾನಸಭೆ ಪ್ರವೇಶಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆಗಳನ್ನು ಬಿಜೆಪಿ ಸದಸ್ಯರು ಕೂಗಿದರು.

More News

You cannot copy content of this page