ಸೌಥ್ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಸಮಂತಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಳೆದ ಆರು ತಿಂಗಳಿಂದ ತೆರೆಯ ಹಿಂದೆ ಸರಿದಿದ್ದ ಸಮಂತಾ ಮತ್ತೆ ಕ್ಯಾಮೆರಾ ಮುಂದೆ ಬರುವುದರ ಬಗ್ಗೆ ತಿಳಿಸಿದ್ದಾರೆ.
ನಟ ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಟೀಕೆಗಳಿಗೆ ತಮ್ಮ ವೃತ್ತಿ ಬದುಕಿನ ನಟನೆಯ ಮೂಲಕವೇ ಉತ್ತರ ನೀಡಿದ ಅವರು, ಪುಷ್ಪ ಚಿತ್ರದಲ್ಲಿ ಸೊಂಟ ಬಳುಕಿಸಿದ ನಂತರ ಅವರ ಲಕ್ ಬದಲಾಗಿತ್ತು.

ಆದರೆ, ಯಶೋಧ ಮತ್ತು ಖುಷಿ ಚಿತ್ರದ ಬಳಿಕ ಅವರು ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿಲ್. ಎರಡೂ ಚಿತ್ರಗಳಲ್ಲಿ ಅವರಿಗೆ ಯಶಸ್ಸು ಕಾಣಲಿಲ್ಲ. ಚಿತ್ರಗಳ ಸೋಲಿನ ಜತೆ ಜತೆಯಲ್ಲಿಯೇ ಅವರು ಅನಾರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಯಿತು.

ಇವೆರಡನ್ನು ಅವರು ಸಹಿಸಿಕೊಳ್ಳಲು ಆರು ತಿಂಗಳುಗಳೇ ಬೇಕಾಯಿತು. ಅದಾದ ಬಳಿಕ ಅವರು ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದೇನೆ ಎಂದಿದ್ದಾರೆ ಸಮಂತಾ. ಇದರಿಂದ ಅವರ ಅಭಿಮಾನಿಗಳು ಮಾತ್ರ ಫುಲ್ ಖುಷ್
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಮ್ ಬ್ಯಾಕ್ ಮಾಡಿರುವ ಕುರಿತು ಮಾಹಿತಿ ನೀಡಿದ ಅವರು, ನಾನು ಬಣ್ಣ ಹಚ್ಚದೇ ಆರು ತಿಂಗಳು ವನವಾಸ ಅನುಭವಿಸಿದ್ದೇನೆ. ಮತ್ತೆ ಶೀಘ್ರದಲ್ಲಿಯೇ ಬಣ್ಣ ಹಚ್ಚುವುದಾಗಿ ತಿಳಿಸಿದ್ದಾರೆ.

ಅನಾರೋಗ್ಯದ ನಿಮಿತ್ತ ಅವರು ಕೇವಲ ವೆಬ್ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದರು. ಟಾಲಿವುಡ್ ನಿಂದ ಬಂದ ಹಲವು ಆಫರ್ ಗಳಿಂದ ಅವರು ದೂರ ಉಳಿದಿದ್ದರು. ಇದೀಗ ಅವರ ರೀ ಎಂಟ್ರಿ ಮಾತ್ರ ಸಕತ್ ಜೋರಾಗಿಯೇ ಇರುತ್ತೆ ಅನ್ನುತ್ತಿದ್ದಾರೆ ಅವರ ಅಭಿಮಾನಿಗಳು.

ನಾನು ಕೊನೆಗೂ ಕೆಲಸಕ್ಕೆ ಹಿಂದಿರುಗುತ್ತಿದ್ದೇನೆ. ಕೆಲವು ತಿಂಗಳಿಂದ ನಾನು ಸಂಪೂರ್ಣವಾಗಿ ಕೆಲಸವಿಲ್ಲದೇ ಇದ್ದೆ. ಆದರೆ ನನ್ನ ಸ್ನೇಹಿತರೊಂದಿಗೆ ಹೊಸದೊಂದು ಕೆಲಸದ ಯೋಜನೆಯಲ್ಲಿದ್ದೆ. ಅದು ಹೆಲ್ತ್ ಪಾಡ್ ಕಾಸ್ಟ್. ಇದು ತೀರಾ ಅನಿರೀಕ್ಷಿತ. ಆದರೆ ಇದು ನಾನು ನಿಜವಾಗಿಯೂ ಪ್ರೀತಿಸುವ ವಿಷಯ ಮತ್ತು ನಾನು ತುಂಬಾ ಭಾವುಕಳಾಗಿದ್ದೇನೆ ಎಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ತಾನು ಮಯೋಸಿಟಿಸ್(ಸ್ನಾಯು ಉರಿಯೂತ) ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಸಮಂತಾ 2022ರಲ್ಲಿ ಹೇಳಿದ್ದರು. ಚಿಕಿತ್ಸೆಗಾಗಿ ಅವರು ಬಿಗ್ ಸ್ಕ್ರೀನ್ ನಲ್ಲಿ ಅಷ್ಟೊಂದು ಸಕ್ರೀಯರಾಗಿರಲಿಲ್ಲ.